ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ನೋಂದಣಿ ಪ್ರಾರಂಭ

Wednesday, February 5th, 2020
ujire

ಉಜಿರೆ : ಧರ್ಮಸ್ಥಳದಲ್ಲಿ 49ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಏಪ್ರಿಲ್ 29, ಬುಧವಾರದಂದು ಸಂಜೆ 6.40ಕ್ಕೆ ಗೋಧೋಳಿ ಲಗ್ನ ಸುಮುಹೂರ್ತದಲ್ಲಿ ನಡೆಯಲಿದ್ದು ಮಂಗಳವಾರ ವಿವಾಹ ನೋಂಧಣಿ ಕಾರ್ಯ ಶುಭಾರಂಭಗೊಂಡಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಪೂಜ್ಯರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ವಿವಾಹ ನೋಂದಣಿ ಕಾರ್ಯಾಲಯವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀನಿವಾಸ ರಾವ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯಧರ್ಣಪ್ಪ ಉಪಸ್ಥಿತರಿದ್ದರು.