ಭಾರಿ ಮಳೆ : ಕುಲಶೇಖರ ಬಳಿ ರೈಲ್ವೆ ಹಳಿಗೆ ಕುಸಿದು ಬಿದ್ದ ತಡೆಗೋಡೆ, ರೈಲುಗಳ ಸಂಚಾರ ಸ್ಥಗಿತ

Friday, July 16th, 2021
Konkan-Rail

ಮಂಗಳೂರು:  ನಗರದ ಕುಲಶೇಖರದಲ್ಲಿ ನಿರ್ಮಾಣ ಹಂತದ ರೈಲ್ವೆ ಸುರಂಗ ಮಾರ್ಗದ ಬಳಿ ತಡೆಗೋಡೆ ಕುಸಿದು ಹಳಿಗೆ ಬಿದ್ದು, ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಭಾರಿ ಮಳೆಯಿಂದಾಗಿ  ಶುಕ್ರವಾರ ಮುಂಜಾನೆ ಘಟನೆ ಸಂಭವಿಸಿದ್ದು, ಕಾಂಕ್ರೀಟ್‌ನಿಂದ ನಿರ್ಮಿಸಲಾದ ತಡೆಗೋಡೆ ಸಹಿತ ಭಾರಿ ಪ್ರಮಾಣದ ಮಣ್ಣು ಜರಿದು ಹಳಿಯ ಮೇಲೆ ಬಿದ್ದಿದೆ. ಮಂಗಳೂರು ಜಂಕ್ಷನ್‌-ತೋಕೂರು ನಡುವಿನ ಕುಲಶೇಖರ ಬಳಿ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮಣ್ಣು ತೆರವು ಕಾರ್ಯ ಆರಂಭವಾಗಿದ್ದು, ಕೊಂಕಣ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.  ಹಳಿಯ ಮೇಲೆ […]

ರೈಲ್ವೆ ಹಳಿಯಲ್ಲಿ ಯುವಕನ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ

Thursday, April 15th, 2021
savanuru Rail

ಕಡಬ: ಸವಣೂರು ರೈಲ್ವೆ ಗೇಟ್ ಬಳಿ ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಯುವಕ ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಸ್ಥಳಕ್ಕೆ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಂಗಳೂರು ಭಾಗದ ರೈಲ್ವೆ ಹಳಿ ದ್ವಿಪಥ ಕಾಮಗಾರಿಗೆ 327.00 ಕೋಟಿ ರೂ. ಅನುದಾನ: ನಳಿನ್ ಕುಮಾರ್

Tuesday, August 30th, 2016
nalin-kumar-kateel

ಮಂಗಳೂರು: ಮಂಗಳೂರು ಭಾಗದ ರೈಲ್ವೆ ಹಳಿ ದ್ವಿಪಥ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ 327.00 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮಂಗಳೂರು ಜಂಕ್ಷನ್‌‌‌‌ನಿಂದ ಪಣಂಬೂರು ವರೆಗಿನ ಒಟ್ಟು 19 ಕಿ.ಮೀ ದ್ವಿಪಥ ಕಾಮಗಾರಿಗೆ ರೂ.327.00 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹೆಚ್ಚುವರಿಯಾಗಿ ಈ ಕಾಮಗಾರಿಗೆ 2016-17ನೇ ಸಾಲಿಗೆ 100.00ಕೋಟಿ ರೂ. ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದರು. ಇನ್ನು ನೇತ್ರಾವತಿ ಕ್ಯಾಬಿನ್‌‌‌‌‌ನಿಂದ ಮಂಗಳೂರು ಕೇಂದ್ರ ರೈಲು ನಿಲ್ದಾಣದವರೆಗಿನ […]