ಅಣ್ಣಾ ಬೇಡಿಕೆ : ಕೊನೆಗೂ ಧ್ವನಿಮತದಿಂದ ಸಮ್ಮತಿಸಿದ ಸರಕಾರ

8:29 PM, Saturday, August 27th, 2011
Share
1 Star2 Stars3 Stars4 Stars5 Stars
(3 rating, 1 votes)
Loading...

Anna Hazare/ ಅಣ್ಣಾ ಹಜಾರೆ

ನವ ದೆಹಲಿ: ಲೋಕಸಭೆಯಲ್ಲಿ ಲೋಕಪಾಲ ಮಸೂದೆಯ ಚರ್ಚೆಯ ನಂತರ ಸಂಸತ್ತಿನಲ್ಲಿ ಧ್ವನಿಮತದ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಲೋಕಪಾಲ ಚರ್ಚೆಯ ನಂತರ ಧ್ವನಿಮತಕ್ಕೆ ಹಾಕುವ ಕೇಂದ್ರ ಸರಕಾರದ ನಿರ್ಧಾರದಿಂದ ಸಂತೋಷವಾಗಿದೆ ಎಂದು ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾದ ನಂತರ ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಅವರ ಪತ್ರದೊಂದಿಗೆ ಕೇಂದ್ರ ಸಚಿವ ವಿಲಾಸರಾವ್ ದೇಶಮುಖ್, ಅಣ್ಣಾ ಹಜಾರೆಯವರ ಭೇಟಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಒತ್ತಾಯಿಸಿ ನಡೆಯುತ್ತಿರುವ 12 ದಿನಗಳ ಅನಿರ್ದಿಷ್ಟಾವದಿ ನಿರಶನಕ್ಕೆ ಅಂತ್ಯಹಾಡಲು ಸರಕಾರ ನಿರ್ಣಯ ಕರಡು ಸಿದ್ಧಪಡಿಸುತ್ತಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಕರಡು ನಿರ್ಣಯದ ಪಠ್ಯದಲ್ಲಿ ಯಾವ ವಿಷಯಗಳನ್ನು ಒಳಗೊಂಡಿರಬೇಕು ಎನ್ನುವ ಬಗ್ಗೆ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಅರುಣ್ ಜೇಟ್ಲಿಯವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಣಬ್ ಮುಖರ್ಜಿ, ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಬನ್ಸಾಲ್ ಹಾಗೂ ಯುಪಿಎ ಮಿತ್ರ ಪಕ್ಷಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಅಣ್ಣಾ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್, ಮನೀಷ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ಮತ್ತು ಕಿರಣ್ ಬೇಡಿಯವರನ್ನು ಪ್ರಣಬ್ ಮುಖರ್ಜಿ ಭೇಟಿ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ಬೇಡಿಕೆಗಳು
* ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕವಾಗಬೇಕು.
* ಸರಕಾರಿ ಕಚೇರಿಗಳಲ್ಲಿ ನಾಗರಿಕ ಸನ್ನದು ಅನುಷ್ಠಾನಕ್ಕೆ ತರಬೇಕು.
* ಕೆಳಹಂತದ ಅಧಿಕಾರಿಗಳನ್ನೂ ಲೋಕಪಾಲ ವ್ಯಾಪ್ತಿಗೆ ತರಬೇಕು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English