ಮೂರು ಮಕ್ಕಳನ್ನು ಹುಟ್ಟಿಸಿದರೆ ಮೂರು ತಿಂಗಳು ಜೈಲು 10 ಸಾವಿರ ದಂಡ
Wednesday, September 28th, 2011ತಿರುವನಂತಪುರ : ಕೇರಳದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಜನಸಂಖ್ಯೆ ನಿಯಂತ್ರಣ ಯೋಜನೆಯನ್ನು ಕಟ್ಟುನಿಟ್ಟುಗೊಳಿಸುವ ಸಲುವಾಗಿ ಕೇರಳ ಸರ್ಕಾರ ಎರಡು ಮಕ್ಕಳು ಮಾತ್ರ ಎಂಬ ಕಾಯಿದೆ ಜಾರಿಗೊಳಿಸಲು ನಿರ್ಧರಿಸಿದೆ. ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ನೇತೃತ್ವದ ಆಯೋಗ ಹಲವು ಕಠಿಣ ಕ್ರಮಗಳನ್ನು ಜ್ಯಾರಿ ಗೊಳಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅದರಂತೆ ಮೂರನೇ ಮಗುವನ್ನು ಹೊಂದುವ ತಂದೆ ತಾಯಿಗೆ ಜೈಲು ಶಿಕ್ಷೆ ಮತ್ತು ಸರ್ಕಾರಿ ಸೌಲಭ್ಯ ಮಾನ್ಯತೆಯನ್ನು ರದ್ದುಗೊಳಿಸುವುದು ಮುಂತಾದ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ. ಆಯೋಗದ 12 ಸದಸ್ಯರ ಸಲಹೆ […]