ತೃತೀಯ ರಂಗ ಒಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಹತಾಶರಾಗಿದ್ದಾರೆ: ಕೃಷ್ಣ ಬೈರೇಗೌಡ
Tuesday, July 24th, 2018ಹುಬ್ಬಳ್ಳಿ : ತೃತೀಯ ರಂಗ ಒಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ರಾಹುಲ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಮಿತ್ರಪಕ್ಷಗಳಿಗೆ ನೀಡಿದ್ದ ಆಶ್ವಾಸನೆಗಳನ್ನ ಈಡೇರಿಸಿಲ್ಲ. ಹೀಗಾಗಿ ಶಿವಸೇನೆ, ಪಿಡಿಪಿ, ಟಿಡಿಪಿ ಸೇರಿದಂತೆ ಇನ್ನಿತರ ಮಿತ್ರಪಕ್ಷಗಳು ಬಿಜೆಪಿಯಿಂದ ದೂರವಾಗುತ್ತಿವೆ. ಇದೀಗ ವಿಪಕ್ಷಗಳು ಒಂದಾಗಿರುವುದರಿಂದ ಬಿಜೆಪಿಗೆ ನಡುಕ ಹುಟ್ಟಿದೆ. ಅಲ್ಲದೇ ಮುಂಬರುವ ಚುನಾವಣೆಯಲ್ಲಿ ತೃತೀಯರಂಗ ಒಗ್ಗೂಡಿ ಚುನಾವಣೆ ಎದುರಿಸಲಿದೆ. ಪ್ರಧಾನಿ ಆಯ್ಕೆ […]