2.77 ಎಕರೆ ಮಂದಿರ ನಿರ್ಮಾಣವಾಗಲಿ, ಮಸೀದಿಗೆ 5 ಎಕರೆ ಪರ್ಯಾಯ ನಿವೇಶನ : ಸುಪ್ರೀಂ ಕೋರ್ಟ್

Saturday, November 9th, 2019
supreem-court

ನವದೆಹಲಿ : ಸುಪ್ರೀಂ ಕೋರ್ಟ್ನ ಪಂಚ ಸದಸ್ಯ ಸಾಂವಿಧಾನಿಕ ಪೀಠ ದಶಕಗಳಿಂದ ಬಾಕಿ ಇದ್ದ ರಾಮ ಜನ್ಮಭೂಮಿ, ಬಾಬರಿ ಮಸೀದಿ ಭೂವಿವಾದವನ್ನು ಶುಕ್ರವಾರ ಇತ್ಯರ್ಥಗೊಳಿಸಿದೆ. ಇದರಂತೆ, ವಿವಾದಕ್ಕೀಡಾಗಿದ್ದ 2.77 ಎಕರೆ ಪ್ರದೇಶ ಕಂದಾಯ ದಾಖಲೆಗಳ ಪ್ರಕಾರ ಸರ್ಕಾರಕ್ಕೆ ಸೇರಿದೆ. ಅಲ್ಲಿ ರಾಮಮಂದಿರ ನಿರ್ಮಿಸಬಹುದು. ಆದರೆ, ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ನಿವೇಶನವನ್ನು ಸರ್ಕಾರ ಒದಗಿಸಬೇಕು ಎಂದು ಕೋರ್ಟ್ ನಿರ್ದೆಶಿಸಿದೆ. ಭಾರತ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಧಿಕ ಸಂಚಲನ ಸೃಷ್ಟಿಸಿದ್ದ ಪ್ರಕರಣದ ಐತಿಹಾಸಿಕ ತೀರ್ಪು ನೀಡಿದ […]

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ತೀರ್ಪು ಸೆಪ್ಟೆಂಬರ್ 30 ಕ್ಕೆ

Tuesday, September 28th, 2010
ರಾಮ ಜನ್ಮಭೂಮಿ - ಬಾಬ್ರಿ ಮಸೀದಿ

ನವದೆಹಲಿ : ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ತೀರ್ಪು ಮುಂದೂಡಲು ರಮೇಶ್ ಚಂದ್ರ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ತ್ರಿಸದಸ್ಯ ವಿಶೇಷ ಪೀಠವು ಸೆಪ್ಟೆಂಬರ್ 30ರಂದು ಗುರುವಾರ ತನ್ನ ಮಹತ್ವದ ತೀರ್ಪನ್ನು ಪ್ರಕಟಿಸಲಿದೆ. ಸೆಪ್ಟೆಂಬರ್ 24ರಂದು ಅಲಹಾಬಾದ್ ಹೈಕೋರ್ಟ್ ಪ್ರಕಟಿಸಬೇಕಿದ್ದ ತೀರ್ಪಿನ ತಾತ್ಕಾಲಿಕ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ಅಫ್ತಾಬ್ ಆಲಂ ಮತ್ತು ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ […]

ಅಯೋಧ್ಯ ವಿವಾದದ ತೀರ್ಪು ಮುಂದಕ್ಕೆ : ಜಿಲ್ಲಾಡಳಿತ ಹೊರಡಿಸಿರುವ ಆದೇಶ ರದ್ದು

Thursday, September 23rd, 2010
ಅಯೋಧ್ಯೆ

ಮಂಗಳೂರು : ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ತಡೆಹಿಡಿದ ಹಿನ್ನಲೆಯಲ್ಲಿ ಶುಕ್ರವಾರ ಪ್ರಕಟವಾಗಬೇಕಿದ್ದ ತೀರ್ಪು ಸೆಪ್ಟೆಂಬರ್ 28 ಕ್ಕೆ ಮುಂದೂಡಲಾಗಿದೆ. ರಮೇಶ್ ಚಂದ್ರ ತ್ರಿಪಾಠಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ಪೀಠವು ಶುಕ್ರವಾರ ಅಪರಾಹ್ನ ಪ್ರಕಟಿಸ ಬೇಕಿದ್ದ ತೀರ್ಪನ್ನು ಮುಂದೂಡಿದೆ. ತ್ರಿಪಾಠಿಯ  ಅರ್ಜಿಯನ್ನು ಮತ್ತೊಂದು ಪೀಠವು ವಿಚಾರಣೆ ನಡೆಸಲಿದ್ದು.  ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ನ್ಯಾಯಾಲಯ ಮುಂದೂಡಿ, ಆ ತನಕ ಅಲಹಾಬಾದ್ ಹೈಕೋರ್ಟ್ ತೀರ್ಪು […]