ಅಣ್ಣಾ ಬೇಡಿಕೆ : ಕೊನೆಗೂ ಧ್ವನಿಮತದಿಂದ ಸಮ್ಮತಿಸಿದ ಸರಕಾರ

Saturday, August 27th, 2011
Anna Hazare/ ಅಣ್ಣಾ ಹಜಾರೆ

ನವ ದೆಹಲಿ: ಲೋಕಸಭೆಯಲ್ಲಿ ಲೋಕಪಾಲ ಮಸೂದೆಯ ಚರ್ಚೆಯ ನಂತರ ಸಂಸತ್ತಿನಲ್ಲಿ ಧ್ವನಿಮತದ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಲೋಕಪಾಲ ಚರ್ಚೆಯ ನಂತರ ಧ್ವನಿಮತಕ್ಕೆ ಹಾಕುವ ಕೇಂದ್ರ ಸರಕಾರದ ನಿರ್ಧಾರದಿಂದ ಸಂತೋಷವಾಗಿದೆ ಎಂದು ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾದ ನಂತರ ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಅವರ ಪತ್ರದೊಂದಿಗೆ ಕೇಂದ್ರ ಸಚಿವ ವಿಲಾಸರಾವ್ ದೇಶಮುಖ್, ಅಣ್ಣಾ ಹಜಾರೆಯವರ ಭೇಟಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ ಜಾರಿಗೊಳಿಸುವಂತೆ […]

ಅಣ್ಣಾ ಹಜಾರೆ ಸತ್ಯಾಗ್ರಹವನ್ನು ಬೆಂಬಲಿಸಿ ಬೀದಿಗಿಳಿದ ವಿದ್ಯಾರ್ಥಿಗಳು

Thursday, August 18th, 2011
Anna Hajare students suport/ವಿದ್ಯಾರ್ಥಿಗಳ ಬೆಂಬಲ

ಮಂಗಳೂರು : ಅಣ್ಣಾ ಹಜಾರೆ ಅವರು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಸತ್ಯಾಗ್ರಹವನ್ನು ಬೆಂಬಲಿಸಿ ಹಾಗೂ ಅವರ ಬಂಧನವನ್ನು ಖಂಡಿಸಿ ಬುಧವಾರ ಮಂಗಳೂರಿನ ವಿವಿಧ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೃಹತ್‌ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ, ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌, ಆಲ್‌ ಇಂಡಿಯಾ ಕ್ರಿಶ್ಚಿಯನ್‌ ಯೂನಿವರ್ಸಿಟಿ ಸ್ಟೂಡೆಂಟ್ಸ್‌ ಯೂನಿಯನ್‌ (ಎಐಸಿಯುಎಸ್‌) ಸೈಂಟ್‌ ಎಲೋಶಿಯಸ್‌ ಕಾಲೇಜು […]