ಕೊರೋನಾ ವೈರಸ್‌ನಿಂದಾಗಿ ಅಕ್ಷರದಾಸೋಹ ನೌಕರರರಿಗೆ ವೇತನವಿಲ್ಲ, ಪ್ರತಿಭಟನೆ

4:56 PM, Friday, August 7th, 2020
Share
1 Star2 Stars3 Stars4 Stars5 Stars
(No Ratings Yet)
Loading...

cituಮಂಗಳೂರು : ಮುಂದೆ ಸಿಐಟಿಯು ನೇತೃತ್ವದ ಅಕ್ಷರದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಸಂಘದ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಮಾತನಾಡುತ್ತಾ, ಕೊರೋನಾ ವೈರಸ್‌ನಿಂದಾಗಿ ಸ್ಕೀಂ ಕಾರ್ಮಿಕರಲ್ಲಿ ಒಂದು ವಿಭಾಗವಾದ ಅಕ್ಷರ ದಾಸೋಹ ನೌಕರರಿಗೆ ಕೆಲಸ ಹಾಗೂ ವೇತನವಿಲ್ಲವಾಗಿದೆ. ಕೊರೋನಾ ವೈರಸ್ ಲಾಕ್‌ಡೌನ್ ಅವಧಿಯ ಹಾಗೂ ಬೇಸಿಗೆ ರಜೆಯ ಪರಿಹಾರವನ್ನು ನೀಡಬೇಕೆಂದು ವಿನಂತಿಸಿದರೂ ಲಕ್ಷಾಂತರ ಕಾರ್ಮಿಕರಿಗೆ ಪರಿಹಾರವನ್ನು ನೀಡಿಲ್ಲ. ಬಿಸಿಯೂಟ ನೌಕರರಿಗೆ ಮುಂದಿನ 6 ತಿಂಗಳ ತನಕ ಕನಿಷ್ಟ ರೂ.7.500/- ರಷ್ಟು ಪರಿಹಾರವನ್ನು ನೇರ ನಗದು ಮಾಡಬೇಕು ಹಾಗೆನೇ ಮುಂದಿನ 6 ತಿಂಗಳ ತನಕ 10 ಕೆ.ಜಿ.ಆಹಾರ ಧಾನ್ಯವನ್ನು ಉಚಿತವಾಗಿ ರೇಶನ್ ಮುಖಾಂತರ ನೀಡಬೇಕೆಂದು ಅವರು ಒತ್ತಾಯಿಸಿದರು.

ಭಾರತ ಕಾರ್ಮಿಕ ಸಮ್ಮೇಳನದ ನಿರ್ಣಯದಂತೆ ಸ್ಕೀಂ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ವೇತನ ಕಾಯಿದೆಯ ಅನ್ವಯ ಮಾಸಿಕವಾಗಿ ರೂ.21.000 ಕನಿಷ್ಟ ಕೂಲಿ ನೀಡಬೇಕಾದಂತಹ ಸರಕಾರ ಎಲ್ಲಾ ರಂಗವನ್ನು ಖಾಸಗೀಕರಣ ಮಾಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕೊರೋನಾ ವಾರಿಯರ್‍ಸ್ ಆಗಿ ಆಶಾ, ಅಂಗನವಾಡಿ ಮತ್ತು ಬಿಸಿಯೂಟ ನೌಕರರನ್ನೂ ಉಪಯೋಗ ಮಾಡಿದ್ದರೂ ಅವರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಅವರಿಗೆ ಈ ಅವಧಿಯಲ್ಲಿ ಕೆಲಸ ಮಾಡುವುದಕ್ಕೆ ನೀಡಬೇಕಾದಂತಹ ವೇತನವನ್ನು ಕೂಡಾ ನೀಡಿಲ್ಲ. ಕೊರೋನಾ ವಾರಿಯರ್‍ಸ್ ಕೆಲಸ ಮಾಡುವ ಸಂದರ್ಭ ಮರಣ ಅಪ್ಪಿದಲ್ಲಿ ಅವರಿಗೆ ಯಾವುದೇ ಪರಿಹಾರದ ಖಾತರಿಯಿಲ್ಲ. ಆದ್ದರಿಂದ ಕನಿಷ್ಟ 10 ಲಕ್ಷದವರೆಗೆ ವಿಮೆಯನ್ನು ಜಾರಿಗೊಳಿಸಬೇಕು. ಹಾಗೆನೇ ಅಕ್ಷರದಾಸೋಹ ಕಾರ್ಮಿಕರಿಗೆ ಕನಿಷ್ಟ ಮಾಸಿಕ ವೇತನವನ್ನು ಕೂಡಲೇ ರಾಜ್ಯ ಸರಕಾರ ನೀಡಬೇಕು ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಸರಕಾರವನ್ನು ಒತ್ತಾಯಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English