ಬಾಂಗ್ಲಾದೇಶದಲ್ಲಿ ಇಸ್ಕಾನ್‌ ದೇವಾಲಯದ ಮೇಲೆ ದಾಳಿ, ಮಂಗಳೂರಿನಲ್ಲಿ ಇಸ್ಕಾನ್‌ ಭಕ್ತರ ಪ್ರತಿಭಟನೆ

4:01 PM, Tuesday, October 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

iskconಮಂಗಳೂರು : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿ ಖಂಡಿಸಿ, ನಗರದ ಆರ್ಯಸಮಾಜ ರಸ್ತೆಯ ಇಸ್ಕಾನ್‌ ಮಂದಿರ ವತಿಯಿಂದ ಮಂಗಳವಾರ ಕೃಷ್ಣನ ಕೀರ್ತನೆಗಳನ್ನು ಹಾಡಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ  ಮಂದಿರದ ಅಧ್ಯಕ್ಷ ಕಾರುಣ್ಯ ಸಾಗರದಾಸ್‌, ಬಾಂಗ್ಲಾದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲಿನ ದಾಳಿ ಅಮಾನುಷವಾದದ್ದು. ಅಲ್ಲಿನ ಹಿಂದುಗಳಿಗೆ ಬೆಂಬಲ ನೀಡಬೇಕು ಎನ್ನುವ ಉದ್ದೇಶದಿಂದ ವಿಶ್ವಾದ್ಯಂತ ಇಸ್ಕಾನ್‌ ದೇವಾಲಯಗಳಲ್ಲಿ ಈ ಪ್ರತಿಭಟನೆ ಆಯೋಜಿಸಲಾಗುತ್ತಿದೆ. ಜಾತಿ ಬೇಧ ಇಲ್ಲದೆ, ಎಲ್ಲರನ್ನು ಒಟ್ಟು ಸೇರಿಸಿ ಮುಂದುವರಿಯುವುದು ಇಸ್ಕಾನ್‌ನ ಆಶಯ. ಆದರೆ ಇಸ್ಕಾನ್‌ ದೇವಾಲಯದ ಮೇಲೂ ದಾಳಿ ನಡೆದಿದಿದ್ದು, ಕೃಷ್ಣ ಮತ್ತು ಗುರುಗಳ ವಿಗ್ರಹಗಳಿಗೆ ಹಾನಿಮಾಡಿ, ಇಬ್ಬರು ಸ್ವಾಮಿಗಳನ್ನು ಹತ್ಯೆ ಮಾಡಲಾಗಿದೆ. ಸಂತ್ರಸ್ತರಿಗೆ ಅಲ್ಲಿನ ಸರ್ಕಾರ ರಕ್ಷಣೆ, ನ್ಯಾಯ ಮತ್ತು ಸಹಾಯವೊದಗಿಸಬೇಕು ಎಂದು ಆಗ್ರಹಿಸಿದರು.

ಕಾಯದರ್ಶಿ ಸನಂದನ ದಾಸ್‌, ಸಂಯೋಜಕ ರೋಹಿಣಿ ಸುತ ದಾಸ್‌, ಭಕ್ತರಾದ ಹರಿಚರಣ್‌ ದಾಸ್‌, ದಿನೇಶ್‌ ಪೈ, ನರಸಿಂಹ ಪ್ರಭು, ಉಮೇಶ್‌ ರಾವ್‌, ಸೋಮಶೇಖರ್‌, ನಿಖಿತ್‌ ಆತ್ಮದಾಸ್‌ ಮೊದಲಾದವರಿದ್ದರು.

ಇಸ್ಕಾನ್‌ ಮಂದಿರದಿಂದ ಕದ್ರಿ ಮೈದಾನದ ವರೆಗೆ ಶಾಂತಿಯುವ ಮೆರವಣಿಗೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಪೊಲೀಸರ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಇಸ್ಕಾನ್‌ ಮಂದಿರದಲ್ಲೇ ಪ್ರತಿಭಟನೆ ನಡೆಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English