ಬೆಂಗಳೂರಿನಲ್ಲಿ ಮಕರ ಶ್ರೀ ಭಜನಾ ಮಂಡಳಿ (ರಿ.) ಇದರ ದ್ವಿತೀಯ ವರ್ಷದ ಭಜನಾ ಮಹೋತ್ಸವ

Saturday, July 13th, 2024
makara-bajana mandali

ಬೆಂಗಳೂರು : ಮಕರ ಶ್ರೀ ಭಜನಾ ಮಂಡಳಿ (ರಿ.) ಇದರ ದ್ವಿತೀಯ ವರ್ಷದ ಭಜನಾ ಮಹೋತ್ಸವ ಆಗಸ್ಟ್ 03 ರಂದು ಸಂಜೆ 4 ರಿಂದ 9 ರವರೆಗೆ ವಿಜಯನಗರ ಶ್ರೀ ಬಾಲಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಯುವಕರು ಸೇರಿ ನಡೆಸುವಂತಹ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ಭಜನೇಯ ವೈಭವವನ್ನು ಕಣ್ತುಂಬಿಕೊಂಡು.ಶ್ರೀ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿಸುವ. ಬೆಂಗಳೂರು ಮಕರ ಶ್ರೀ ಭಜನಾ ಮಂಡಳಿ(ರಿ.) ಅಧ್ಯಕ್ಷರು ಹಾಗೂ […]

ಯುವ ಸ್ಪಂದನ ಅಧ್ಯಕ್ಷರಾಗಿ ಜಿತಿನ್‌ ಜೀಜೋ, ಉಪಾಧ್ಯಕ್ಷರಾಗಿ ಡಿ.ಎಂ.ದೀಕ್ಷಾ ಆಯ್ಕೆ

Saturday, July 13th, 2024
yuva-spandana

ಮಂಗಳೂರು: ಯುವ ಸ್ಪಂದನ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿ ಲಿ. ಇದರ ಅಧ್ಯಕ್ಷರಾಗಿ ಜಿತಿನ್‌ ಜೀಜೋ ಹಾಗೂ ಉಪಾಧ್ಯಕ್ಷರಾಗಿ ಡಿ.ಎಂ.ದೀಕ್ಷಾ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಜುಲೈ 12 ಶುಕ್ರವಾರ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಈ ಚುನಾವಣಾಪ್ರಕ್ರಿಯೆಯು ನಡೆಯಿತು. ರಿಟರ್ನಿಂಗ್ ಅಧಿಕಾರಿಯಾಗಿ ಸಹಕಾರ ಸ್ಪಂದನದ ಲೆಕ್ಕ ಪರಿಶೋಧನಾ ಇಲಾಖೆಯ ಶ್ರೀಯುತ ನವೀನ್ ಎಂ.ಎಸ್. ಇವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಯುವ ಸ್ಪಂದನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದರ ನಿರ್ದೇಶಕ ಮಂಡಳಿಗೆ ನಡೆದ […]

ಹಿಂದೂ ಯುವತಿಯನ್ನು ಪ್ರೀತಿಯ ನಾಟಕವಾಡಿ ಕಿಡ್ನಾಪ್ ಮಾಡಿದ ಮುಸ್ಲಿಂ ಯುವಕ, ಆತನ ಮೇಲಿದೆ 15 ಕೇಸುಗಳು

Friday, July 12th, 2024
Mohammed Aspak Vidyanagara

ಮಂಗಳೂರು : ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದೆ ಕೆಲಸಕ್ಕೆ ಸೇರಿದ್ದ ಬಡ ಕುಟುಂಬಕ್ಕೆ ಸೇರಿದ್ದ ಹಿಂದೂ ಯುವತಿಯೊಬ್ಬಳನ್ನು ಮುಸ್ಲಿಂ ಯುವಕ ಪ್ರೀತಿಯ ನಾಟಕವಾಡಿ ಕಿಡ್ನಾಪ್ ಮಾಡಿರುವುದಾಗಿ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಸರಗೋಡಿನ ವಿದ್ಯಾನಗರ ನಿವಾಸಿಯೇ ಆಗಿರುವ ಮಹಮ್ಮದ್ ಅಶ್ಫಾಕ್ ಎಂಬಾತ ಯುವತಿಯನ್ನು ಪ್ರೇಮ ಪಾಶಕ್ಕೆ ಸಿಲುಕಿಸಿ ಕಿಡ್ನ್ಯಾಪ್ ಮಾಡಿದ್ದಾನೆ. ಅಶ್ಫಾಕ್ ಮೇಲೆ ಕಾಸರಗೋಡು ನಗರದ ಎರಡು ಠಾಣೆಗಳಲ್ಲಿ 15 ಕೇಸು ದಾಖಲಾಗಿದ್ದು, ಮೂರು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಅಲ್ಲದೆ, ಈ ಹಿಂದೆ ಎರಡು ಹೆಣ್ಮಕ್ಕಳನ್ನು ಮದುವೆಯಾಗಿ ಬಿಟ್ಟಿದ್ದಾನೆ. ಇಂಥ […]

ಫಲಾನುಭವಿಗಳಿಗೆ ರೂ 7,48,531/- ಮೊತ್ತದ ಚೆಕ್ ವಿತರಿಸಿದ ಮೇಯರ್

Friday, July 12th, 2024
mayor-check

ಮಂಗಳೂರು : ಮಹಾನಗರಪಾಲಿಕೆಯ ಶೇ 24.10℅, 7.25% ಮತ್ತು 5% ನಿಧಿಯಡಿ ಮಹಾನಗರಪಾಲಿಕೆ ವ್ಯಾಪ್ತಿಯ ಸುಮಾರು 19 ಫಲಾನುಭವಿಗಳಿಗೆ ಮೇಯರ್ ಸುಧೀರ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ರೂ 7,48,531/- ಮೊತ್ತದ ಚೆಕ್ಕನ್ನು ವಿತರಿಸಲಾಯಿತು. ಪಾಲಿಕೆಯ ಮೇಯರ್ ರವರ ಕೊಠಡಿಯಲ್ಲಿ ಆಯೋಜಿಸಲಾದ ಈ ಕಾಯ೯ಕ್ರಮದಲ್ಲಿ ಶೇ 24.10 ಯೋಜನೆಯಡಿ ಬರುವ ಪರಿಷಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮನೆ ದುರಸ್ತಿ, ಮನೆ ನಿಮಾ೯ಣ, ತಾಳಿಭಾಗ್ಯ ಮುಂತಾದ ಸವಲತ್ತು ಪಡೆಯಲು ಸಹಾಯಧನ, ಶೇ 7.25 ರ ನಿಧಿಯಡಿ ಹಿಂದುಳಿದ ವಗ೯ದ […]

ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಚೇರಿ ಉದ್ಘಾಟನೆ

Friday, July 12th, 2024
mp-brijesh-office

ಮಂಗಳೂರು : ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಕಚೇರಿಯನ್ನು ಜುಲೈ 12 ರಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಡಿಯಲ್ಲಿ ಸೈನಿಕರು ಹೇಗೆ ಕೆಲಸ ಮಾಡುತ್ತಾರೆಯೋ ಅದೇ ರೀತಿ ಜನರ ಹಕ್ಕುಗಳಿಗಾಗಿ ಚೌಟ ಕೆಲಸ ಮಾಡುತ್ತಾರೆ .ಆದರೆ ಸಂಸದರ ಸ್ಥಾನವು ಕೇವಲ ಕುಳಿತುಕೊಳ್ಳುವುದು ಮಾತ್ರವಲ್ಲ, ಅವರು ಪ್ರಾಮಾಣಿಕ ಸಂಸದರಾಗಿ ಕೆಲಸ ಮಾಡುತ್ತಾರೆ ಮತ್ತು ಶ್ರಮಿಸುತ್ತಾರೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ […]

ಮೂಡ ಹಗರಣದ ಪ್ರತಿಭಟಗೆ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಬಂಧಿಸಿದ್ದು, ಸಿದ್ದರಾಮಯ್ಯ ಸರ್ಕಾರದ ಸರ್ವಾಧಿಕಾರ ಧೋರಣೆ

Friday, July 12th, 2024
vedayas-kamath

ಮಂಗಳೂರು : ನಾಲ್ಕು ಸಾವಿರ ಕೋಟಿಯ ಮೂಡ ಹಗರಣ ಖಂಡಿಸಿ ಮೈಸೂರಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್ ಸಹಿತ ಹಲವು ನಾಯಕರನ್ನು ಬೆಂಗಳೂರಿನಲ್ಲಿಯೇ ಬಂಧಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ದ.ಕ ಜಿಲ್ಲಾ ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ರಣಹೇಡಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ಪ್ರತಿಭಟನಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸರ್ವಾಧಿಕಾರ ಧೋರಣೆಯ ಮೂಲಕ […]

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪತ್ರಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಶ್ರೀ ವಿ. ಸೋಮಣ್ಣ

Friday, July 12th, 2024
Brijesh Chowta

ಮಂಗಳೂರು : ದಕ್ಷಿಣ ಕನ್ನಡದ ರೈಲು ಪ್ರಯಾಣಿಕರ ಪರವಾಗಿ ಮತ್ತು ಸಾಮಾನ್ಯ ನಾಗರಿಕರ ಪರವಾಗಿ ಸಂಸದರು ಕೋರಿದ ಮನವಿ ಮೇರೆಗೆ, ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ಶ್ರೀ ವಿ. ಸೋಮಣ್ಣ ಅವರು ದಿನಾಂಕ 17.07.2024 ರಂದು ಮಂಗಳೂರಿಗೆ ಆಗಮಿಸಿ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಬೆಳಿಗ್ಗೆ 09.00 ರಿಂದ 09.45 ರ ವರೆಗೆ ಮಂಗಳೂರು ಸೆಂಟ್ರಲ್ ರೇಲ್ವೆ ನಿಲ್ದಾಣದ ವೀಕ್ಷಣ, 10.00 ರಿಂದ 10.45 ರ ವರೆಗೆ ಮಂಗಳೂರು ಜಂಕ್ಷನ್ ರೇಲ್ವೆ ನಿಲ್ದಾಣದ ವೀಕ್ಷಣೆ […]

ಪಡುಪಣಂಬೂರು ಎಂಬಲ್ಲಿ ಚಡ್ಡಿಗ್ಯಾಂಗ್ ಮೇಲೆ ಪೊಲೀಸರಿಂದ ಶೂಟ್ ಔಟ್

Thursday, July 11th, 2024
chaddi-gang

ಮಂಗಳೂರು : ನಗರದಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾದ ಚಡ್ಡಿಗ್ಯಾಂಗ್ ಮೇಲೆ ಪೊಲೀಸರಿಂದ ಶೂಟ್ ಔಟ್ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ನಗರದ ಹೊರವಲಯದ ಪಡುಪಣಂಬೂರು ಎಂಬಲ್ಲಿ ಸ್ಥಳ‌ ಮಹಜರು ವೇಳೆ ಪೊಲೀಸರಿಗೆ ಹಲ್ಲೆಗೈದು ದರೋಡೆಕೋರರು ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ದರೋಡೆ ಆರೋಪಿಗಳನ್ನು ನಿನ್ನೆ ಸಕಲೇಶಪುರದಿಂದ ಬಂಧಿಸಿ ತರಲಾಗಿತ್ತು. ಬುಧವಾರ ಬೆಳಗ್ಗೆ ಸ್ಥಳ ಮಹಜರು ವೇಳೆ ಎಎಸ್ ಐ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗದರೋಡೆಕೋರರ ಕಾಲಿಗೆ ಪೊಲೀಸರು […]

ಆದಾಯ ತೆರಿಗೆ ಇಲಾಖೆಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನ್ಯಾಯವಾದಿ ಹರ್ಷ ಕುಮಾರ್‌ ನೇಮಕ

Wednesday, July 10th, 2024
Harsha-Kumar

ಮಂಗಳೂರು : ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆಯ ವಿಶೇಷ ಸರ್ಕಾರಿ ಅಭಿಯೋಜಕ (ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್) ಆಗಿ ಹಿರಿಯ ನ್ಯಾಯವಾದಿ ಹರ್ಷ ಕುಮಾರ್‌ ಅವರು ನೇಮಕವಾಗಿದ್ದಾರೆ. ಭಾರತದ ಮಾನ್ಯ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರ ಸೂಚನೆಯ ಮೇರೆಗೆ ಭಾರತ ಸರ್ಕಾರ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಹರ್ಷ ಕುಮಾರ್ ಅವರನ್ನು ಈ ಹುದ್ದೆಗೆ ನೇಮಕ ಮಾಡಿದೆ. ಆದಾಯ ತೆರಿಗೆ ಇಲಾಖೆಯ ಮಂಗಳೂರು ವಿಭಾಗದ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ಪ್ರಕರಣಗಳಲ್ಲಿ ಹರ್ಷ ಕುಮಾರ್ ಅವರು […]

ಕದ್ರಿ ಮಂಜುನಾಥ ದೇವಾಲಯದ ಒಳಾಂಗಣಕ್ಕೆ ಬೈಕಿನಲ್ಲಿ ನುಗ್ಗಿ, ಅಣ್ಣಪ್ಪ ದೈವದ ಕತ್ತಿ ತೆಗೆದು ದಾಂಧಲೆ ಮಾಡಿದ ಆಗಂತುಕ

Tuesday, July 9th, 2024
kadri-temple

ಮಂಗಳೂರು: ಕದ್ರಿ ಮಂಜುನಾಥ ದೇವಾಲಯದ ಒಳಾಂಗಣಕ್ಕೆ ಬೈಕ್ ತಂದು ವ್ಯಕ್ತಿಯೋರ್ವ ದಾಂಧಲೆ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಖಾಸಗಿ ಆಸ್ಪತ್ರೆ ಸೆಕ್ಯೂರಿಟಿ ಸಿಬ್ಬಂದಿ ಸುಧಾಕರ ಆಚಾರ್ಯ ಎಂಬಾತ ಮಹಾಪೂಜೆ ವೇಳೆ ದೇವಾಲಯದಲ್ಲಿ ಈ ರೀತಿಯ ದಾಂಧಲೆ ನಡೆಸಿದ್ದಾನೆ. ಈತ ದೇವಾಲಯ ಒಳಾಂಗಣಕ್ಕೆ ಬೈಕ್ ತಂದು ಅಣ್ಣಪ್ಪ ದೈವದ ಕತ್ತಿ(ಕಡ್ತಲೆ) ತೆಗೆದು ದಾಂಧಲೆ ಮಾಡಿದ್ದಾನೆ. ದೇವಾಲಯದ ಸೆಕ್ಯುರಿಟಿ ಇದ್ದರೂ ಒಳಾಂಗಣಕ್ಕೆ ಬೈಕ್ ತಂದು, ಅಣ್ಣಪ್ಪ ದೈವದ ಗುಡಿಯೊಳಗೆ ನುಗ್ಗಿ ಮಂಟಪದ ಮೇಲೆ ಹತ್ತಿ ದಾಂಧಲೆ ಮಾಡಿರುತ್ತಾನೆ. ಅಣ್ಣಪ್ಪ […]