ಸ್ಕೂಟರ್ ಮತ್ತು ಟ್ಯಾಂಕರ್ ಡಿಕ್ಕಿ- ತಂದೆ ಮಗಳು ಸಾವು

Tuesday, September 29th, 2020
Karawar Accident

ಕಾರವಾರ: ಸ್ಕೂಟರ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಮಂಗಳವಾರ  ನಡೆದಿದೆ. ಯಲ್ಲಾಪುರದ ಅರೆಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದೆ. ವಿನೋದ್ ಕಿಂದಳಕರ್ (56) ಹಾಗೂ ಅವರ ಮಗಳು ಸುನೇಹಾ ಕಿಂದಳಕರ್ (12) ಮೃತ ದುರ್ದೈವಿಗಳು. ವಿನೋದ್ ಕಿಂದಳಕರ್ ಯಲ್ಲಾಪುರದ ಅಗ್ನಿಶಾಮಕ ದಳ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಗಳನ್ನು ಯಲ್ಲಾಪುರದಿಂದ ತಮ್ಮ […]

ಸ್ಕೂಟರಿಗೆ ಅಪರಿಚಿತ ದ್ವಿಚಕ್ರ ವಾಹನ ಹಿಟ್ ಎಂಡ್ ರನ್, ತಲೆಗೆ ಗಾಯಗೊಂಡಿದ್ದ ಸವಾರ ಸಾವು

Tuesday, September 1st, 2020
Scooter hit

ಬಂಟ್ವಾಳ: ಬಿ.ಸಿ.ರೋಡು ಸರ್ಕಲ್ ಬಳಿಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ವಾಹನವನ್ನು ಮೆಲ್ಕಾರ್ ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್ ಕೆ.ವಿ.ನೇತೃತ್ವದ ತಂಡ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾಹನ ಚಾಲಕನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಸೋಮವಾರ ಸಂಜೆ ನಡೆದ ಹಿಟ್ ಎಂಡ್ ರನ್ ಪ್ರಕರಣದಲ್ಲಿ ಗಂಭೀರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ್ವಿಚಕ್ರ ವಾಹನ ಸವಾರ ಪ್ರಕಾಶ್ ಆರ್. ಚೌಟ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ವೇಳೆ ಬಿ.ಸಿ.ರೋಡು […]

ಕಾಪು : ಪಾಂಗಾಳ ಸಮೀಪ ಕಾರು ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು

Tuesday, March 10th, 2020
car

ಕಾಪು : ಪಾಂಗಾಳ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ 9:45ರ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಉದ್ಯಾವರ ನಿವಾಸಿ, ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ ಸುಧಾಕರ್(40) ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಏರಿ ಇನ್ನೊಂದು ಬದಿಯ ರಸ್ತೆಗೆ ಪಲ್ಟಿಯಾಗಿ ಇದ್ದಿದ್ದು, ಇದೇ ವೇಳೆ ಉಡುಪಿ ಕಡೆಯಿಂದ ಕಾಪು […]

ಬಸ್, ಸ್ಕೂಟರ್ ನಡುವೆ ಡಿಕ್ಕಿ : ಮಗು ಸ್ಥಳದಲ್ಲೇ ಸಾವು

Tuesday, December 17th, 2019
Pratwi

ಮಡಿಕೇರಿ : ಕೆಎಸ್ ಆರ್ ಟಿಸಿ ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಮೂರು ವರ್ಷದ ಗಂಡು ಮಗುವೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪ ಬೈಚೇನಹಳ್ಳಿಯಲ್ಲಿ ನಡೆದಿದೆ. ಗೊಂದಿಬಸವನಹಳ್ಳಿ ನಿವಾಸಿಗಳಾದ ಪರಮೇಶ್ವರ ಹಾಗೂ ಗೀತಾ ದಂಪತಿಗಳ ಪುತ್ರ ಪ್ರಥ್ವಿ (3) ಮೃತ ದುರ್ದೈವಿ. ಮಡಿಕೇರಿಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಬಸ್ ದೇವಾಲಯದಿಂದ ಮರಳುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ನಲ್ಲಿದ್ದ ಪ್ರಥ್ವಿ ಮೇಲೆ ಬಸ್ ಚಕ್ರ ಹರಿದು ಸಾವು ಸಂಭವಿಸಿದೆ. ಕುಶಾಲನಗರ ಪೊಲೀಸರು […]

ಸ್ಕೂಟರ್‌ಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಸವಾರ ಲಾರಿಯ ಅಡಿಗೆ ಬಿದ್ದು ಸಾವು

Saturday, August 4th, 2018
Raveendra Nayak

ಹಳೆಯಂಗಡಿ : ಪಾವಂಜೆ ಬಳಿ ಶನಿವಾರ ಬೆಳಗ್ಗೆ 8.30ಕ್ಕೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಲ್ನಾಡು ನಿವಾಸಿ ರವೀಂದ್ರ ನಾಯಕ್ ( 45 ) ಸಾವನ್ನಪ್ಪಿದ ದುರ್ದೈವಿ. ರವೀಂದ್ರ ನಾಯಕ್ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಸ್ಕೂಟರ್‌ಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ರವೀಂದ್ರ ನಾಯಕ್ ಸಮೀಪದಲ್ಲಿ ಚಲಿಸುತ್ತಿದ್ದ ಲಾರಿಯ ಅಡಿಗೆ ಬಿದ್ದು ಅಪಘಾತ ಸಂಭವಿಸಿದೆ. ಸ್ಕಾರ್ಪಿಯೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೋಲಿಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸುರತ್ಕಲ್ ನ […]

ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ..ಸ್ಕೂಟರ್ ಸವಾರ ಸಾವು!

Monday, June 18th, 2018
accident

ಮಂಗಳೂರು: ಇಲ್ಲಿನ ತೊಕ್ಕೊಟ್ಟು ಬಳಿ ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಇತ್ತೀಚೆಗಷ್ಟೇ ವಿದೇಶದಿಂದ ಆಗಮಿಸಿದ್ದ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ತಲಪಾಡಿ ತಚ್ಚಣಿ ನಿವಾಸಿ ಮನೋಹರ್ ಬೆಳ್ಚಡ ( 50 ) ಸಾವನ್ನಪ್ಪಿರುವ ವ್ಯಕ್ತಿ. ಮನೋಹರ್ ಬೆಳ್ಚಡ ಇತ್ತೀಚೆಗಷ್ಟೇ ವಿದೇಶದಿಂದ ಬಂದು ಎರಡು ದಿನಗಳ ಹಿಂದೆ ಹೊಸ ಮನೆ ಗೃಹಪ್ರವೇಶ ಮಾಡಿದ್ದರು. ಘಟನೆ ಸಂಭಂದ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್-ಬಸ್ ನಡುವೆ ಡಿಕ್ಕಿ… ಸವಾರ ಸ್ಥಳದಲ್ಲೇ‌ ಸಾವು

Tuesday, March 27th, 2018
accident

ಮಂಗಳೂರು: ಸ್ಕೂಟರ್ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು ಸ್ಕೂಟರ್ ಸವಾರ ಸ್ಥಳದಲ್ಲೇ‌ ಸಾವಿಗೀಡಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿ ಎಂಬಲ್ಲಿ ನಡೆದಿದೆ. ಕಲ್ಲೇರಿ ನಿವಾಸಿ ಚಂದ್ರಶೇಖರ್ ಮೃತ ಸವಾರ. ಚಂದ್ರಶೇಖರ್ ಮೇಲೆ ಬಸ್‌‌ ಹರಿದಿದ್ದು, ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.