ಬಲ್ಮಠ ರಸ್ತೆಯಲ್ಲಿ ಕಟ್ಟಡಕ್ಕೆ ತಳಪಾಯ ಕೊರೆಯುವಾಗ ಮಣ್ಣು ಕುಸಿತ, ಇಬ್ಬರು ಕಾರ್ಮಿಕರಲ್ಲಿ ಓರ್ವನ ರಕ್ಷಣೆ

Wednesday, July 3rd, 2024
Balmatta-Mud-Slide

ಮಂಗಳೂರು: ನಗರದ ಬಲ್ಮಠ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ತಳಪಾಯ ಕೊರೆಯುವಾಗ ಮಣ್ಣು ಕುಸಿದು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ. ಚಂದನ್ ಕುಮಾರ್ (30) ಮತ್ತು ರಾಜಕುಮಾರ್ (18) ಮಣ್ಣಿನಡಿ ಸಿಲುಕಿರುವ ಕಾರ್ಮಿಕರು. ಘಟನೆಯಲ್ಲಿ ಓರ್ವ ಕಾರ್ಮಿಕ ರಾಜ್ ಕುಮಾರ್ ಅವರನ್ನು ರಕ್ಷಣಾ ತಂಡ ಮೇಲಕೆತ್ತಿದೆ. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವ ಮತ್ತೋರ್ವ ಕಾರ್ಮಿಕನಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕ್ರೇನ್ ಮೂಲಕ ಜೆಸಿಬಿಯನ್ನು ಕೆಳಗಿಸುವ […]

ಸ್ಫೋಟಕ ತಯಾರಿಸುತ್ತಿದ್ದ ಮೂವರು ಕಾರ್ಮಿಕರು ದುರ್ಮರಣ, ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Monday, January 29th, 2024
venuru-blast

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ತೊಡದ ಮದ್ಯೆ ಸ್ಫೋಟಕ ತಯಾರಿಸುತ್ತಿದ್ದಾಗ ಉಂಟಾದ ಅವಘಡದಲ್ಲಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿ, ಆರು ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಶೀರ್ ಎಂಬವರ ಜಾಗದಲ್ಲಿ ಘಟನೆ ನಡೆದಿದ್ದು, ಕೇರಳ ನಿವಾಸಿಗಳಾದ ಸ್ವಾಮಿ (55) ಹಾಗೂ ವರ್ಗಿಸ್ (68), ಹಾಸನದ ಅರಸೀಕೆರೆ ನಿವಾಸಿ ಚೇತನ್ (25) ಮೃತಪಟ್ಟಿದ್ದು, ದೇಹ ಸಂಪೂರ್ಣ ಛಿದ್ರಛಿದ್ರವಾಗಿದೆ. ಘಟನೆಯಲ್ಲಿ 6 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ದಿನೇಶ್, ಕಿರಣ್, ಕುಮಾರ್, ಕಲ್ಲೇಶ್, […]

ಚಿತ್ರರಂಗದ ಕಾರ್ಮಿಕರಿಗೂ ಪ್ಯಾಕೇಜ್ ಘೋಷಿಸಲು ಸಿಎಂಗೆ ಮನವಿ

Friday, May 21st, 2021
KFCC

ಬೆಂಗಳೂರು : ಕೋವಿಡ್ ನಿಂದಾಗಿ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು, ಸಹ ಹಾಗೂ ಸಹಾಯಕ ನಿರ್ದೇಶಕರಿಗೂ ಸರ್ಕಾರ ಪ್ಯಾಕೇಜ್ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಇಂದು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ ಚಲನಚಿತ್ರ ಕಾರ್ಮಿಕ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ನಟಿ […]

ಗಂಜಿ ಕೇಂದ್ರ ತೆರೆದು ಕಾರ್ಮಿಕರು, ಜನಸಾಮಾನ್ಯರಿಗೆ ಊಟ ಕೊಡಬೇಕಿತ್ತು : ರಮಾನಾಥ ರೈ

Saturday, May 16th, 2020
Ramanatha Rai

ಮಂಗಳೂರು : ದಕ್ಷಿಣ ಕನ್ನಡಕ್ಕೆ ಬಂದ ಕೊರೋನಾ ವೈರಸ್ ನ ಮೂಲ ಹುಡುಕಲಿಕ್ಕೆ ಇನ್ನು ನಮ್ಮ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳೇ ಕೊರೋನಾ ಮೂಲ  ಹುಡುಕುತ್ತಿರುವುದು ವಿಪರ್ಯಾಸ, ಅವರೇ ಅಧಿಕಾರಿಗಳನ್ನು ತಡೆಯುತ್ತಿದ್ದಾರೆ ಎಂದು  ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕಾರ್ಮಿಕರು, ವಲಸೆ ಕಾರ್ಮಿಕರು, ಅನಿವಾಸಿ ಕನ್ನಡಿಗರ ಕೊಡುಗೆ ಬೆಲೆಕಟ್ಟಲಾಗದ್ದು. ಆದರೆ ಸಂಕಷ್ಟದ ಸಂದರ್ಭದಲ್ಲಿ ಅವರೆಲ್ಲರನ್ನೂ ತೀರಾ ನಿರ್ಲಕ್ಷ್ಯದಿಂದ ಕಾಣಲಾಗುತ್ತಿದೆ. ಸಂಕಷ್ಟದಲ್ಲಿದ್ದ ವಲಸೆಕಾರ್ಮಿಕರಿಗೆ ಸಾಂತ್ವನ ಹೇಳಲು ಕಾಂಗ್ರೆಸ್‌ ನಾಯಕರು ಹೋದರೆ “ಸೋಂಕು ಹರಡಲು ಕಾಂಗ್ರೆಸ್ಸೇ ಕಾರಣ’ಎನ್ನುವ ಮೂಲಕ ಕ್ಷುಲ್ಲಕ […]

2000 ರೂ. ಮೊತ್ತ ಖಾತೆಗಳಿಗೆ ಜಮಾ ಮಾಡುತ್ತಾರೆಂದು ಲೈನ್ ನಲ್ಲಿ ನಿಂತ ಕಾರ್ಮಿಕರು

Wednesday, April 15th, 2020
Kulooru

ಮಂಗಳೂರು:  ಸುಮಾರು 600-700 ಕ್ಕೂ ಹೆಚ್ಚು ಕಾರ್ಮಿಕರು ಲಾಕ್‌ಡೌನ್ ನಿಯಮ ಉಲ್ಲಂಘನೆ  ಮಾಡಿ ಕೂಳೂರಿನ ಅಂಗಡಿ ಯೊಂದರಲ್ಲಿ  ಜಮಾಯಿಸಿದ್ದರು. ಇಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಿದ ನಂತರ 2000 ರೂ. ಮೊತ್ತವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಒಬ್ಬ ವ್ಯಕ್ತಿ ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಡಿಸಿ ಕಚೇರಿಯ ಸೂಚನೆಯಂತೆ  ಇಲ್ಲಿ ನಿಂತಿದ್ದೇವೆ ಎಂದಿದ್ದಾನೆ. ಏಪ್ರಿಲ್ 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30 ರ ನಡುವೆ ಕುಲೂರ್‌ನಲ್ಲಿರುವ ಶ್ರೀ ದೇವಿ ಪ್ರಸಾದ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. […]

ಮೀನು ತಿಂದು ಅಸ್ವಸ್ಥರಾದ ಕಾರ್ಮಿಕರು ಆಸ್ಪತ್ರೆಗೆ ದಾಖಲು

Monday, October 3rd, 2016
fish

ಮಂಗಳೂರು: ಮೀನು ತಿಂದು ಅಸ್ವಸ್ಥರಾದ ಸುಮಾರು 200 ಕಾರ್ಮಿಕರು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ಇಲ್ಲಿನ ಬರಾಕಾ ಮೀನಿನ ಕಾರ್ಖಾನೆಯ ಕಾರ್ಮಿಕರು ಸಹಿತ ನಾಟೆಕಲ್ ಹಾಗೂ ಉಳ್ಳಾಲದ ಮನೆಮಂದಿ ಅಸ್ವಸ್ಥರಾಗಿ ತೊಕ್ಕೊಟ್ಟು ಸಹಿತ ದೇರಳಕಟ್ಟೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇವರ ಪೈಕಿ ಒಂದೇ ಮನೆಯ ನಾಲ್ವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಉಳ್ಳಾಲದಲ್ಲಿರುವ ಫಿಶ್ ಮಿಲ್‌‌ನಲ್ಲಿ ಇರುವ ಸುಮಾರು 300 ಕಾರ್ಮಿಕರು ಶುಕ್ರವಾರ ರಾತ್ರಿ ಊಟ ಮುಗಿಸಿ ಮಲಗುವ ವೇಳೆಗೆ ಅಸ್ವಸ್ಥಗೊಂಡಿದ್ದರು. ಊಟ ಮುಗಿದ ತಕ್ಷಣ […]