ಕಾಂಪೌಂಡ್ ಕುಸಿದು ಹಲವು ಬೈಕ್‍ಗಳಿಗೆ ಹಾನಿ
Thursday, November 17th, 2016ಪುತ್ತೂರು: ನಗರದ ಟ್ರಾಫಿಕ್ ಪೊಲೀಸ್ ಠಾಣೆ ಬಳಿಯ ಕಾಂಪೌಂಡ್ ಕುಸಿದು ಹಲವು ಬೈಕ್‍ಗಳಿಗೆ ಹಾನಿಯಾಗಿದೆ. ಬುಧವಾರ ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಕಾಂಪೌಂಡ್ ಕುಸಿತವಾಗಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಪೈಪ್‌ಗೆ ಹಾನಿಯಾದ ಕಾರಣದಿಂದ ನೀರು ಸೋರಿಕೆಯಾಗುತ್ತಿತ್ತು.ಇದರಿಂದ ಕಾಂಪೌಂಡ್ ತಳಭಾಗ ಸಡಿಲವಾಗಿ ಗೋಡೆ ಕುಸಿದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾಂಪೌಂಡ್ ಕುಸಿತದಿಂದ ಕಾಂಪೌಂಡ್ ಪಕ್ಕ ಪಾರ್ಕ್ ಮಾಡಿದ್ದ ಬೈಕ್‍ಗಳು ಹಾಗೂ ಇತರ ವಾಹನಗಳಿಗೆ ಹಾನಿಯಾಗಿದೆ.