ಧರ್ಮಸ್ಥಳ : ಭಗವಾನ್ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಪಾದಾಭಿಷೇಕ
Wednesday, February 5th, 2020ಉಜಿರೆ : ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಸ್ವಾಮಿಗೆ ಮಂಗಳವಾರ ಬೆಳಿಗ್ಯೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು. ಮಂಗಲ ಪ್ರವಚನ ನೀಡಿದ ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸಾಮೀಜಿ ಮಾತನಾಡಿ, ಎಲ್ಲೆಲ್ಲೂಅನ್ಯಾಯ, ಕ್ರೋಧ, ದ್ವೇಷ, ವಂಚನೆ ತಾಂಡವವಾಡುತ್ತಿರುವ ಇಂದು ಬಾಹುಬಲಿಯ ತ್ಯಾಗ ಸಂದೇಶ ವಿಶ್ವಮಾನ್ಯವಾಗಿದೆಎಂದು ಹೇಳಿದರು. ಭಾರತ ದೇಶವು ಧರ್ಮ, ಸಂಸ್ಕೃತಿಯ ನೆಲೆವೀಡಾಗಿದ್ದು ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನೆಗೊಂಡ ಭಗವಾನ್ ಬಾಹುಬಲಿ ಮೂರ್ತಿಯ ಆರಾಧನೆಯಿಂದ ತ್ಯಾಗ, ಅಹಿಂಸೆ, ಸಂಯಮ, ಇಂದ್ರಿಯ ನಿಗ್ರಹ ಮೊದಲಾದ ಮಾನವೀಯ […]