ಬರ್ಮಾ ಅಡಿಕೆ: ಕೃಷಿಕರಿಗೆ ಜಾಗೃತರಾಗುವಂತೆ ಕ್ಯಾಂಪ್ಕೊ ಮನವಿ

Friday, February 1st, 2019
SR-Sathishchandra

ಮಂಗಳೂರು  : ದೇಶದೊಳಕ್ಕೆ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದು ಈಗ ಮತ್ತೆ ಸುದ್ದಿಯಾಗುತ್ತಿದೆ. ವಿಶೇಷವಾಗಿ, ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ ಬರ್ಮಾದೇಶದ್ದೆಂದು ಹೇಳಲಾಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆ ಕಾನೂನು ಬಾಹಿರವಾಗಿ ಆಮದಾಗುತ್ತಿದ್ದು, ಸ್ಥಳೀಯ ವ್ಯಾಪಾರಿಗಳೂ, ಕೆಲವು ಕೃಷಿಕರೂ ಇದರಲ್ಲಿ ಶಾಮೀಲಾಗಿರುವುದು ವರದಿಯಾಗಿದೆ. ಉತ್ತಮಗುಣಮಟ್ಟದ ದೇಶೀಯ ಅಡಿಕೆಯೊಂದಿಗೆ, ಈ ಕಳಪೆ ಗುಣಮಟ್ಟದ ವಿದೇಶೀ ಅಡಿಕೆ ಕಲಬೆರೆಕೆಯಾಗಿ ಅಡಿಕೆ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಿ ಬೆಲೆಯ ಕುಸಿತಕ್ಕೆ ನೇರ ಕಾರಣವಾಗುತ್ತಿರುವುದು ತಿಳಿದು ಬಂದಿದೆ. ಈ ಅಕ್ರಮ ಆಮದು, ತೆರಿಗೆ ತಪ್ಪಿಸುವ ವ್ಯವಹಾರವಾಗಿದ್ದು […]

ಅಡಿಕೆ ಕ್ಯಾನ್ಸರ್ ಕಾರಕವಲ್ಲ , ಔಷಧೀಯ ಗುಣಾ ಹೊಂದಿದೆ: ಕ್ಯಾಂಪ್ಕೋ ಅಧ್ಯಕ್ಷ

Tuesday, April 10th, 2018
campco-2

ಮಂಗಳೂರು: ಅಡಿಕೆಯಲ್ಲಿರುವ ಔಷಧೀಯ ಅಂಶಗಳ ಬಗ್ಗೆ ಸಂಕಲನಗೊಳಿಸಿರುವ ಮಧ್ಯಂತರ ವರದಿಯನ್ನು ಕೇಂದ್ರ ಸರಕಾರಕ್ಕೆ ಎಪ್ರಿಲ್ 5ರಂದು ಸಲ್ಲಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಡಿಕೆ ಕ್ಯಾನ್ಸರ್ ಕಾರಕವಲ್ಲ. ಬದಲಾಗಿ ಅದು ಕ್ಯಾನ್ಸರನ್ನು ಗುಣಪಡಿಸುತ್ತದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ದೃಢಪಟ್ಟಿದೆ. ಈ ವರದಿಯನ್ನು ಕೇಂದ್ರ ಸರಕಾರದ ಕೃಷಿ ಸಚಿವ ರಾಧಮೋಹನ್ ಸಿಂಗ್ ಮತ್ತು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಕ್ಯಾಂಪ್ಕೋ ಮತ್ತು ಕರ್ನಾಟಕ ರಾಜ್ಯ ಅಡಿಕೆ ಫೆಡರೇಶನ್‌ನ ಪ್ರತಿನಿಧಿಗಳು ಕೇಂದ್ರ […]