ಗೋವಾ ಪ್ರವಾಸ ಹೋರಾಟ ಮಿನಿ ಬಸ್ ಅಪಘಾತ, 11 ಮಹಿಳೆಯರ ದುರ್ಮರಣ, ಸಾವಿನ ಸಂಖ್ಯೆ ಏರಿಕೆ

Friday, January 15th, 2021
Goa Tour

ಧಾರವಾಡ :  ದಾವಣಗೆರೆಯಿಂದ ಮುಂಜಾನೆ ಮೂರು ಗಂಟೆಗೆ ಹೊರಟಿದ್ದ ಮಿನಿಬಸ್ ಧಾರವಾಡ ಸಮೀಪ ಟಿಪ್ಪರ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ 6 ಜನ ಸಾವನ್ನಪ್ಪಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಐದು ಮಂದಿ ಅಸುನೀಗಿದರು. ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಯ ಕೆಲ ಮಹಿಳೆಯರು ಒಂದೆಡೆ ಸೇರಿ ಎಂಜಾಯ್ ಮಾಡಲು ಗೋವಾದ ಪಣಜಿಗೆ ಖಾಸಗಿ ಮಿನಿ ಬಸ್ವೊಂದನ್ನು ಬುಕ್ ಮಾಡಿ ಪ್ರವಾಸ  ಕೈಗೊಂಡಿದ್ದರು. ಇಂದು ಬೆಳಗ್ಗೆ ಸರಿಸುಮಾರು 3 ಗಂಟೆ […]

ಪಿರಿಯಾರಪಟ್ಟಣ: ಸಿಡಿಲಿನ ಆರ್ಭಟಕ್ಕೆ ಒಂದೇ ಕಡೆ 7 ಮಂದಿ ದುರ್ಮರಣ

Thursday, October 5th, 2017
mysuru

ಮೈಸೂರು: ತಾಲೂಕಿನ ನಂದಿ ನಾಥಪುರದಲ್ಲಿ ಸಿಡಿಲು ಬಡಿದು ಒಂದೇ ಕಡೆ 6 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಭೀಕರ ದುರ್ಘ‌ಟನೆ ಗುರುವಾರ ನಡೆದಿದೆ. ಮೃತ ದುರ್ದೈವಿಗಳು ಹುಣಸವಾಡಿ ನಿವಾಸಿಗಳು ಎಂದು ತಿಳಿದು ಬಂದಿದೆ. ಸುಜಯ್‌ (15)ಸುವರ್ಣಮ್ಮ (45)ಪುಟ್ಟಣ್ಣ(60) ಸುದೀಪ್‌, ತಿಮ್ಮೇಗೌಡ, ಉಮೇಶ್‌, ಪ್ರವೀಣ್‌ ಎನ್ನುವವರು ಮೃತ ಪಟ್ಟಿರುವುದಾಗಿ ವರದಿಯಾಗಿದೆ. ಹೊಲದಲ್ಲಿ ದನಗಳನ್ನು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ. ನಾಲ್ವರು ಸಿಡಿಲಿನಾಘಾತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಪಿರಿಯಾರಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.