ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ

Monday, January 20th, 2025
Umamaheshwara

ಉಡುಪಿ : ಜಿಲ್ಲೆಯ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತಿಯ ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ ಕಂಡು ಬಂದಿದೆ. ಸುಮಾರು 35 ಸೆ.ಮೀ ಎತ್ತರ 26 ಸೆ.ಮೀ ಅಗಲದ ಪಂಚಲೋಹದ ಈ ಶಿಲ್ಪ, ಶೈವ-ಶಾಕ್ತ ಮತ್ತು ನಾಗಾರಾಧನೆ ಪಂಥಗಳ ಅಪೂರ್ವ ಸಂಗಮದ ಪ್ರತೀಕವಾಗಿದೆ. ಎತ್ತರವಾದ ಪದ್ಮಾಸನ ಪೀಠದ ಮೇಲೆ ಆಸೀನವಾಗಿರುವ ಶಿವ ಜಟಾಮುಕಟನಾಗಿದ್ದು, ಪಂಚ ನಾಗಜಡೆಗಳ ಮುಕ್ಕೊಡೆಯನ್ನು ಹೊಂದಿದ್ದಾನೆ. ಪರ್ಯಂಕಾಸನ/ಸುಖಾಸೀನ ಭಂಗಿಯಲ್ಲಿ ಕುಳಿತಿರುವ ಶಿವನ ಎಡತೊಡೆಯ ಮೇಲೆ ಪಾರ್ವತಿ ಆಸೀನಳಾಗಿದ್ದಾಳೆ. ಶಿವನ ಕೆಳಗಿನ ಕೈ ಅಭಯ ಮುದ್ರೆಯಲ್ಲಿದ್ದು, […]