ಮಂಗಳೂರು : ಪತ್ರಕರ್ತ ನವೀನ ಸೂರಿಂಜೆ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ನಿನ್ನೆ ತಿರಸ್ಕಾರಗೊಂಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ದಾರಿಯೊಂದೆ ಇವರ ಪಾಲಿಗೆ ಉಳಿದಂತಾಗಿದೆ.
ಪಡಿಲ್ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ ಸೂರಿಂಜೆಯನ್ನು ನವೆಂಬರ್ 7 ರಂದು ಕಂಕನಾಡಿ ಪೊಲೀಸರು ಬಂದಿಸಿದ್ದರು. ನಿನ್ನೆ ಹೋಂ ಸ್ಟೇ ದಾಳಿಗೆ ಸಂಬಂಧಿಸಿ ಪತ್ರಕರ್ತ ನವೀನ ಸೂರಿಂಜೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಅದರಂತೆ ನ್ಯಾಯಾಲಯ ಪೊಲೀಸರು ಸಲ್ಲಿಸಿದ್ದ ಘಟನೆಗೆ ಪೂರಕವಾದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದು ಈ ಆಧಾರದ ಹಿನ್ನಲೆಯಲ್ಲಿ ನವೀನ ಅರ್ಜಿ ತ್ರಿರಸ್ಕೃತ ಗೊಂಡಿದೆ ಎನ್ನಲಾಗಿದೆ. ಇವಿಷ್ಟೇ ಅಲ್ಲದೆ ಸೂರಿಂಜೆ ಬಂಧನಕ್ಕೆ ಪೂರಕವಾದ ಕೆಲವೊಂದು ವೀಡಿಯೋ ದಾಖಲೆಗಳನ್ನು ಕೂಡ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು , ಮತ್ತು ಒಂದು ವೇಳೆ ಸೂರಿಂಜೆ ಗೆ ಜಾಮೀನು ನೀಡಿದರೆ ಸಾಕ್ಷಿ ನಾಶಪಡಿಸಿ ವಿಚಾರಣೆಗೆ ತಡೆಯೊಡ್ಡುವ ಸಾಧ್ಯತೆಗಳಿವೆ ಎಂಬ ಹಿನ್ನಲೆಯಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ ಎನ್ನಲಾಗಿದೆ.
Click this button or press Ctrl+G to toggle between Kannada and English