ಮಮತಾಗೆ ಕೈಕೊಟ್ಟ ‘ಅಣ್ಣಾ’ ರಾಜಕೀಯ!

Thursday, March 13th, 2014
Mamata-Banerjee

ನವದೆಹಲಿ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮುಂದಿಟ್ಟುಕೊಂಡು ದೆಹಲಿಯಲ್ಲಿ ರಾಜಕೀಯ ಮಾಡಲು ಹೊರಟ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯೋಜನೆ ವಿಫಲವಾಗಿದೆ. ರಾಮಲೀಲಾ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ರ್ಯಾಲಿಗೆ ಅಣ್ಣಾ ಕೈಕೊಟ್ಟಿದ್ದಾರೆ. ಬೆರಳೆಣಿಕೆ ಸಂಖ್ಯೆಯ ಜನರಿಗೆ ಮಮತಾ ಅವರೊಬ್ಬರೇ ಭಾಷಣ ಮಾಡಿ ಹೋಗಿದ್ದಾರೆ. ಅಣ್ಣಾ ಗೈರು ಹಾಜರಾಗಲು ಅನಾರೋಗ್ಯದ ಕಾರಣ ನೀಡಲಾಗುತ್ತಿದೆ. ಆದರೆ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಬೆಂಬಲಿಗ, ಭೂ ಸೇನೆ ನಿವೃತ್ತ ಮುಖ್ಯಸ್ಥ ಜ. ವಿ.ಕೆ. ಸಿಂಗ್ ಪ್ರಭಾವವೇ ರ್ಯಾಲಿಯಿಂದ ಅಣ್ಣಾ ದೂರ ಉಳಿಯಲು […]

ಅಣ್ಣಾ ಬೇಡಿಕೆ : ಕೊನೆಗೂ ಧ್ವನಿಮತದಿಂದ ಸಮ್ಮತಿಸಿದ ಸರಕಾರ

Saturday, August 27th, 2011
Anna Hazare/ ಅಣ್ಣಾ ಹಜಾರೆ

ನವ ದೆಹಲಿ: ಲೋಕಸಭೆಯಲ್ಲಿ ಲೋಕಪಾಲ ಮಸೂದೆಯ ಚರ್ಚೆಯ ನಂತರ ಸಂಸತ್ತಿನಲ್ಲಿ ಧ್ವನಿಮತದ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಲೋಕಪಾಲ ಚರ್ಚೆಯ ನಂತರ ಧ್ವನಿಮತಕ್ಕೆ ಹಾಕುವ ಕೇಂದ್ರ ಸರಕಾರದ ನಿರ್ಧಾರದಿಂದ ಸಂತೋಷವಾಗಿದೆ ಎಂದು ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾದ ನಂತರ ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಅವರ ಪತ್ರದೊಂದಿಗೆ ಕೇಂದ್ರ ಸಚಿವ ವಿಲಾಸರಾವ್ ದೇಶಮುಖ್, ಅಣ್ಣಾ ಹಜಾರೆಯವರ ಭೇಟಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ ಜಾರಿಗೊಳಿಸುವಂತೆ […]

ಅಣ್ಣಾ ಹಜಾರೆ ಬೆಂಬಲಿಗರಿಂದ ಮೈಕಿಗಾಗಿ ಕಿತ್ತಾಟ

Wednesday, August 17th, 2011
Anna Hazare followers / ಅಣ್ಣಾ ಹಜಾರೆ ಬೆಂಬಲಿಗರು

ಮಂಗಳೂರು : ದೆಹಲಿಯಲ್ಲಿ ಅಣ್ಣಾ ಹಜಾರೆ ಕೇಂದ್ರ ಸರ್ಕಾರದ ವಿರುದ್ದ ಸಮರ ಸಾರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ, ಮಂಗಳೂರಲ್ಲಿ ಅಣ್ಣಾ ಹಜಾರೆ ಬೆಂಬಲಕ್ಕೆ ಬಂದಿದ್ದ ಎರಡು ಬಣಗಳು ಮೈಕಿಗಾಗಿ ಸೆಣಸಾಟ ನಡೆಸಿ ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡ ಘಟನೆ ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯಿತು. ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು. ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳು ತುದಿಗಾಲಲ್ಲಿ ನಿಂತಿದ್ದವು. […]