IQ ಪರೀಕ್ಷೆಯಲ್ಲಿ ಐನ್‌ಸ್ಟಿನ್‌ ರನ್ನೇ ಮೀರಿಸಿದ ನೇಹಾ

3:34 PM, Friday, March 8th, 2013
Share
1 Star2 Stars3 Stars4 Stars5 Stars
(No Ratings Yet)
Loading...

Albert einsteinಲಂಡನ್ : ಬುದ್ಧಿಮತ್ತೆಯಲ್ಲಿ 12ರ ಹರೆಯದ ಭಾರತೀಯ ಮೂಲದ ಬಾಲಕಿಯೊಬ್ಬಳು ಐನ್‌ಸ್ಟಿನ್‌, ಖ್ಯಾತ ಭೌತವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರನ್ನೂ ಮೀರಿಸಿದ್ದಾಳೆ. ಹಾಲಿ ಬ್ರಿಟನ್‌ ನಿವಾಸಿಯಾಗಿರುವ ಭಾರತೀಯ ಮೂಲದ ನೇಹಾ ರಾಮು ಇತ್ತೀಚೆಗೆ ನಡೆದ ಬುದ್ಧಿಮತ್ತೆ ಪರೀಕ್ಷೆಯಲ್ಲಿ 162 ಅಂಕಕ್ಕೆ 162  ಅಂಕ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾಳೆ.

ಐಕ್ಯೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಐನ್‌ಸ್ಟಿನ್‌, ಖ್ಯಾತ ಭೌತವಿಜ್ಞಾನಿ ಸ್ಟೀಫ‌ನ್‌ ಹಾಕಿನ್ಸ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರನ್ನು ನೇಹಾ ಮೀರಿಸಿದ್ದಾಳೆ. ಇದೀಗ ನೇಹಾ ರಾಮು ಕಡೆಗೆ ಇಡೀ ಜಗತ್ತೇ ತಿರುಗಿ ನೋಡುವಂತಾಗಿದೆ. ನೇಹಾ ಐದು ವರ್ಷದ ಹಿಂದೆ ತನ್ನ ಪೋಷಕರ ಜೊತೆ ಬ್ರಿಟನ್‌ ಗೆ ವಲಸೆ ಹೋಗಿ ಅಲ್ಲೇ ನೆಲೆಸಿದ್ದಾರೆ. ಐನ್‌ಸ್ಟಿನ್‌, ಬಿಲ್‌ ಗೇಟ್ಸ್‌, ಹಾಕಿನ್ಸ್,ಅವರ ಬುದ್ಧಿಮತ್ತೆಯ ಅಂದಾಜು 162ಕ್ಕೆ 160 ಮಾತ್ರ.

ನೇತ್ರ ತಜ್ಞ ದಂಪತಿ ಜಯಶ್ರೀ ಮತ್ತು ರಾಮು ಮುನಿರಾಜು ಅವರ ಪುತ್ರಿ ನೇಹಾ. ಮೆನ್ಸಾ ಐ ಕ್ಯು ಪರೀಕ್ಷೆಯಲ್ಲಿ ಈ ಅಂಕ ಪಡೆಯುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾಳೆ.  ಮೆನ್ಸಾ(Mensa) ಇದೊಂದು ಇಂಗ್ಲೆಂಡ್ ನಲ್ಲಿ 1946ರಲ್ಲಿ ಬ್ಯಾರಿಸ್ಟರ್ ರೋಲ್ಯಾಂಡ್ ಬೆರ್ರಿಲ್ ಹಾಗೂ ವಿಜ್ಞಾನಿ ಕಮ್ ವಕೀಲ ಡಾ ಲ್ಯಾನ್ಸ್ ವೇರ್ ರವರು  ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಬುದ್ಧಿವಂತರ ಒಕ್ಕೂಟ ಸ್ಥಾಪಿಸುವ ಉದ್ದೇಶದಿಂದ ಸ್ಥಾಪಿತವಾದ ಈ ಸಂಸ್ಥೆಯಲ್ಲಿ IQ ಮಟ್ಟ ಅಧಿಕವಾಗಿರುವವರನ್ನು ಇದರ ಸದಸ್ಯತ್ವವ ವನ್ನು ಹೊಂದಿರುತ್ತಾರೆ.ಈಗ ನೇಹಾಳಂತೆ ಸುಮಾರು 110,000 Mensans ಸುಮಾರು 100 ದೇಶಗಳಲ್ಲಿದ್ದಾರೆ.

ಮಗಳ  ಈ ಸಾಧನೆ ಜಯಶ್ರೀ ಮತ್ತು ರಾಮು ಮುನಿರಾಜು ದಂಪತಿಯನ್ನು ಸಂತಸದ ಕಡಲಲ್ಲಿ ತೇಲಿಸಿದೆ. ಮಗಳ ಸಾಧನೆ ನಮ್ಮ ಬಗ್ಗೆ ನಾವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು ನೇಹಾ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಪ್ರಸಿದ್ಧ ಹಾರ್ವಡ್‌ ವಿವಿಯ ಪ್ರವೇಶ ಪಡೆಯಲು 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಇರುವ ಪ್ರವೇಶ ಪರೀಕ್ಷೆಯಲ್ಲಿಯೂ ಆಕೆ 800 ಅಂಕಗಳ ಪೈಕಿ 740 ಅಂಕ ಪಡೆದಿದ್ದಾಳೆ.

ರಜಾ ದಿನಗಳಲ್ಲಿ  ಬ್ರಿಟನ್‌ನಿಂದ ಅಮೆರಿಕಕ್ಕೆ ತೆರಳಿ ಅಲ್ಲಿ ಮನುಷ್ಯನ ಮೆದುಳು ಮತ್ತು ನರವ್ಯವಸ್ಥೆಯ ಬಗ್ಗೆ ನೀಡಲಾಗುವ ತರಬೇತಿ ಶಿಬಿರಕ್ಕೆ ಹಾಜರಾಗುತ್ತಿದ್ದ ನೇಹಾ ಬಾಲ್ಯದಿಂದಲೂ ವಿಶೇಷ ಚಟುವಟಿಕೆಗಳ ಮೂಲಕ ಪೋಷಕರ ಗಮನ ಸೆಳೆದಿದ್ದು  ಇದೀಗ ವಿಶ್ವವೇ ತನ್ನತ್ತ ನೋಡುವಂತೆ ಮಾಡಿದ್ದಾಳೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English