ಹಾಸನ ಜಿಲ್ಲೆಯ ಯುವತಿಗೆ ಮೋಸಮಾಡಿದ ಮಂಗಳೂರಿನ ಯುವಕ
Wednesday, February 22nd, 2017ಮಂಗಳೂರು : ಪ್ರೀತಿಸಿ ತನ್ನನ್ನು ಮದುವೆಯಾಗಿದ್ದಲ್ಲದೆ, ಗುಪ್ತವಾಗಿ ಇನ್ನೊಬ್ಬಳನ್ನು ವಿವಾಹವಾಗುವ ಮೂಲಕ ವಂಚನೆ ನಡೆಸಿ ತನ್ನನ್ನು ಬೀದಿಗೆ ತಳ್ಳಲಾಗಿದೆ ಎಂದು ದಲಿತ ಯುವತಿ ಆರೋಪಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲತಾ ಯಾನೆ ಲಲಿತಾ, ಹಾಸನ ಜಿಲ್ಲೆಯ ತಾನು ಹೋಂ ನರ್ಸಿಂಗ್ ಮಾಡಲು ಮಂಗಳೂರಿಗೆ ಬಂದಿದ್ದೆ. ಆವಾಗ ವಾಮಂಜೂರಿನ ಐತಪ್ಪಪೂಜಾರಿಯ ಮಗ ಗಿರೀಶ್‌ನ ಪರಿಚಯವಾಗಿತ್ತು. 2005ರಲ್ಲಿ ಧರ್ಮಸ್ಥಳದಲ್ಲಿ ನಾವಿಬ್ಬರು ಮದುವೆಯಾಗಿ ಬಾಡಿಗೆ ಮನೆಯಲ್ಲಿ ಸಂಸಾರ ಸಾಗಿಸತೊಡಗಿದೆವು. ಬಳಿಕ ಹಾಸನದ ಚೆನ್ನಕೇಶವ ದೇವಸ್ಥಾನದಲ್ಲಿ ಮದುವೆಯೂ ಆಗಿದೆ. 2016ರಲ್ಲಿ ರಿಜಿಸ್ಟಾರ್ ನೋಂದಣಿಯಾಗಿದೆ. […]