ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಇಂದು ಬೆಳ್ಳಿಗ್ಗೆ ಐ.ಟಿ ದಾಳಿ

Thursday, January 16th, 2020
IT

ವಿರಾಜಪೇಟೆ : ನಟಿ ರಶ್ಮಿಕಾ ಮಂದಣ್ಣ ಅವರಿಗೆ ಗುರುವಾರ ಮುಂಜಾನೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ಅವರ ವಿರಾಜಪೇಟೆಯ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸಕ್ಕೆ ಇಂದು ಮುಂಜಾನೆ ಸುಮಾರು 7.30ರ ವೇಳೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳು ಖಾಸಗಿ ಟ್ಯಾಕ್ಸಿ ಮೂಲಕ ರಶ್ಮಿಕಾ ಮಂದಣ್ಣ ಮನೆಗೆ ಆಗಮಿಸಿದ್ದರು. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸದ್ಯ ವಿರಾಜಪೇಟೆಯ ಮನೆಯಲ್ಲಿಲ್ಲ […]

ಕೊನೆಗೂ ಮಾತನಾಡಿದರು ರಶ್ಮಿಕಾ ಮಂದಣ್ಣ, ‘ಬ್ರೇಕಪ್’ ವಿಚಾರದ ಬಗ್ಗೆ ಹೇಳಿದ್ದೇನು?

Tuesday, September 18th, 2018
rashmika

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ನಟಿ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದು, ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಿನ್ನೆ ಸಂಜೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ರಶ್ಮಿಕಾ, ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಯಾವುದೇ ಕಥೆಗೂ, ವಿವಾದಕ್ಕೂ ಎರಡು ಆಯಾಮಗಳಿರುತ್ತವೆ. ಇದು ತಿಳಿಯದೇ ಯಾರೂ ಮಾತನಾಡಬಾರದು. ನಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರಲು ಬಿಡಿ ಎಂದು ಮನವಿ […]

‘ಕಿರಿಕ್ ಪಾರ್ಟಿ’ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಸಂಭ್ರಮ

Thursday, April 5th, 2018
rashmika-mandanna

ಬೆಂಗಳೂರು: ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಕನ್ನಡಿಗರ ಮನಸ್ಸು ಗೆದ್ದು ‘ಕರ್ನಾಟಕ ಕ್ರಶ್’ ಅಂತಾನೆ ಪ್ರಖ್ಯಾತಿ ಪಡೆದುಕೊಂಡ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಚಿತ್ರರಂಗಕ್ಕೆ ಬಂದು ಎರಡೇ ವರ್ಷದಲ್ಲಿ ನಾಲ್ಕು ಹಿಟ್ ಸಿನಿಮಾಗಳನ್ನ ನೀಡಿರುವ ರಶ್ಮಿಕಾ ಇಂದು 22ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ರಶ್ಮಿಕಾ ಹುಟ್ಟುಹಬ್ಬದ ಆಚರಣೆ ಶುರುವಾಗಿದ್ದು ಕಿರಿಕ್ ಪಾರ್ಟಿ ಚಿತ್ರತಂಡದವರೆಲ್ಲರೂ ಸೇರಿ ರಶ್ಮಿಕಾ ಮನೆಯಲ್ಲಿ ಬರ್ತಡೇ ಸೆಲಬ್ರೆಟ್ ಮಾಡಿದ್ದಾರೆ. ಹುಟ್ಟುಹಬ್ಬದ ಆಚರಣೆಯಲ್ಲಿ ನಿರ್ದೇಶಕ ಕಿರಣ್ ರಾಜ್, ರಿಶಬ್ ಶೆಟ್ಟಿ, ನಿರ್ಮಾಪಕ […]

ಟಾಲಿವುಡ್ ಮಲ್ಟಿಸ್ಟಾರ್ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಿದ ರಶ್ಮಿಕಾ ಮಂದಣ್ಣ

Wednesday, March 21st, 2018
rashmika-mandanna

ಕನ್ನಡದಲ್ಲಿ ಸದ್ಯ ಲಕ್ಕಿ ಸ್ಟಾರ್ ಆಗಿರುವ ನಟಿ ಅಂದರೆ ರಶ್ಮಿಕಾ ಮಂದಣ್ಣ. ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಸೈಲೆಂಟ್ ಆಗಿ ಇಂಡಸ್ಟ್ರಿಗೆ ಬಂದ ರಶ್ಮಿಕಾ ನಂತರ ಒಂದರ ನಂತರ ಒಂದರಂತೆ ಕನ್ನಡದ ಬಿಗ್ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡಿದರು. ಮಾತ್ರವಲ್ಲದೆ ಟಾಲಿವುಡ್ ನಲ್ಲಿ ಕೂಡ ರಶ್ಮಿಕಾ ಸಿನಿಮಾ ಮಾಡಿ ಬಂದರು. ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಕುಮಾರ್, ಗಣೇಶ್ ಬಳಿಕ ಇದೀಗ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಆದರೆ ಅತ್ತ ತೆಲುಗಿನಲ್ಲಿಯೂ ಈ ‘ಚಮಕ್’ […]

ಚಮಕ್

Friday, December 29th, 2017
chamak

ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಚಮಕ್‌ ಸಿನಿಮಾ ಇಂದು (ಡಿ.29) ರಾಜ್ಯಾದ್ಯಂತ ರಿಲೀಸ್‌ ಆಗಿದೆ. ಮನರಂಜನೆಯ ಜತೆಗೆ ಕೌಟುಂಬಿಕ ಹಿನ್ನೆಲೆಯ ಕತೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕ ಸುನಿ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಅಡಿಯಲ್ಲಿ ಟಿ.ಆರ್‌ ಚಂದ್ರಶೇಖರ್‌ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಸಂತೋಷ್‌ ರಾಯ್‌ ಪತಾಜೆ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಸಾಧು ಕೋಕಿಲ, ಹನುಮಂತೆ ಗೌಡ್ರು, ವಿಜಯಲಕ್ಷ್ಮಿ ಉಪಾಧ್ಯ, ಸುಮಿತ್ರಮ್ಮ ಸೇರಿದಂತೆ ಹೆಸರಾಂತ ತಾರಾಗಣವೇ ಸಿನಿಮಾದಲ್ಲಿದೆ.