ಭಾರತ ಕಂಡ ಬುದ್ದಿವಂತ ಅರ್ಥಶಾಸ್ತ್ರಜ್ಞ ಮತ್ತು ರಾಜನೀತಿಜ್ಞರಲ್ಲಿ ಚಾಣಕ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ. ಈತನನ್ನು ‘ಭಾರತದ ಮೆಕ್ಯಾವೆಲಿ’ ಎಂದು ಕರೆಯುವುದೂ ಉಂಟು. ಈತ ತನ್ನ ‘ಪಂಚತಂತ್ರ’, ‘ಕೌಟಿಲ್ಯನ ಅರ್ಥಶಾಸ್ತ್ರ’ ಮತ್ತು ತನ್ನ ಜೀವನ ವಿಧಾನಗಳಿಂದ ಬಹಳ ಜನಪ್ರಿಯ. ನಂದರ ವಂಶವನ್ನು ಅವಸಾನಗೊಳಿಸಿ ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡಿದ ಈತನ ರೀತಿ ಅದ್ಭುತ. ಈತ ತನ್ನ ‘‘ಚಾಣಕ್ಯ ನೀತಿ’’ಯಲ್ಲಿ ನಮ್ಮ ಸುತ್ತಮುತ್ತಲು ಇರುವ ಪ್ರಾಣಿಗಳಿಂದ ನಾವು ಏನನ್ನು ಕಲಿಯಬಹುದು? ಎಂಬುದನ್ನು ಸವಿವರವಾಗಿ ಉಲ್ಲೇಖಿಸಿದ್ದಾನೆ. ಸಿಂಹಾದೇಕಂ ಬಕಾದೇಕಂ ಶಿಕ್ಷೇಚ್ಚತ್ವಾರಿ ಕುಕ್ಕುಟಾ ತ್ವಾಯಸಾತ್ಪಂಚ […]