ಮಹಾಮಾರಿ ಕೊರೊನಾ ಓಡಿಸಲು ಮಾರಮ್ಮ ದೇವಿ ಮೊರೆ ಹೋದ ಗ್ರಾಮಸ್ಥರು

Saturday, June 12th, 2021
maramma devi

ತುಮಕೂರು : ಜಿಲ್ಲೆಯ ಎರಡು ಗ್ರಾಮಗಳಲ್ಲಿ ಮಹಾಮಾರಿ ಕೊರೊನಾ ಓಡಿಸಲು ಜನರು ದೇವರ ಮೊರೆ ಹೋಗಿದ್ದಾರೆ. ಮರದಲ್ಲಿ ರಾಗಿ ಮುದ್ದೆ, ಬೇವಿನ ಸೊಪ್ಪು ಇಟ್ಟು, ಮಾರಮ್ಮನ ದೇವಾಲಯದ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದ್ದಾರೆ.  ಪರಿಣಾಮ ಈಗ 20 ಜನ ಗುಣಮುಖರಾಗಿ ವಾಪಸ್ಸಾಗಿದ್ದಾರೆ ಎಂಬುವುದು ಗ್ರಾಮಸ್ಥರ ನಂಬಿಕೆ. ಪಕ್ಕದ ಗ್ರಾಮ ತಿಪ್ಪಗಾನಹಳ್ಳಿಯಲ್ಲಿ ಇದೇ ರೀತಿ ಆಚರಿಸಿದ್ದಾರೆಂದು  ಪಾವಗಡ ತಾಲೂಕಿನ ಬಲ್ಲೇನಹಳ್ಳಿಯಲ್ಲಿ ಮಾರಮ್ಮ ದೇವಿ ಹಾಗೂ ರಕ್ಷಾ ಕಲ್ಲಿಗೆ ಪೂಜೆ ಸಲ್ಲಿಸಿ ಜನರು ಕೊರೊನಾ ದೂರ ಮಾಡುವಂತೆ ಪ್ರಾರ್ಥನೆ ಮಾಡಿದ್ದಾರೆ. ಪುರುಷರು ಮಾತ್ರ […]

ಹೆರಿಗೆಯಾಗಿ 24ನೇ ದಿನಕ್ಕೇ ಮಹಾಮಾರಿ ಕರೊನಾಗೆ ಮಹಿಳೆ ಬಲಿ

Saturday, June 5th, 2021
nirmala

ಕೊಪ್ಪಳ: ತಾಲೂ ಕಿನ  ಗುಳದಳ್ಳಿ ಗ್ರಾಮದ ಮಹಿಳೆಯೊಬ್ಬರು ಹೆರಿಗೆಯಾಗಿ 24ನೇ ದಿನಕ್ಕೇ ಮಹಾಮಾರಿ ಕರೊನಾಗೆ  ಬಲಿಯಾಗಿದ್ದು, ಹಸುಗೂಸು ತಾಯಿ ಇಲ್ಲದೆ ತಬ್ಬಲಿ ಆಗಿದೆ. ನಿರ್ಮಲಾ ವೀರಯ್ಯ  ಮೃತರಾದ ಮಹಿಳೆ. ನಿರ್ಮಲಾಗೆ ಹೆರಿಗೆ ಆದ ಬಳಿಕ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮದುವೆಯಾದ ನಾಲ್ಕೇ ದಿನಕ್ಕೆ ಮದುಮಗಳನ್ನು ಬಲಿ ಪಡೆದ ಕೊರೋನಾ

Saturday, May 29th, 2021
Pooja

ಶಿವಮೊಗ್ಗ: ನವವಿವಾಹಿತೆಯೊಬ್ಬರು ಕೊರೋನಾ  ಮಹಾಮಾರಿಯಿಂದ ಜೀವ ಕಳೆದುಕೊಂಡಿದ್ದು, ಮದುವೆ ಖುಷಿಯಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೇ 24ರ ಸೋಮವಾರದಂದು ವಿವಾಹವಾದ ನಾಲ್ಕೇ ದಿನಕ್ಕೆ ನವವಿವಾಹಿತೆ ಪೂಜಾ (27) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಶಿವಮೊಗ್ಗದ ನಿದಿಗೆಯ ಪೂಜಾ ಹಾಗೂ ಹರಿಗೆಯ ಮಹೇಶ್ ಜೊತೆ ಸೋಮವಾರ ವಿವಾಹ ನಡೆದಿತ್ತು. ಸೋಮವಾರ ವಿವಾಹ ಗುರುವಾರ ಸಂಜೆ ಪೂಜಾ ಮೃತಪಟ್ಟಿದ್ದಾರೆ. ವಿವಾಹವಾದ ಎರಡೇ ದಿನಕ್ಕೆ ಪೂಜಾಗೆ ಮೈಕೈ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ಮಲವಗೊಪ್ಪದ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು.  ಈ […]

ಕೊರೋನಾ ಮಹಾಮಾರಿಯ ಭಯ ಮತ್ತು ಚಿಂತೆಯನ್ನು ದೂರಮಾಡಲು ‘ಮನಸ್ಸಿಗೆ ಸ್ವಯಂಸೂಚನೆ’ಗಳನ್ನು ನೀಡಿ ಮತ್ತು ನಿಶ್ಚಿಂತೆಯಿಂದಿರಿ !

Saturday, May 22nd, 2021
dyana

ಇಂದು ಇಡೀ ದೇಶ ಕೊರೋನಾ ಮಹಾಮಾರಿಯ 2ನೇಯ ಅಲೆಯಿಂದ ತತ್ತರಿಸಿ ಹೋಗಿದೆ. ವರ್ತಮಾನ ಪತ್ರಿಕೆ, ಟಿವಿ ಚಾನೆಲ್ ಗಳ ಕೊರೋನಾ ವಾರ್ತೆ, ಸಾಮಾಜಿಕ ಜಾಲತಾಣಗಳ ಕೊರೋನಾ ಘಟನೆಗಳ ವಿಡಿಯೋ ನೋಡಿ, ಅಥವಾ ಆಕ್ಸಿಜನ್ ಕೊರತೆ, ಬೆಡ್ ಸಿಗದೇ, ನರಳಿ ಸಾಯುವ ವಿಚಾರಗಳು, ಅಥವಾ ನೆಚ್ಚಿನ ಕುಟುಂಬದವರು, ಸ್ನೇಹಿತರ ಅಗಲಿಕೆಯಿಂದ ಜನಸಾಮಾನ್ಯರಲ್ಲಿ ಭಯ, ಚಿಂತೆ, ನಿರಾಶೆ, ಆತ್ಮಹತ್ಯೆಯ ವಿಚಾರಗಳು ಇಂದು ಹೆಚ್ಚಾಗಿದೆ. ಪರಿಣಾಮವಾಗಿ ಕೊರೋನಾ ಸೋಂಕಿನ ಜೊತೆಗೆ ಅದರ ಭಯದಿಂದಲೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರ […]

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಪ್ರಾರಂಭದ ಸೂಚನೆ

Tuesday, March 16th, 2021
Maharastra

ನವದೆಹಲಿ:  ಮಹಾಮಾರಿ ಕೊರೋನಾ ವೈರಸ್ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಮತ್ತೆ ಪ್ರಾರಂಭ ವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ದೇಶದಲ್ಲಿ ಇಂದು ಸತತ 6ನೇ ದಿನವೂ 20,000ಕ್ಕೂ ಹೆಚ್ಚು ಕರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಟ್ಟುನಿಟ್ಟಾದ ನಿಯಂತ್ರಣ ತಂತ್ರಗಳತ್ತ ಗಮನಹರಿಸುವಂತೆ ಕೇಂದ್ರ ಸರ್ಕಾರ ಅತಿ ಹೆಚ್ಚು ಕೊರೋನಾ ಪೀಡಿತ ಮಹಾರಾಷ್ಟ್ರಕ್ಕೆ ಸೂಚಿಸಿದೆ. ದೇಶದಲ್ಲಿ ಮಂಗಳವಾರ 24,492 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1.14 ಕೋಟಿಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ […]

ಕೊರೊನಾ ಮಹಾಮಾರಿಯನ್ನು ತೊಲಗಿಸಲು ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು : ಶ್ರೀ ಮೋಹನದಾಸ ಸ್ವಾಮೀಜಿ

Saturday, August 1st, 2020
MohanadasaSwamiji

ಮಂಗಳೂರು : ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ದಲ್ಲಿ 48 ದಿನಗಳ ವರಮಹಾಲಕ್ಷ್ಮಿ ಪೂಜೆ ಜುಲೈ 31ರಂದು ಚಂಡಿಕಾ ಯಾಗದ ಪೂರ್ಣಾಹುತಿ ಯೊಂದಿಗೆ ಸಮಾಪನ ಗೊಂಡಿತು. ಬೆಳಗ್ಗೆ ಗಣಪತಿ ಹೋಮ ನಾನಾ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಚಂಡಿಕಾ ಯಾಗ, ಕನಕಾಧಾರಾ ಯಾಗ ಪೂರ್ಣಹುತಿ ನಡೆಯಿತು. ಭಜನಾ ಸತ್ಸಂಗ ಕಾರ್ಯಕ್ರಮ ಪ್ರಸ್ತುತಗೊಂಡಿತು. ಸಂಜೆ ದುರ್ಗಾಪೂಜೆ, ಆಶ್ಲೇಷ ಬಲಿ ನಡೆದವು. ಕೊರೊನಾ ಸೋಂಕಿತರನ್ನು ನೋಡುವ ದೃಷ್ಟಿ ಬದಲಾಗಬೇಕಾಗಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗುವಂತಾಗಲು ಮಾನವೀಯ ಮೌಲ್ಯಗಳ ಅಗತ್ಯತೆಯಿದೆ. ಈ ಮಹಾಮಾರಿಯನ್ನು ತೊಲಗಿಸಲು […]