ಕೋಟ್ಯಂತರ ಬೆಲೆಬಾಳುವ ದ. ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಕಟ್ಟಡ ಸರಕಾರದ ವಶಕ್ಕೆ

Tuesday, February 15th, 2022
Co operative workers

ಮಂಗಳೂರು  : ನಗರದ ಹೃದಯಭಾಗದಲ್ಲಿ ಮಿನಿ ವಿಧಾನಸೌಧ ಕಟ್ಟಡದ ಬಳಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸ೦ಘದ ಸ್ವಾಧೀನ ಮತ್ತು ಒಡೆತನಕ್ಕೊಳಪಟ್ಟ ಮ೦ಗಳೂರು ತಾಲೂಕು ಅತ್ತಾವರ ಗ್ರಾಮದ ಸರ್ವೆ ನಂ.278/2B ಗೆ ಒಳಪಟ್ಟ 33 ಸೆಂಟ್ಸ್ ಸ್ಥಳದ ಪಹಣಿಯನ್ನು ರದ್ದುಪಡಿಸಿ ಸರಕಾರದ ಹೆಸರಿಗೆ ನಿಹಿತ ಪಡಿಸುವಂತೆ ಹಾಗೂ ಸದರಿ ಸ್ಥಿರಾಸ್ಥಿಯಲ್ಲಿರುವ ಕಟ್ಟಡವನ್ನು ಜಿಲ್ಲಾ ಸಂಘದ ಸ್ವಾಧೀನತೆಯಿಂದ ಬಿಡಿಸಿ ಸರಕಾರದ ವಶಕ್ಕೆ ಪಡೆದು ಅಕ್ರಮ ಎಸಗಿದ ಸಂಬಂಧಪಟ್ಟ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಭೂ ಕಂದಾಯ ಕಾಯ್ದೆ 192 […]

ವೃದ್ಧಾಪ್ಯ ಪಿಂಚಣಿ ಫಲಾನುಭವಿಗಳ ಮನೆ ಬಾಗಿಲಿಗೆ: ಕಂದಾಯ ಸಚಿವ ಅಶೋಕ

Thursday, September 2nd, 2021
R Ashok

ಹೊಸದುರ್ಗ  : ತಾಲ್ಲೂಕು ಕಚೇರಿಗೆ ವೃದ್ಧರು, ವಿಧವೆಯರು, ಬಡವರು ನಿತ್ಯ ಅಲೆಯುತ್ತಾರೆ. ಅವರ ಕೆಲಸಗಳೆಲ್ಲಾ ಸರಾಗವಾಗಿ ಆಗುವಂತೆ ಆಗಬೇಕು. ಅವರಿಗೆಲ್ಲಾ ಸೌಲಭ್ಯಗಳು ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇರಿಸುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. “ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ರೂ.10ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಮಿನಿ ವಿಧಾನಸೌಧಕ್ಕೆ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಜಿಲ್ಲಾಡಳಿತ ಹಳ್ಳಿಗೆ ಹೋಗುವಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ರೂಪಿಸಿದ್ದೇವೆ. ಆಧಾರ್ ಕಾರ್ಡ್ ನಲ್ಲಿ […]

ಮಂಗಳೂರು ಮಿನಿ ವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಮೂವರು ಹಿರಿಯ ನಾಗರಿಕರು

Saturday, July 10th, 2021
mangaloreMiniVidhanaSoudha

ಮಂಗಳೂರು: ನಗರದ ಮಿನಿ ವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಮೂವರು ಹಿರಿಯ ನಾಗರಿಕರನ್ನು ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಕಚೇರಿ ಕೆಲಸದಲ್ಲಿ ಮಿನಿ ವಿಧಾನಸೌಧಕ್ಕೆ ಬಂದಿದ್ದ ಮೂವರು ಹಿರಿಯ ನಾಗರಿಕರು ಲಿಫ್ಟ್ ಹತ್ತಿದ್ದರು. ಇವರಲ್ಲಿ ಒಬ್ಬರು ಮಹಿಳೆ, ಇಬ್ಬರು ಪುರುಷರಿದ್ದರು. ಇವರು ಲಿಫ್ಟ್ ಏರಿದ ಕೆಲವೇ ಕ್ಷಣಗಳಲ್ಲಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಲಿಫ್ಟ್‌ನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದರು. ತಾಂತ್ರಿಕ ದೋಷದಿಂದ ಲಿಫ್ಟ್ ಕೆಟ್ಟಿರಬಹುದು […]

ಕೊರೋನಾ ವೈರಸ್‌ನಿಂದಾಗಿ ಅಕ್ಷರದಾಸೋಹ ನೌಕರರರಿಗೆ ವೇತನವಿಲ್ಲ, ಪ್ರತಿಭಟನೆ

Friday, August 7th, 2020
citu

ಮಂಗಳೂರು : ಮುಂದೆ ಸಿಐಟಿಯು ನೇತೃತ್ವದ ಅಕ್ಷರದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಸಂಘದ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಮಾತನಾಡುತ್ತಾ, ಕೊರೋನಾ ವೈರಸ್‌ನಿಂದಾಗಿ ಸ್ಕೀಂ ಕಾರ್ಮಿಕರಲ್ಲಿ ಒಂದು ವಿಭಾಗವಾದ ಅಕ್ಷರ ದಾಸೋಹ ನೌಕರರಿಗೆ ಕೆಲಸ ಹಾಗೂ ವೇತನವಿಲ್ಲವಾಗಿದೆ. ಕೊರೋನಾ ವೈರಸ್ ಲಾಕ್‌ಡೌನ್ ಅವಧಿಯ ಹಾಗೂ ಬೇಸಿಗೆ ರಜೆಯ ಪರಿಹಾರವನ್ನು ನೀಡಬೇಕೆಂದು ವಿನಂತಿಸಿದರೂ ಲಕ್ಷಾಂತರ ಕಾರ್ಮಿಕರಿಗೆ ಪರಿಹಾರವನ್ನು ನೀಡಿಲ್ಲ. ಬಿಸಿಯೂಟ ನೌಕರರಿಗೆ ಮುಂದಿನ 6 ತಿಂಗಳ ತನಕ ಕನಿಷ್ಟ ರೂ.7.500/- […]

ಶುದ್ಧ ಹಸ್ತದ ಮಾದರಿ ಶಾಸಕಿಯಾಗಿ ಹೆಸರು ಗಳಿಸಿದ ತೃಪ್ತಿ

Wednesday, April 11th, 2018
clean

ಪುತ್ತೂರು: ಪಕ್ಷದ ಮೇಲೆ ನನಗೆ ಹಾಗೂ ಪತ್ನಿಗಿದ್ದ ಅಪಾರ ಪ್ರೀತಿ, ಕಾಳಜಿ ಹಾಗೂ ಆ ಸಮಯದಲ್ಲಿ ಪಕ್ಷಕ್ಕೆ ತೊಂದರೆಯಲ್ಲಿದೆಯಲ್ಲಾ ಎಂಬ ಭೀತಿ ಆಕೆ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಲು ದಾರಿ ಮಾಡಿಕೊಟ್ಟಿತು ಎನ್ನುತ್ತಾರೆ 2008ರಿಂದ 2013ರ ತನಕ ಪುತ್ತೂರು ಶಾಸಕರಾಗಿ ಕಾರ್ಯನಿರ್ವಹಿಸಿದ ಮಲ್ಲಿಕಾ ಪ್ರಸಾದ್‌ ಅವರ ಪತಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ| ಎಂ.ಕೆ. ಪ್ರಸಾದ್‌. ಶಕುಂತಳಾ ಟಿ. ಶೆಟ್ಟಿ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿ ಸಲು ಸಿದ್ಧತೆ ನಡೆಸಿದರು. ಅವರೆದುರು ಮಹಿಳಾ ಅಭ್ಯರ್ಥಿಯ ಸ್ಪರ್ಧೆ ಬಿಜೆಪಿಗೆ ಅನಿವಾರ್ಯವಾಗಿತ್ತು. ಎಲ್ಲರೂ ಸೇರಿ […]

ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ

Tuesday, January 2nd, 2018
rathnakar-2

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಅಮ್ಟಾಡಿ ವಲಯ ಮತ್ತು ಹಿಂದೂ ಜಾಗರಣಾ ವೇದಿಕೆ ಮಹಿಳಾ ಘಟಕ ಅಮ್ಟಾಡಿ ಇವರ ನೇತೃತ್ವದಲ್ಲಿ, ಹಿಂದು ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಒಂದು ವಾರಗಳ ಕಾಲ ನಿರಂತರ ನಡೆಯುವ ಪ್ರತಿಭಟನೆಗೆ ಇಂದು ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಆಗಮಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ದುರುದ್ದೇಶದಿಂದ ಹಿಂದೂ […]

ಆಟೊ ಚಾಲಕ-ಮಾಲಕರ ಒಕ್ಕೂಟದ ನೇತೃತ್ವದಲ್ಲಿ ಓಲಾ-ಉಬರ್ ವಿರುದ್ಧ ಪ್ರತಿಭಟನೆ

Tuesday, October 10th, 2017
auto

ಮಂಗಳೂರು: ನಗರದಲ್ಲಿ ಕಾನೂನುಬಾಹಿರವಾಗಿ ಆನ್‌ಲೈನ್ ಟ್ಯಾಕ್ಸಿಗಳಾದ ಓಲಾ ಮತ್ತು ಉಬರ್ ಕಾರುಗಳು ಓಡಾಟ ನಡೆಸುತ್ತಿವೆ ಎಂದು ಆರೋಪಿಸಿ ರಿಕ್ಷಾ ಚಾಲಕರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.ಮಂಗಳೂರು ನಗರ ಆಟೊ ಚಾಲಕ-ಮಾಲಕರ ಒಕ್ಕೂಟದ ನೇತೃತ್ವದಲ್ಲಿ ದ.ಕ.ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಯಿತು. ಸಾರಿಗೆ ಪ್ರಾಧಿಕಾರ ನಿಗದಿಪಡಿಸಿರುವ ಮೀಟರ್ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು.ಸಾರಿಗೆ ವಾಹನಗಳು ಕಡ್ಡಾಯವಾಗಿ ಮೀಟರ್ ಅಳವಡಿಸಬೇಕೆಂಬ ನಿಯಮವಿದೆ. ನಗರದಲ್ಲಿ ಸೂಕ್ತ ಪರವಾನಿಗೆಯನ್ನು ಹೊಂದಿರಬೇಕೆಂಬ ನಿಯಮವಿದೆ. ಆದರೆ ವಿದೇಶಿ ಕಂಪೆನಿಗಳಾದ ಉಬರ್ ಮತ್ತು ಓಲಾ ಕಾರುಗಳು ಈ ನಿಯಮಗಳನ್ನು ಗಾಳಿಗೆ […]

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸದಸ್ಯರಿಂದ ಭ್ರಷ್ಟಾಚಾರದ ಕುರಿತು ಜಾಗೃತಿ

Friday, October 21st, 2016
Anti-corruption

ಮಂಗಳೂರು: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸದಸ್ಯರು ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಅವರ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಒಳಗಿರುವ ಎಲ್ಲಾ ಸರ್ಕಾರಿ ಕಚೇರಿಗೆಳಿಗೆ ಭೇಟಿ ನೀಡಿ ಭ್ರಷ್ಟಾಚಾರದ ಕುರಿತು ಜಾಗೃತಿ ಮೂಡಿಸಿದರು. ಅಧಿಕಾರಿಗಳ ಕರ್ತವ್ಯ ನಿರ್ವಹಣೆಯ ಕುರಿತು ಮಾಹಿತಿ ಸಂಗ್ರಹಿಸಿದರು. ಅಧಿಕಾರಿಗಳ ಮೇಜಿನ ಮುಂಭಾಗ ನಾಮಫಲಕ ಇಡಬೇಕು, ಸಿಬ್ಬಂದಿ ಗುರುತಿನ ಚೀಟಿ ಧರಿಸಬೇಕು, ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಬೇಕು, ಯಾವುದೇ ಕೆಲಸ ಮಾಡಿಕೊಡಲು ವಿಳಂಬ ಮಾಡಬಾರದು ಎಂಬ ನಿಯಮ ಪಾಲನೆಯ ಬಗ್ಗೆ ತಿಳಿಹೇಳಿದರು. ಉಪ ತಹಸೀಲ್ದಾರ್ ಮುಂಭಾಗ […]

ದೇಶದಲ್ಲೇ ಕರ್ನಾಟಕ ಅರ್.ಟಿ.ಸಿ. ನೀಡಿಕೆಯಲ್ಲಿ ಮಾದರಿಯಾಗಿದೆ-ವಿ.ಶ್ರೀನಿವಾಸಪ್ರಸಾದ್

Monday, April 6th, 2015
belthangadi

ಮಂಗಳೂರು : ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವಾರು ವರ್ಷಗಳಾದರೂ ಇನ್ನೂ ನಮ್ಮ ರೈತರಿಗೆ ತಮ್ಮ ಜಮೀನುಗಳ ಪಹಣಿ (ಆರ್.ಟಿ.ಸಿ.) ಸಮರ್ಪಕವಾಗಿ ಸಿಕ್ಕಿಲ್ಲ, ಇದನ್ನು ಮನಗಂಡ ಕರ್ನಾಟಕ ಸರ್ಕಾರ ಕಂದಾಯ ಅದಾಲತ್‌ಗಳನ್ನು ಮಾಡುವ ಮೂಲಕ ರೈತರ ಮನೆಬಾಗಿಲಿಗೆ ಆರ್.ಟಿ.ಸಿ.ಗಳನ್ನು ವಿತರಿಸುವ ಮೂಲಕ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದ್ದಾರೆ. ಅವರು ಇಂದು ಬೆಳ್ತಂಗಡಿಯಲ್ಲಿ ರೂ.10 ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ […]