ಮತಾಂತರ ಕಾಯ್ದೆಗೆ ವಿರೋಧ ಅನಗತ್ಯ : ಗೃಹ ಸಚಿವ

Saturday, December 25th, 2021
Araga-Jnanedra

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ  ಶನಿವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮತಾಂತರ ಕಾಯ್ದೆ ವಿಧಾನ ಸಭೆಯಲ್ಲಿ ಪಾಸ್ ಆಗಿದೆ. ನಾವೆಲ್ಲರೂ ಪಕ್ಷ ಮೀರಿ ಈ ಬಗ್ಗೆ ಯೋಚನೆ ಮಾಡಬೇಕು. ನಾವು ಮತಾಂತರ ಕಾಯ್ದೆ ಏಕೆ ತಂದೆವು ಎಂದು ಯೋಚಿಸಬೇಕು.ಇದನ್ನು ನಿವಾರಿಸಲು ನಾವು ಈ ಕಾಯ್ದೆ ತಂದಿದ್ದೇವೆ. ಇದಕ್ಕೆ ವಿರೋಧ ಅನಗತ್ಯ ಎಂದರು. ಮತಾಂತರ ನಿಷೇಧ ವಿಧೇಯಕಕ್ಕೆ ಆಕ್ಷೇಪಣೆಗಳು ಸಹಜ. ಮುಂದಿನ […]

ಅದಾನಿ ಸಂಸ್ಥೆಯ ಹೆಸರು ತೆಗೆದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೊಸ ಬೋರ್ಡ್

Saturday, September 11th, 2021
Mangalore Airport

ಮಂಗಳೂರು : ಅದಾನಿ ಸಂಸ್ಥೆಯು ಮಂಗಳೂರು ವಿಮಾನ ನಿಲ್ದಾಣದ ಅದಾನಿ ಏರ್ಪೋರ್ಟ್ ಹೆಸರು ತೆಗೆದು ಹಾಕಿ ಮತ್ತೆ ಎಲ್ಲಾ ಬೋರ್ಡ್ಗಳಲ್ಲೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಎಂದು ನಮೂದಿಸಿದೆ. ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಿ ಅದಾನಿ ಏರ್ಪೋರ್ಟ್ ಎಂದು ನಾಮಕರಣ ಮಾಡಿರುವುದರಿಂದ ಮುಂದೆ ಈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಯೇ ನಿರ್ಮಿಸಿದೆ ಎಂಬ ತಪ್ಪು ಅಭಿಪ್ರಾಯ ಬಿಂಬಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡಬೇಕಾಯಿತು. ನಮ್ಮ ಪ್ರಯತ್ನಕ್ಕೆ ಯಶಸ್ಸು ದೊರಕಿದೆ. ಇದು ನಮಗೆ ಸಂತಸ ತಂದಿದೆ ಎಂದು […]

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸರ ಹೆಸರಿಡುವಂತೆ ಸರ್ವ ಪ್ರಯತ್ನ : ತೋನ್ಸೆ ಜಯಕೃಷ್ಣ ಎ ಶೆಟ್ಟಿ

Tuesday, September 7th, 2021
Jayasree Krishna

ಮುಂಬೈ: ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಸರಕಾರಿ ಸಂಸ್ಥೆ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ ಆಗಸ್ಟ್ 3ರಂದು ಕುರ್ಲಾ ಪೂರ್ವದ ಬಂಟರ ಸಂಘದ ಬಂಟರ ಭವನದಲ್ಲಿ ಜರುಗಿತು . ಈ ಸಭೆಯಲ್ಲಿ ಸಮಿತಿಯ ಮಹಾಪೋಷಕರೂ , ರಾಷ್ಟ್ರೀಯ ಜನನಾಯಕರೂ ಆದ ದಿವಂಗತ ಜಾರ್ಜ್ ಫೆರ್ನಾಂಡಿಸರ ಬಗ್ಗೆ ಅವರ ಅಭಿಮಾನಿಗಳ ಅನಿಸಿಕೆಗಳನ್ನು ಶ್ರೀಮತಿ ಸುರೇಖಾ ಎಚ್ ದೇವಾಡಿಗರರು ಸಂಕಲಿಸಿದ ಪುಸ್ತಕವೊಂದನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರೂ ಹಾಗೂ ಪ್ರಸ್ತುತ […]

ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ, ಕಾಸರಗೋಡು ವ್ಯಕ್ತಿಯ ಬಂಧನ

Friday, April 9th, 2021
Gold

ಮಂಗಳೂರು : ಕಾಸರಗೋಡು ಜಿಲ್ಲೆಯ ವ್ಯಕ್ತಿಯೊಬ್ಬ ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಅಲಂಪಾಡಿನ ನೀವಾಸಿ ಇಬ್ರಾಹಿಂ ಪನಲಂ ಅಬ್ದುಲ್‌ ಎಂಬಾತ ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಗುರುವಾರ  ಸಂಜೆ ದುಬೈನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿದ್ದ. ಈತನನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ 647 ಗ್ರಾಂ. ಚಿನ್ನವನ್ನು […]

ವಿಶೇಷವಾಗಿ ವಿನ್ಯಾಸದ ಪಾದರಕ್ಷೆಯಲ್ಲಿ ಚಿನ್ನ ಸಾಗಾಟ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

Monday, March 29th, 2021
Gold

ಮಂಗಳೂರು : ದುಬೈನಿಂದ  ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಮಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಸುಕ್ಕುರ್ ಮೊಯಿದ್ದೀನ್ ಕುನ್ಹಿ (48) ಹಾಗೂ ಭಟ್ಕಳದ ಮಿಸ್ರಿ ನಸೀಮುಲ್ ಗನಿ (44) ಎಂಬವರು ವಿಶೇಷವಾಗಿ ವಿನ್ಯಾಸದ ಪಾದರಕ್ಷೆಯ ಒಳಗೆ ಚಿನ್ನವನ್ನಿಟ್ಟು ಸಾಗಾಟ ಮಾಡುತ್ತಿದ್ದರು. ಆರೋಪಿಗಳಿಂದ 18.75 ಲಕ್ಷ ರೂ ಮೌಲ್ಯದ 405 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ವಿಭಾಗದ ಅಧಿಕಾರಿಗಳಾದ ಡಾ. ಕಪಿಲ್ ಗಡೆ, ರಾಕೇಶ್ ಕುಮಾರ್, ಸಂದೀಪ್ […]

ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕಳ ಹೆಸರಿಡುವಂತೆ ಉತ್ಸವ ಸಮಿತಿಯ ಸದಸ್ಯರು ಒತ್ತಾಯ

Wednesday, November 25th, 2020
Dinakar Ullal

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ಕೋಟಿ  ಚೆನ್ನಯರ ಹೆಸರಿಡಬೇಕು ಎಂದು  ಪ್ರತಿಭಟನೆ ನಡೆಸುತ್ತಿರುವಂತೆಯೇ, ವೀರರಾಣಿ ಅಬ್ಬಕ್ಕಳ ಹೆಸರಿಡಬೇಕು ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರು ಒತ್ತಾಯಿಸಿದೆ. ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಅವರು ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರಿಡುವಂತೆ ನಮ್ಮ ಸಮಿತಿ ವತಿಯಿಂದ 23 ವರ್ಷಗಳಲ್ಲಿ ಅನೇಕ ಸಂದರ್ಭಗಳಲ್ಲಿ ಈ ಒತ್ತಾಯ ಮಾಡಿದ್ದೇವೆ. ಪ್ರತೀ ವರ್ಷ ಅಬ್ಬಕ್ಕ ಉತ್ಸವದಲ್ಲಿಯೂ […]

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅದಾನಿ ಆನೆಯ ಜೊತೆ ಪಿಲಿನಲಿಕೆ ಆಕೃತಿ ಸ್ಥಾಪನೆ

Thursday, November 19th, 2020
Pili Nalike

ಮಂಗಳೂರು : ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಿಸಲಾಗಿದ್ದ ಪಿಲಿನಲಿಕೆ ಆಕೃತಿ ಮತ್ತೆ ಮೂಲ ಸ್ಥಾನದಲ್ಲಿ ಸ್ಥಾಪನೆ ಮಾಡಲಾಗಿದೆ, ಜೊತೆಗೆ ಅದಾನಿ ಗ್ರೂಪಿನ ಆನೆಯ ಸಂಕೇತವು ಇದೆ. ಪಿಲಿನಲಿಕೆ ಆಕೃತಿಯನ್ನು ಮೂಲ ಸ್ಥಾನದಲ್ಲಿ ಮತ್ತೆ ಸ್ಥಾಪಿಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು. ಪಿಲಿನಲಿಕೆ ಎಂಬುದು ಬೇರೆ ಕಡೆಯಿಂದ ಮಂಗಳೂರಿಗೆ ಬರುವ ಜನರಿಗೆ ಗೋಚರಿಸುವ ತುಳುನಾಡಿನ ಕಲೆ ಮತ್ತು ಸಂಸ್ಕೃತಿ. ಪಿಲಿನಲಿಕೆಯ ಆಕೃತಿ ತುಳುನಾಡಿನ ಹೆಮ್ಮೆ ಎಂದು ಅದಾನಿ ಗ್ರೂಪ್‌ನ ಪಿಆರ್‌ಒ ಗೆ ಹೇಳಿದ್ದರು.

ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವಂತೆ ಒತ್ತಾಯಿಸಿ ಪಂಜಿನಮೆರವಣಿಗೆ

Wednesday, November 18th, 2020
Torch Light protest

ಮಂಗಳೂರು  :  ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಮುಲ್ಕಿ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವಂತೆ ಒತ್ತಾಯಿಸಿ ಬುಧವಾರ ಸಂಜೆ  ಪಂಜಿನಮೆರವಣಿಗೆ ನಡೆಸಲಾಯಿತು. ದ.ಕ. ಜಿಲ್ಲೆಯ ಮಾಜಿ ಸಚಿವ ರಮಾನಾಥ ರೈ ಪಂಜಿನ ಮೆರವಣಿಗೆಗೆ ಕದ್ರಿ ಪಾರ್ಕ್ ಬಳಿ ಚಾಲನೆ ನೀಡಿದರು. ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡುವವರೆಗೆ ನಮ್ಮ ಪ್ರತಿಭಟನೆ ನಿರಂತರವಾಗಿ ಮುಂದುವರೆಯಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿಯ ಕೃಪಾಕಟಾಕ್ಷದಿಂದ ಅಧಿಕಾರಕ್ಕೇರಿದ್ದಾರೆ. ಅವರನ್ನು‌‌ […]

ಮಂಗಳೂರು ವಿಮಾನ ನಿಲ್ದಾಣ ಇನ್ನು ಮುಂದೆ ಅದಾನಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Saturday, October 31st, 2020
adani airport

ಮಂಗಳೂರು :  ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯ ವಿಮಾನ‌ ನಿಲ್ದಾಣ ಪ್ರಾಧಿಕಾರ ದಿಂದ  ಅದಾನಿ ಗ್ರೂಪ್ ಇಂದಿನಿಂದ ಕಾರ್ಯಾರಂಭಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಕಾರ, ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹದ ಕಂಪನಿಯು ವಹಿಸಿಕೊಂಡಿದೆ. ಅದಾನಿ ಸಂಸ್ಥೆ ಅಕ್ಟೋಬರ್ 30 ರಂದು ಮಧ್ಯರಾತ್ರಿಯಿಂದ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಅಧಿಕೃತ ಹಸ್ತಾಂತರ ಪ್ರಕ್ರಿಯೆಯು ಇಂದು ನಡೆಯಿತು. ಅದಾನಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಂಗಳೂರು […]

ಮಂಗಳೂರು ವಿಮಾನ ನಿಲ್ದಾಣದ ದುರಂತದಲ್ಲಿ ಮಡಿದವರ ಸ್ಮರಣಾರ್ಥ ವಾರ್ಷಿಕ ಸಂಸ್ಮರಣೆ

Friday, May 22nd, 2020
Mangalore-Air-Crash-Tragedy

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಇಂದು ಕೂಳೂರು- ತಣ್ಣೀರುಬಾವಿ ರಸ್ತೆಯಲ್ಲಿರುವ ಸ್ಮಾರಕ ಸ್ಥಳದಲ್ಲಿ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಸಂಸದ ನಳಿನ್ ಕುಮಾರ್ ಕಟೀಲ್, ಡಿಸಿಪಿ ಲಕ್ಷ್ಮಿ ಗಣೇಶ್ , ವಿಮಾನ ನಿಲ್ದಾಣ ಸಿಬ್ಬಂದಿಗಳು ಸೇರಿದ್ದ ಕಾರ್ಯಕ್ರಮದಲ್ಲಿ ವಿಮಾನ ದುರಂತದಲ್ಲಿ ಅಗಲಿದವರಿಗೆ ಶೃದ್ದಾಂಜಲಿ ಸಮರ್ಪಿಸಲಾಯಿತು. ಹತ್ತು ವರ್ಷದ  ಹಿಂದೆ ಅಂದರೆ  […]