ಆನೆಕಲ್ಲು ಶಾಲೆಯಲ್ಲಿ ತುಳು ಸೌರಭ

Friday, July 8th, 2016
Thulu sourabha

ಮಂಜೇಶ್ವರ: ಗಡಿನಾಡು ಕಾಸರಗೋಡು ರಾಷ್ಟ್ರದಲ್ಲೇ ಬಹು ಭಾಷಾ ಸಂಗಮ ಭೂಮಿಯಾಗಿ ಗುರುತಿಸಿಕೊಂಡಿದ್ದು ವಿಶೇಷತೆಯಾಗಿದೆ. ಇಲ್ಲಿಯ ಬಹುಸಂಖ್ಯೆಯ ಜನರ ಮನೆಮಾತಾದ ತುಳು ಸಹಿತ ಇತರ ಭಾಷೆಗಳು ವಿದ್ಯಾರ್ಥಿಗಳಲ್ಲಿ ಶಾಲಾ ಕಲಿಕೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀಳಬಾರದೆಂಬ ಉದ್ದೇಶದಿಂದ ಆಯೋಜಿಸಲಾಗುವ ಕಾರ್ಯಕ್ರಮ ಉತ್ತಮ ಬೆಳವಣಿಗೆ ಎಂದು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ವ ಶಿಕ್ಷಾ ಅಭಿಯಾನ್ ಕಾಸರಗೋಡು, ಬಿಆರ್‌ಸಿ ವತಿಯಿಂದ ನಡೆಸಲ್ಪಡುವ ‘ತುಳು ಸೌರಭ ಆನೆಕಲ್ಲು ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತುಳು ಭಾಷಾ […]

2015ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ

Thursday, January 28th, 2016
Kodagu Gauramma Award

ಕುಂಬಳೆ: ಬೆಂಗಳೂರಿನ ಗಿರಿನಗರದಲ್ಲಿರುವ ರಾಮಾಶ್ರಮದಲ್ಲಿ 2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ,ಹಾಗೂ ಹತ್ತೆಸಳು ಪುಸ್ತಕ ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತೆ ಪ್ರಸನ್ನ ವಿ.ಚೆಕ್ಕೆಮನೆ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಕೊಡಗಿನ ಗೌರಮ್ಮ ಪ್ರಶಸ್ತಿ ಸ್ವೀಕರಿಸಿದರು.ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯ ಸಂಚಾಲಕಿ ವಿಜಯಾ ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಕೊಡಗಿನ ಗೌರಮ್ಮನ ಬಗ್ಗೆ ಹಾಗೂ ಹತ್ತೆಸಳು ಕೃತಿಯ ಬಗ್ಗೆ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೊಡಗಿನ ಗೌರಮ್ಮನ ಮರಿಮೊಮ್ಮಗಳು ಭುವನೇಶ್ವರಿ […]