ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇಬ್ಬರ ಮೃತದೇಹ ಪತ್ತೆ, ಇಬ್ಬರಿಗಾಗಿ ಶೋಧ
Wednesday, December 2nd, 2020ಮಂಗಳೂರು: ಸೋಮವಾರ ರಾತ್ರಿ ನಡೆದ ಬೋಟ್ ಮುಳುಗಡೆ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಬುಧವಾರ ಇಬ್ಬರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ನಾಲ್ಕು ಜನರ ಮೃತದೇಹ ಪತ್ತೆಯಾದಂತಾಗಿದೆ. ಬೊಕ್ಕಪಟ್ಣ ನಿವಾಸಿ ಚಿಂತನ್ (21) ಮತ್ತು ಕಸ್ಬಾ ಬೆಂಗ್ರೆ ನಿವಾಸಿ ಹಸೈನಾರ್ (25) ಅವರ ಮೃತದೇಹ ಇಂದು ಪತ್ತೆಯಾಗಿದೆ. ಬೊಕ್ಕಪಟ್ಣ ಬೆಂಗ್ರೆಯ ಪಾಂಡುರಂಗ ಸುವರ್ಣ (58) ಮತ್ತು ಪ್ರೀತಂ (25) ಅವರ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಶ್ರೀ ರಕ್ಷಾ ಬೋಟ್ ಮುಳುಗಡೆ ದುರಂತದಲ್ಲಿ ಆರು ಮಂದಿ ನಾಪತ್ತೆಯಾಗಿದ್ದರು. ಕಸ್ಬಾ ಬೆಂಗ್ರೆಯ ಅನ್ಸಾರ್ […]