ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

Friday, October 13th, 2017
mahanagara palike

ಮಂಗಳೂರು: “ಸ್ತ್ರೀಯರು ಪುರುಷರಿಗೆ, ಪುರುಷರು ಸ್ತ್ರೀಯರಿಗೆ ಮಸಾಜ್ ಮಾಡಬಾರದು ಎಂದು ಯಾವ ಕಾನೂನು ಹೇಳುತ್ತದೆ? ಒಂದು ವೇಳೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಕಾನೂನು ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದಲ್ಲವೇ? ಎಂದು ಹೈಕೋರ್ಟ್ ಪಾಲಿಕೆಯನ್ನು ಪ್ರಶ್ನಿಸಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗದಿದ್ದರೂ ಮಸಾಜ್ ಸೆಂಟರ್ ಗಳ ಪರವಾನಿಗೆ ಹೇಗೆ ರದ್ದು ಪಡಿಸಿದ್ದೀರಿ?” ಎಂದು ಮಂಗಳೂರು ಮಹಾನಗರ ಪಾಲಿಕೆ (ಮನಪಾ)ಯ ಆಡಳಿತವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಂಗಳೂರು ಮೇಯರ್ ಕವಿತಾ […]

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕ ಹೈಕೋರ್ಟ್ ಒಪ್ಪಿಗೆ

Tuesday, February 25th, 2014
High-Court

ಬೆಂಗಳೂರು: ಕಾನೂನು ತೊಡಕಿನಿಂದ ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಚುನಾವಣೆಗೆ ಹೈಕೋರ್ಟ್ ಕೊನೆಗೂ ಹಸಿರು ನಿಶಾನೆ ತೋರಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲು ಪಟ್ಟಿಯನ್ನು ಮರು ತಯಾರಿಸುವಂತೆ ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದು, ಶೀಘ್ರದಲ್ಲೇ ಚುನಾವಣೆ ನಡೆಸುವಂತೆ ಆದೇಶಿಸಿದೆ. ಮಾ.25ಕ್ಕೆ ಮುಂದೂಡಿಕೆ: ವಿವಾದಿತ ಮಂಗಳೂರು ನಗರಪಾಲಿಕೆ ಮೇಯರ್ ಹುದ್ದೆಯನ್ನು ಸಾಮಾನ್ಯ ಹಾಗೂ […]

ಶಾಲೆಗಳಿಗೆ ಮಕ್ಕಳ ದಾಖಲು; ರಾಜ್ಯಾದ್ಯಂತ ಅಭಿಯಾನವಾಗಲಿ

Thursday, February 6th, 2014
Enroll-children

ಬೆಂಗಳೂರು: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ 1.70 ಲಕ್ಷ ಮಕ್ಕಳನ್ನು ಶಾಲೆಗೆ  ಕರೆತರುವ ಸಲುವಾಗಿ ಪೋಲಿಯೋ ತಡೆ ಅಭಿಯಾನದ ಮಾದರಿಯಲ್ಲೇ ರಾಜ್ಯಾದ್ಯಂತ ಶಿಬಿರಗಳನ್ನು ನಡೆಸಿ ಮಕ್ಕಳನ್ನು ದಾಖಲು ಮಾಡಿಕೊಳ್ಳುವಂತೆ ಸರ್ಕಾರಕ್ಕೆ  ಹೈಕೋರ್ಟ್ ಸೂಚಿಸಿದೆ. ಮುಂದಿನ ಸಾಲಿಗೆ ದಾಖಲು ಆರಂಭಿಸಲು ಇದು ಸೂಕ್ತ ಸಮಯ. ರಾಜ್ಯಾದ್ಯಂತ ಶಿಬಿರ ನಡೆಸಿ ಮಕ್ಕಳನ್ನು ಅಲ್ಲಿಯೇ ನೇರ ದಾಖಲು ಮಾಡಿಕೊಳ್ಳಬೇಕು. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಜೊತೆಗೆ, 6 ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳನ್ನು ಕೂಡ ಸೇರಿಸಿಕೊಳ್ಳಬೇಕು ಎಂದು ತಿಳಿಸಿದೆ. ಈ ಯೋಜನೆಗೆ ಸ್ಥಳೀಯ ಸಂಸ್ಥೆಗಳು […]

ಅಭಿವೃದ್ಧಿಗೆ ವಿವಿ ಸಿಬ್ಬಂದಿ ಅಸಹಕಾರ…

Thursday, February 6th, 2014
Pf.-Thimmegowda

ಬೆಂಗಳೂರು: ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದೇನೆ. ಆದರೆ, ನಾನು ಪ್ರಯತ್ನಿಸಿದ ಎಲ್ಲ ಕೆಲಸಗಳಿಗೆ ವಿವಿ ಸಿಬ್ಬಂದಿ ಸಂಪೂರ್ಣ ಸಹಕರಿಸಿಲ್ಲ ಎಂಬ ಅಸಮಧಾನ ನನ್ನಲ್ಲೇ ಉಳಿದಿದೆ. ಆದರೂ, ಕಳೆದ ಒಂದು ವರ್ಷದಲ್ಲಿ ನಾನು ವಿವಿಯನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಇದು ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರು ನುಡಿಗಳು.  ಭಾರಿ ವಿವಾದದಲ್ಲಿದ್ದ ಬೆಂಗಳೂರು ವಿಶ್ವವಿದ್ಯಾಲಯವನ್ನು ‘ಶಾಂತನಡೆ’ಯಲ್ಲಿ ಕೊಂಡೊಯ್ಯುವಲ್ಲಿ ಈವರೆಗೂ ತಿಮ್ಮೇಗೌಡ […]

ಪತ್ರಕರ್ತ ನವೀನ್ ಸೂರಿಂಜೆ ಜಾಮೀನು ಅರ್ಜಿ ತಿರಸ್ಕೃತ

Thursday, December 27th, 2012
Naveen Soorinje

ಮಂಗಳೂರು : ಪತ್ರಕರ್ತ ನವೀನ ಸೂರಿಂಜೆ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ನಿನ್ನೆ ತಿರಸ್ಕಾರಗೊಂಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ದಾರಿಯೊಂದೆ ಇವರ ಪಾಲಿಗೆ ಉಳಿದಂತಾಗಿದೆ. ಪಡಿಲ್ ಮಾರ್ನಿಂಗ್  ಮಿಸ್ಟ್ ಹೋಂ ಸ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ  ನವೀನ ಸೂರಿಂಜೆಯನ್ನು ನವೆಂಬರ್ 7 ರಂದು  ಕಂಕನಾಡಿ ಪೊಲೀಸರು ಬಂದಿಸಿದ್ದರು. ನಿನ್ನೆ ಹೋಂ ಸ್ಟೇ ದಾಳಿಗೆ ಸಂಬಂಧಿಸಿ ಪತ್ರಕರ್ತ ನವೀನ ಸೂರಿಂಜೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಅದರಂತೆ ನ್ಯಾಯಾಲಯ ಪೊಲೀಸರು ಸಲ್ಲಿಸಿದ್ದ ಘಟನೆಗೆ ಪೂರಕವಾದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದು […]