ಆಧಾರ್ ತಿದ್ದುಪಡಿಗೆ ಶುಲ್ಕ ವಸೂಲಿ ಮಾಡುತ್ತಿದ್ದ ಮೂವರು ಮಹಿಳಾ ಆಪರೇಟರ್ ಗಳನ್ನು ಕೆಲಸದಿಂದ ವಜಾ

Thursday, October 10th, 2019
naada-kacheri

ಬಂಟ್ವಾಳ : ಬಂಟ್ವಾಳದ ನಾಡ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ಅಧಾರ್ ನೊಂದಣಿ ಕೆಲಸ ಮಾಡುತ್ತಿದ್ದ ಮೂರು ಆಪರೇಟರ್ ಗಳನ್ನು ಕೆಲಸದಿಂದ ಸಸ್ಫೆಂಡ್ ಮಾಡುವಂತೆ ಎ.ಡಿ.ಸಿ.ರೂಪಾ ಅವರು ಅದೇಶ ಹೊರಡಿಸಿದ್ದಾರೆ. ವಿಟ್ಲದ ಪ್ರಭಾ ಹಾಗೂ ಬಂಟ್ವಾಳ ಅಧಾರ್ ಕೇಂದ್ರದ ಆಶಾ ಮತ್ತು ವಿಜಯ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಮೇಲಾಧಿಕಾರಿಗಳಿಗೆ ಯಾರಿಗೂ ಮಾಹಿತಿ ನೀಡದೆ ಅಧಾರ್ ಕೇಂದ್ರದಲ್ಲಿ ಸಿಬ್ಬಂದಿಗಳು ಅಧಾರ್ ತಿದ್ದುಪಡಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. […]

ಆಧಾರ್ ತಿದ್ದುಪಡಿ: ಅಂಚೆ ಕಚೇರಿಗಳಲ್ಲೂ ಅವಕಾಶ

Thursday, August 31st, 2017
dc

ಮಂಗಳೂರು : ಆಧಾರ್ ಕಾರ್ಡ್‍ಗಳಲ್ಲಿರುವ ದೋಷಗಳನ್ನು ಸರಿಪಡಿಸಲು ಅಂಚೆ ಕಚೇರಿಗಳಲ್ಲೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ತಿಳಿಸಿದ್ದಾರೆ. ಅವರು ಈ ಸಂಬಂಧ ತಮ್ಮ ಕಚೇರಿಯಲ್ಲಿ ಅಂಚೆ ಹಾಗೂ ಬಿಎಸ್‍ಎನ್‍ಎಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಪ್ರಸ್ತುತ ಸರಕಾರದ ವಿವಿಧ ಯೋಜನೆಗಳಿಗೆ ಆಧಾರ್ ಲಿಂಕಿಂಗ್ ಸಂದರ್ಭದಲ್ಲಿ ಆಧಾರ್ ಕಾರ್ಡ್‍ನಲ್ಲಿ ಮಾಹಿತಿ ತಾಳೆ ಹೊಂದದಿರುವುದರಿಂದ ಆಧಾರ್ ತಿದ್ದುಪಡಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 23 ಅಂಚೆ ಕಚೇರಿಗಳಲ್ಲಿ ಆಧಾರ್ ತಪ್ಪುಗಳನ್ನು ಸರಿಪಡಿಸಲು ಕೇಂದ್ರ ತೆರೆಯಲು […]