ಕಾಸರಗೋಡು ಮಾರುಕಟ್ಟೆಯಲ್ಲಿ ರಾಸಾಯನಿಕ ಬಳಸಿದ ಎರಡು ಕ್ವಿಂಟಾಲ್ ಹಳಸಿದ ಮೀನುಗಳ ವಶ
Saturday, May 7th, 2022
ಕಾಸರಗೋಡು : ರಾಸಾಯನಿಕ ಬಳಸಿದ ಎರಡು ಕ್ವಿಂಟಾಲ್ ಹಳಸಿದ ಮೀನುಗಳನ್ನು ಅಧಿಕಾರಿಗಳು ಕಾಸರಗೋಡು ಮಾರುಕಟ್ಟೆಯಿಂದ ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನಿಂದ ಈ ಮೀನನ್ನು ಕಾಸರಗೋಡು ಮಾರುಕಟ್ಟೆಗೆ ತರಲಾಗಿತ್ತು. 50ಬಾಕ್ಸ್ ಮೀನುಗಳಲ್ಲಿ 8 ಬಾಕ್ಸ್ ಮೀನು ಕೊಳೆತಿರುವುದು ಕಂಡುಬಂದಿದೆ. ಈ ಮೀನಿಗೆ ಮಾರಕ ರಾಸಾಯನಿಕ ಪದಾರ್ಥ ಬೆರೆಸಿರುವುದು ಆಹಾರ ಸುರಕ್ಷಾ ಇಲಾಖೆಯ ದಾಳಿಯ ವೇಳೆ ಪತ್ತೆಯಾಗಿದೆ. ಶನಿವಾರ ಬೆಳಿಗ್ಗೆ ಆಹಾರ ಸುರಕ್ಷಾ ಇಲಾಖೆ , ಆರೋಗ್ಯ ಇಲಾಖೆ ಹಾಗೂ ಕಾಸರಗೋಡು ನಗರಸಭೆಯ ಅಧಿಕಾರಿಗಳು ಮಾರುಕಟ್ಟೆಗೆ ತೆರಳಿ ತಪಾಸಣೆ ನಡೆಸಿದ್ದು, ಭಾರೀ ಪ್ರಮಾಣದ […]