Blog Archive

ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್ ಪರ ಚುನಾವಣಾ ಪ್ರಚಾರಕ್ಕಿಳಿದ ಪತ್ನಿ

Friday, April 27th, 2018
Vedavyas Wife

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್  ಅವರ ಪತ್ನಿ  ವೃಂದಾ ವೇದವ್ಯಾಸ್ ಚುನಾವಣಾ ಪ್ರಚಾರಕ್ಕೆ ದುಮುಕಿರುದರಿಂದ ಪತಿಗೆ ಹೆಚ್ಚು ಬಲ ಬಂದಿದೆ  . ಅವರು ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರೊಂದಿಗೆ ಮನೆಮನೆಗೆ ತೆರಳಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಪ್ರಚಾರ ನಡೆಸುತ್ತಿದ್ದಾರೆ. ಡಿ.ವೇದವ್ಯಾಸ್ ಕಾಮತ್ ಅವರು ಪದವು ಸೆಂಟ್ರಲ್ ವಾರ್ಡ್ ನಂ 35 ನಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿ ಪರ ಮತ ಯಾಚಿಸಿದರು ಈ ಸಂದರ್ಭದಲ್ಲಿ ಪ್ರಮುಖರಾದ ಪೂರ್ಣಿಮಾ, ಮುರಳೀಧರ್ ನಾಯಕ್, […]

ಬಿಜೆಪಿ ಸೋಲಿನ ಭೀತಿಯಿಂದ ಮಾಟ-ಮಂತ್ರದ ದಾರಿ ಹಿಡಿದಿದೆ: ಐವನ್ ಆರೋಪ

Friday, April 27th, 2018
ivan-dsouza

ಬೆಳ್ತಂಗಡಿ: ಚುನಾವಣಾ ಸೋಲಿನ ಭಯದಲ್ಲಿರುವ ಬಿಜೆಪಿಯವರು ಮಾಟ ಮಂತ್ರದ ದಾರಿ ಹಿಡಿದಿದ್ದಾರೆ. ಆದರೆ ಜಿಲ್ಲೆಯಲ್ಲಿ ಎಲ್ಲ ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವನ್ನು ಪಡೆಯಲಿದೆ. ಅವರ ಮಾಟ ಮಂತ್ರಗಳು ಅವರಿಗೇ ತಿರುಗಿ ಬೀಳಲಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ. ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿಯಲ್ಲಿ ಜನಪ್ರಿಯ ನಾಯಕರಾಗಿರುವ ವಸಂತ ಬಂಗೇರ ಅವರನ್ನು ಎದುರಿಸುವ ಶಕ್ತಿಯಿಲ್ಲದೆ ಕಾಂಗ್ರೆಸ್ ಮುಖಂಡರು ಮನೆ ಮುಂದೆ ಮಾಟ ಮಂತ್ರ ಮಾಡುವ ಹೀನ ಮಟ್ಟಕ್ಕೆ […]

ಬಿಜೆಪಿಯೊಳಗಿನ ಗೊಂದಲ ತನ್ನ ಗೆಲುವಿಗೆ ಪೂರಕ: ಶ್ರೀಕರ ಪ್ರಭು

Thursday, April 26th, 2018
shreekar-prabhu

ಮಂಗಳೂರು: ಬಿಜೆಪಿಯೊಳಗಿನ ಗೊಂದಲ ತನ್ನ ಗೆಲುವಿಗೆ ಪೂರಕವಾಗಲಿದೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀಕರ ಪ್ರಭು ಹೇಳಿದ್ದಾರೆ. ನಗರದಲ್ಲಿರುವ ತನ್ನ ಚುನಾವಣಾ ಪ್ರಚಾರ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಇಲ್ಲಿನ ಅಭ್ಯರ್ಥಿಗಳಿಬ್ಬರೂ ಸರಿ ಇಲ್ಲ. ಹಾಲಿ ಶಾಸಕ ಜೆ.ಆರ್.ಲೋಬೊ ಅವರ ಮೇಲೆ ಕುಡ್ಸೆಂಪ್ ಹಗರಣದ ಆರೋಪ ಇದೆ. ಮೊದಲ ಶಾಸಕತ್ವದ ಅವಧಿಯಲ್ಲಿ ಅವರೊಬ್ಬ ಭ್ರಷ್ಟಾಚಾರಿ ಎಂಬುದು ಸಾಬೀತಾಗಿದೆ. ಇದೇವೇಳೆ ಇಲ್ಲಿನ ಬಿಜೆಪಿ ಅಭ್ಯರ್ಥಿ […]

ಬಿಜೆಪಿ ಕಾರ್ಯಕರ್ತರ ಪಕ್ಷ: ಡಾ.ವೈ.ಭರತ್‌ ಶೆಟ್ಟಿ

Thursday, April 26th, 2018
BJP-karyakartha

ಸುರತ್ಕಲ್‌ : ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಇಲ್ಲಿ ನಾಯಕ ಎಂಬುದಕ್ಕಿಂತ ಕಾರ್ಯಕರ್ತ ಎಂಬವರಿಗೇ ಹೆಚ್ಚಿನ ಗೌರವವಿದೆ ಎಂದು ಡಾ| ಭರತ್‌ ಶೆಟ್ಟಿ ಅವರು ಹೇಳಿದರು. ಬಂಗ್ರಕೂಳೂರು ಕೋಡಿಕಲ್‌ ಪ್ರದೇಶದಲ್ಲಿ ಜರಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಶಿಸ್ತಿನ ಕಾರ್ಯಕರ್ತರನ್ನು ಹೊಂದಿದ್ದು, ಪಕ್ಷ ನಿರ್ಧಾರ ಮಾಡಿದ ಅಭ್ಯರ್ಥಿಯ ಗೆಲುವಿಗೆ ಸದಾ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕಾಂಗ್ರೆಸ್‌ ಮುಕ್ತ ಆಡಳಿತಕ್ಕೆ ಬಿಜೆಪಿ ಒಂದೇ ಹೆಜ್ಜೆ ಹಿಂದಿದ್ದು ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೇರುವ ಮೂಲಕ ಅದನ್ನೂ ಮಾಡಲಿದೆ. ಮತದಾರರು ಈ ಬಾರಿ ಬಿಜೆಪಿಗೆ […]

ಚುನಾವಣಾ ಪ್ರಚಾರಕ್ಕೆ ವಿಷಯವೇ ಇಲ್ಲದ ಬಿಜೆಪಿಯಿಂದ ಅಪಪ್ರಚಾರ: ರೈ

Thursday, April 26th, 2018
congress

ಬಂಟ್ವಾಳ: ಬಿಜೆಪಿಯವರಿಗೆ ಪ್ರಚಾರ ಮಾಡಲು ವಿಷಯವೇ ಇಲ್ಲ. ಅದಕ್ಕಾಗಿ ತನ್ನ ಮೇಲೆ ಸುಳ್ಳು ಆರೋಪವನ್ನು ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅ್ಯರ್ಥಿ ಬಿ.ರಮಾನಾಥ ರೈ ಹೇಳಿದ್ದಾರೆ. ಮಂಗಳವಾರ ಕೊಳ್ನಾಡ್ ಗ್ರಾಮದ ಬೂತ್ ಮಟ್ಟದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯು ತನ್ನ ಮೇಲೆ ಧರ್ಮ ವಿರೋಧಿ ಹಣೆಪಟ್ಟಿ ಕಟ್ಟಿ, ಅಪಪ್ರಚಾರದ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿರುವುದು ರಾಜಧರ್ಮವಲ್ಲ ಎಂದರು. ಬಂಟ್ವಾಳ ಕ್ಷೇತ್ರಕ್ಕೆ ಸುಮಾರು ಸಾವಿರದ ಇನ್ನೂರು ಕೋಟಿ […]

ಸೋಮವಾರ ಬಿಜೆಪಿಯಲ್ಲಿದ್ದ ಕಮಲ ನಾಯಕ ಬುಧವಾರ ‘ಕೈ’ಗೆ ಜಂಪ್‌!

Wednesday, April 25th, 2018
siddaramaih

ಗಂಗಾವತಿ: ಈ ಹಿಂದೆ ಸಂಸದನಾಗಿ ಆಯ್ಕೆಯಾಗಿ ಐದು ವರ್ಷ ರಾಜಕೀಯ ಅಧಿಕಾರ ನೀಡಿದ ಪಕ್ಷವನ್ನು ಬಿಡಲಾರೆ ಎಂದು ಹೇಳಿಕೆ ನೀಡಿದ ಮಾರನೇ ದಿನವೇ ಕಮಲ ನಾಯಕರೊಬ್ಬರು ‘ಕೈ’ ಪಕ್ಷಕ್ಕೆ ಜಂಪಾಗಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಸ್.ಶಿವರಾಮಗೌಡ, ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನಗೊಂಡು ಈಗ ಕಮಲ ಪಕ್ಷಕ್ಕೆ ಗುಡ್‌‌ಬೈ ಹೇಳಿ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. […]

ಕೇಂದ್ರದ ಅನುದಾನ ಸದ್ಬಳಕೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ವಿಫಲ: ಬಿಜೆಪಿ ರಾ. ವಕ್ತಾರ ಸುದೇಶ್ ಶರ್ಮ

Wednesday, April 25th, 2018
sudesh

ಮಂಗಳೂರು: ಕೇಂದ್ರ ಸರಕಾರ ಬಿಡುಗಡೆ ಮಾಡಿದ ವಿವಿಧ ಅನುದಾನಗಳನ್ನು ಸದ್ಬಳಕೆ ಮಾಡಲು ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್ ಶರ್ಮ ಆಪಾದಿಸಿದರು. ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಕೇಂದ್ರ ಸರಕಾರ ನೀಡಿದ ಒಂದು ಸಾವಿರ ಕೋಟಿ ರೂ. ಅನುದಾನದ ಬಗ್ಗೆ ರಾಜ್ಯ ಸರಕಾರ ಲೆಕ್ಕ ನೀಡಿಲ್ಲ ಎಂದರು. ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ರಂಗಗಳಿಗೆ ಕೇಂದ್ರ ಬಿಡುಗಡೆಗೊಳಿಸಿದ ಅನುದಾನವು ರಾಜ್ಯದ ಕಟ್ಟಕಡೆಯ ವ್ಯಕ್ತಿಗೆ ತಲುಪುವಲ್ಲಿ ವಿಫಲವಾಗಿದೆ […]

ಹೆಚ್‌ಡಿಕೆ ಮೇಲೆ ಅಭಿಮಾನ: ಬೇಡ ಎಂದ್ರೂ ಜೆಡಿಎಸ್‌ಗೆ 2 ಲಕ್ಷ ರೂ. ದೇಣಿಗೆ ಕೊಟ್ಟ ರೈತ

Wednesday, April 25th, 2018
kumraswamy

ಬೆಂಗಳೂರು: ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಕಂಪನಿಗಳು, ಉದ್ಯಮಿಗಳು, ರಿಯಲ್‌ ಎಸ್ಟೇಟ್ ಕುಳಗಳು ಪಾರ್ಟಿ ಫಂಡ್ ಕೊಡುವುದು ಸಾಮಾನ್ಯ. ಆದರೆ ಜೆಡಿಎಸ್ ಪಕ್ಷಕ್ಕೆ ಸಾಮಾನ್ಯ ರೈತನೊಬ್ಬ 2 ಲಕ್ಷ ರೂ. ಪಾರ್ಟಿ ಫಂಡ್ ನೀಡಿ ಹೆಚ್‌ಡಿಕೆ ಸಿಎಂ ಆಗಲಿ ಎಂದು ಹಾರೈಸಿದ್ದಾರೆ. ಹೌದು,‌ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಗ್ರಾಮದ ರೈತ ಕೃಷ್ಣಪ್ಪ ಎಂಬುವವರು ಜೆಡಿಎಸ್‌ಗೆ ಪಾರ್ಟಿ ಫಂಡ್ ನೀಡಿದ್ದಾರೆ. 2 ಲಕ್ಷ ರೂ. ನೀಡಿ ನೀವೇ ನಾಡಿನ ಮುಖ್ಯಮಂತ್ರಿಯಾಗಬೇಕು ಎಂದು ಶುಭ ಕೋರಿದ್ದಾರೆ. ರೈತ ನೀಡಿದ […]

ಮಣಿನಾಲ್ಕೂರಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮರಳಿ ಕಾಂಗ್ರೆಸ್ ಗೆ – ತೀವ್ರ ಮುಖಭಂಗಕ್ಕೆ ಒಳಗಾದ ಬಿಜೆಪಿ

Wednesday, April 25th, 2018
congr-election

ಬಂಟ್ವಾಳ: ಏನೇ ಮಾಡಿದರೂ ಬಂಟ್ವಾಳ ಕ್ಷೇತ್ರದ ಜನರ ಕಣ್ಣಿಗೆ ಮಣ್ಣರಚಿರಬೇಕು ಎಂದು ನಿರ್ಧರಿಸಿರುವ ಬಿಜೆಪಿ, ಸೇರ್ಪಡೆ ಸುದ್ದಿಗಾಗಿ ಶತ ಪ್ರಯತ್ನ ನಡೆಸುತ್ತಿದೆ. ಈ‌‌ ಸೇರ್ಪಡೆ ಸುದ್ದಿಗೆ ಸರ್ಕಸ್ ನಡೆಸಿದ ಬಿಜೆಪಿ,‌ಮಣಿನಾಲ್ಕೂರಿನಲ್ಲಿ ತೀವ್ರ ಮುಖಭಂಗಕ್ಕೆ‌ ಒಳಗಾಗಿದೆ. ಅದರಂತೆ ಮಣಿನಾಲ್ಕೂರು ಗ್ರಾ. ಪಂ. ಉಪಾಧ್ಯಕ್ಷ ದಿನೇಶ್ ನಾಯಕ್ ಮರಳಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ‘ಬಿಜೆಪಿ ಸೇರ್ಪಡೆಗೊಂಡ ನಂತರ ನನಗೆ ಪಶ್ಚಾತ್ತಾಪವಾಯಿತು ಬಿಜೆಪಿಯವರ‌ ಸುಳ್ಳುಗಳ ವಿರುದ್ದ ಹೋರಾಡುತ್ತಿರುವ ರಮಾನಾಥ ರೈರವರಿಗೆ ಬಲ‌ತುಂಬ ಬೇಕೆನಿಸಿತು. ಇಂತಹ ಅಭಿವೃದ್ಧಿ ಪುರುಷನನ್ನು ಕಾಣಲು ಸಾಧ್ಯವಿಲ್ಲ. ಆ ಕಾರಣದಿಂದ […]

ಬಿಜೆಪಿಯ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಕಾಂಗ್ರೆಸ್ ವಿರೋಧ

Wednesday, April 25th, 2018
ivan-douza

ಮಂಗಳೂರು: ಬಿಜೆಪಿಯು ಎ.25ರಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನವು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಚುನಾವಣಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮನೆಯ ಮೇಲಿನ ಬಿಜೆಪಿ ಧ್ವಜವನ್ನು ಚುನಾವಣಾ ಆಯೋಗ ತೆರವುಗೊಳಿಸಿದ್ದರಿಂದ ಅಸಮಾಧಾನಗೊಂಡ ಬಿಜೆಪಿಯು ಎ.25ರಂದು ರಾಜ್ಯಾದ್ಯಂತ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನ ಹಮ್ಮಿಕೊಂಡಿದೆ. ಅಂದು ಮನೆಯ ಮೇಲೆ […]