ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ವಜ್ರದ ಆಸೆಗೆ 1.35 ಲಕ್ಷ ರೂ. ಕಳಕೊಂಡ ಮಂಗಳೂರಿನ ವ್ಯಕ್ತಿ

Wednesday, January 27th, 2021
daimond

ಮಂಗಳೂರು : ವ್ಯಕ್ತಿ 35 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು 1.35 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಜ.3ರಂದು ರೆನಾಲ್ಟ್ ಫ್ರಿನ್ಸ್ ಕ್ರಿಸ್ಟಫರ್ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಚಾಟಿಂಗ್ ನಡೆಸುತ್ತಿದ್ದು, ಉಡುಗೊರೆ ಕಳುಹಿಸುವುದಾಗಿ ಹೇಳಿದ್ದರು. ಜ.18ರಂದು ಮಹಿಳೆ ಕರೆ ಮಾಡಿ, ದಿಲ್ಲಿ ಕಸ್ಟಮ್ಸ್ ಆಫೀಸರ್ ಎಂದು ಹೇಳಿ ಏರ್‌ಪೋರ್ಟ್‌ಗೆ ಪಾರ್ಸೆಲ್ ಬಂದಿದ್ದು, ಅದಕ್ಕೆ ಡೆಲಿವರಿ ಚಾರ್ಜ್ ಎಂದು ಹೇಳಿ ಅವರು ಕಳುಹಿಸಿದ […]

ಮಂಗಳೂರು ಏರ್​ಪೋರ್ಟ್ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಸಿ ಎಸ್​ ಸೂಚನೆ

Saturday, October 27th, 2018
mangaluru

ಮಂಗಳೂರು: ನಗರದ ಹೊರವಲಯದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಇನ್ನಷ್ಟು ತ್ವರಿತವಾಗಿ ಮಾಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಈ ಸೂಚನೆ ನೀಡಿದ್ದಾರೆ. ರನ್ವೇ ವಿಸ್ತರಣೆ ಸೇರಿದಂತೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಇಲ್ಲಿನ ದೀರ್ಘಕಾಲದ ಬೇಡಿಕೆಯಾಗಿದೆ. ಈ […]

ಏರ್ಪೋರ್ಟ್ ಆವರಣ ಗೋಡೆ ಬಿರುಕು ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Thursday, June 7th, 2018
Nalin Kumar Kateel

ಮಂಗಳೂರು : ಮಳೆಯಿಂದಾಗಿ ಹಾನಿಗೊಳಗಾದ ಏರ್ ಪೋರ್ಟ್ ಸುತ್ತಮುತ್ತಲಿನ ಕೊಳಂಬೆ ಉನಿಲೆ ಪ್ರದೇಶಗಳಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಇವರು ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ ಇವರೊಂದಿಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದರು. ಏರ್ಪೋರ್ಟ್ ನಿರ್ದೇಶಕರು, ಸಂಬಂಧಪಟ್ಟ ಎಂಜಿನೀಯರ್ಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ನಡೆಸಲು ಮಾನ್ಯ ಸಂಸದರು ನಿರ್ದೇಶನ ನೀಡಿದರು.

ಮೆಜೆಸ್ಟಿಕ್‌, ಏರ್‌ಪೋರ್ಟ್‌ನಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ… ನಮ್ಮ ಮೆಟ್ರೋ ಸಂಚಾರ

Thursday, January 25th, 2018
bangaluru

ಬೆಂಗಳೂರು: ಮಹದಾಯಿಗಾಗಿ ಕರೆ ನೀಡಿರುವ ರಾಜ್ಯ ಬಂದ್ ಹಿನ್ನಲೆಯಲ್ಲಿ ಬಿಎಂಟಿಸಿ ಹಾಗು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ತಗಿತಗೊಂಡಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಂದ್ ಹಿನ್ನಲೆಯಲ್ಲಿ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಇಡೀ ನಿಲ್ದಾಣ ಬಿಕೋ ಎನ್ನುತ್ತಿದೆ. ಬಂದ್ ಇದ್ದರೂ ಕೆಲ ಪ್ರಯಾಣಿಕರು ಮೆಜೆಸ್ಟಿಕ್‌ಗೆ ಆಗಮಿಸಿ ಮುಂದಿನ ಪ್ರಯಾಣಕ್ಕೆ ಬಸ್ ಸಿಗದೆ ಬಸ್ ನಿಲ್ದಾಣದಲ್ಲೇ ಕಾದು ಕುಳಿತುಕೊಂಡಿದ್ದಾರೆ. ಬಸ್‌ಗಾಗಿ ಎದುರು ನೋಡುತ್ತಿದ್ದಾರೆ. ಇನ್ನು ನಗರದ ಶಾಂತಿನಗರ, ಯಶವಂತಪುರ, ವಿಜಯನಗರ, ಬನಶಂಕರಿ ಸೇರಿದಂತೆ ಎಲ್ಲಾ ಟಿಟಿಎಂಸಿಗಳಲ್ಲಿಯೂ ಬಸ್ […]

ರನ್‌ವೇಯಿಂದ ಸಮುದ್ರದತ್ತ ಜಾರಿದ 168 ಜನರಿದ್ದ ಪ್ಯಾಸೆಂಜರ್‌ ವಿಮಾನ!

Tuesday, January 16th, 2018
airoplane

ಟರ್ಕಿ: ಟರ್ಕಿಯ ಟ್ರಬ್ಜೊನ್‌ ಏರ್‌ಪೋರ್ಟ್‌ನಲ್ಲಿ 168 ಜನರಿದ್ದ ವಿಮಾನವೊಂದು ರನ್‌ವೇಯಿಂದ ಜಾರಿ ಸಮುದ್ರದತ್ತ ನುಗ್ಗಿದೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಈ ಘಟನೆ ಜರುಗಿದೆ. ವಿಮಾನದಲ್ಲಿ 162 ಜನ ಪ್ರಯಾಣಿಕರು, ಇಬ್ಬರು ಪೈಲಟ್‌‌ ಹಾಗೂ ನಾಲ್ವರು ಸಿಬ್ಬಂದಿ ಇದ್ದರು. ವಿಮಾನದಿಂದ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಬೋಯಿಂಗ್‌ 737-800 ಪ್ಯಾಸೆಂಜರ್‌ ವಿಮಾನ ಟರ್ಕಿ ರಾಜಧಾನಿ ಅಂಕಾರಾದಿಂದ ಟ್ರಬ್ಜೊನ್‌ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಏಕಾಏಕಿ ಅಲುಗಾಡಲು […]

ಅಕ್ರಮವಾಗಿ ಚಿನ್ನ ಸಾಗಾಟ, ಏರ್‌ಪೋರ್ಟ್‌ನಲ್ಲಿ ವ್ಯಕ್ತಿಯ ಬಂಧನ

Tuesday, October 24th, 2017
gold dust case

ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟದ ಮತ್ತೊಂದು ಪ್ರಕರಣವನ್ನು ಮಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಸಿನಿಮೀಯ ರೀತಿಯಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ ಕಾಸರಗೋಡಿನ ರಫೀಕ್ ಮೊದಿನ್ (36) ಬಂಧಿತ ವ್ಯಕ್ತಿ. ಆತನಿಂದ 31,31,689 ರೂ. ಮೌಲ್ಯದ 1.58 ಕಿ. ಗ್ರಾಂ. ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದುಬೈನಿಂದ ಅತ್ಯಂತ ಚಾಣಾಕ್ಷ ರೀತಿಯಲ್ಲಿ ತನ್ನ ಎರಡು ಕಾಲಿನ ಉದ್ದಕ್ಕೂ ಚಿನ್ನದ ಪುಡಿ ತುಂಬಿದ ಪ್ಲಾಸ್ಟಿಕ್ ಕವರನ್ನು ಗಮ್ ಮೂಲಕ ಅಂಟಿಸಿಕೊಂಡು ಸಾಗಿಸುತ್ತಿದ್ದ, ಈ ವೇಳೆ ಈತನ ವರ್ತನೆಯಲ್ಲಿ ಅನುಮಾನ ವ್ಯಕ್ತವಾದ […]