ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಟೌನ್ ಹಾಲ್ ಅಡವು

11:54 PM, Thursday, January 2nd, 2014
Share
1 Star2 Stars3 Stars4 Stars5 Stars
(No Ratings Yet)
Loading...

townhall

ಬೆಂಗಳೂರು : ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಬಿಬಿಎಂಪಿ ಟೌನ್ ಹಾಲ್ ಅಡ ಇಡುವುದಕ್ಕೆ ತೀರ್ಮಾನಿಸಿದೆ. ಹಳೆಯ ಸಾಲ ತೀರಿಸುವುದಕ್ಕೆ ಬಿಬಿಎಂಪಿ ಪಾರಂಪರಿಕ ಕಟ್ಟಡವನ್ನು ಅಡ ಇಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ನವರು ಟೌನ್‌ಹಾಲ್ ಬದಲಿಗೆ ಬೇರೆ ಕಟ್ಟಡವನ್ನು ಅಡವಿಡುವಂತೆ ಸೂಚನೆ ನೀಡಿದ್ದಾರೆ. ಶೇ. 14 ರಂತೆ ಮುಂಚೆ ಪಡೆದ ಸಾಲದ ಮೊತ್ತ ಬಿಬಿಎಂಪಿಯಲ್ಲಿ 200 ಕೋಟಿ. ರೂ. ಮೀರಿದೆ. ಆ ಸಾಲ ತೀರಿಸುವುದಕ್ಕೆ ಈಗ ಇನ್ನೊಂದು ಸಾಲವನ್ನು ಮಾಡುತ್ತಿದೆ.

ಪಾರಂಪರಿಕವಾದ ಈ ಕಟ್ಟಡವನ್ನು ಅಡ ಇಡುತ್ತಿರುವುದಕ್ಕೆ ಸಾರ್ವಜನಿಕರಿಗೆ ತೀವ್ರ ಅಸಮಾಧಾನ ಮೂಡಿಸಿದೆ. ಬೆಂಗಳೂರಿನ ಜನತೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಟೌನ್‌ಹಾಲ್ ಅಡ ಇಡುವುದು ಸರಿಯಲ್ಲ ಎನ್ನಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English