ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮಂಗಳೂರಿನ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಮತ್ತು ಮಗ

Friday, April 16th, 2021
Hasana Rave Party

ಮಂಗಳೂರು : ಹಾಸನ ಜಿಲ್ಲೆಯ ಆಲೂರು ಠಾಣೆ ವ್ಯಾಪ್ತಿಯಲ್ಲಿ ಮಂಗಳೂರಿನ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ತಮ್ಮ ಪುತ್ರನ ಜೊತೆ ಸೇರಿ ಆಯೋಜನೆ ಮಾಡಿಸಿಕ್ಕಿ ಬಿದ್ದಿದ್ದಾರೆ. ರೇವ್ ಪಾರ್ಟಿ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಹಾಸನ ಎಸ್ಪಿ ಶ್ರೀನಿವಾಸ ಗೌಡ ಭಾನುವಾರ ನಸುಕಿನಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬಂದಿಯೊಂದಿಗೆ ದಾಳಿ ನಡೆಸಿ ಪಾರ್ಟಿಯ ಅಮಲಿನಲ್ಲಿದ್ದ 131 ಮಂದಿಯನ್ನು ವಶಕ್ಕೆ ಪಡೆದಿದ್ದರು. ಈ ಪೈಕಿ ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಅಂಡ್ ಇಕನಾಮಿಕ್ ಕ್ರೈಮ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ […]

ದ.ಕ.ಜಿಲ್ಲೆಯಲ್ಲಿ ಶುಕ್ರವಾರ 256 ಮಂದಿಗೆ ಕೊರೋನ ಪಾಸಿಟಿವ್

Friday, April 16th, 2021
Corona

ಮಂಗಳೂರು :  ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದ್ದು ಶುಕ್ರವಾರ 256 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಪರೀಕ್ಷೆ ಮಾಡಿದವರ ಪೈಕಿ 256 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಏರಿಕೆಯು ಆತಂಕಕ್ಕೂ ಕಾರಣವಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ 92 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 37,562 ಮಂದಿ ಕೊರೋನ ಸೋಂಕಿಗೊಳಗಾಗಿದ್ದು, ಈ ಪೈಕಿ 35,405 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1,414 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಕಾನ್ವೆಂಟ್‌ವೊಂದರಲ್ಲಿ […]

ಅಕ್ರಮ ಗೋಮಾಂಸ ಮಾರಾಟ: ಅಧಿಕಾರಿಗಳ ದಾಳಿ

Friday, April 16th, 2021
cow meat

ಚಿಕ್ಕಮಗಳೂರು : ಶುಕ್ರವಾರ ಬೆಳ್ಳಗ್ಗೆ ಸುಮಾರು 7- 40 ರ ಸಮಯ, ನಗರಸಭೆ ಆಯುಕ್ತರಾದ ಬಸವರಾಜ್ ಹಾಗೂ ಕೆಲ ಅಧಿಕಾರಿಗಳು ಮತ್ತು ಮೇಸ್ತ್ರಿಗಳಾದ ಅಣ್ಣಯ್ಯ, ರಮೇಶ್, ಮುರ್ಗೆಶ್ ಇನ್ನಿತರರು ನಗರದ ತಮಿಳ್ ಕಾಲೋನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಕೊಂಡಿದ್ದ 200 ಕೆ.ಜಿ.ಗೂ ಅಧಿಕ ಗೋಮಾಂಸವನ್ನು ಸೀಜ್ ಮಾಡಿ ಅಂಗಡಿಯನ್ನೂ ಸೀಲ್ ಮಾಡಿದ್ದಾರೆ. ಗೋಮಾಂಸದ ಅಂಗಡಿಗೆ ಸಂಬಂಧ ಪಟ್ಟವರು ಪರಾರಿಯಾಗಿದ್ದಾರೆಂದು ನಗರಸಭೆಯವರು ಮಾಹಿತಿ ನೀಡಿದ್ದಾರೆ. ಇವತ್ತಿನ ನಗರಸಭೆಯ ಕಾರ್ಯಾಚರಣೆಯನ್ನು ಶ್ರೀರಾಮಸೇನೆಯವರು ತುಂಬು ಹೃದಯದಿಂದ ಹೊಗಳಿದ್ದಾರೆ. ವರದಿ : ಶಂಭು ಮೆಗಾಮೀಡಿಯಾ […]

ತುಂಬೆ ಮಜಿಯಲ್ಲಿ ನಾಲ್ಕು ಮನೆಗಳಿಗೆ ನುಗ್ಗಿ ನಗದು ದರೋಡೆ

Friday, April 16th, 2021
tumbe

ಬಂಟ್ವಾಳ :   ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬೆಯಲ್ಲಿ ಗುರುವಾರ ನಡೆದಿದೆ. ಮನೆಮಂದಿ ನಾಟಕ ವೀಕ್ಷಣೆಗೆಂದು ತೆರಳಿದ್ದ ಸಂದರ್ಭ ತುಂಬೆ ಗ್ರಾಮದ ಮಜಿ ಎಂಬಲ್ಲಿ ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ 8 ಸಾವಿರ ರೂ. ನಗದನ್ನು ದೋಚಿದ್ದಾರೆ. ಇನ್ನುಳಿದ ಮೂರು ಮನೆಯ ಕಪಾಟು ಸಹಿತ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಜಾಲಾಡಿದ್ದು, ನಗದು ಸಹಿತ ಬೆಲೆಬಾಳುವ ಯಾವುದೇ […]

ಪುರಾಣ ಕಾಲದಿಂದಲೂ ಖಗೋಲ ಶಾಸ್ತ್ರದ ಅರಿವು ಭಾರತೀಯರಲ್ಲಿತ್ತು – ಕಲ್ಕೂರ

Friday, April 16th, 2021
Kalkura

ಮಂಗಳೂರು  : ಭಾರತೀಯರಿಗೆ ಪುರಾಣ ಕಾಲದಿಂದಲೂ ನಕ್ಷತ್ರ, ರಾಶಿ, ಸಂವತ್ಸರ ಇತ್ಯಾದಿ ಖಗೋಲ ಶಾಸ್ತ್ರದಿಗಳಿಗೆ ಸಂಬಂಧಿತ ಅರಿವು ಇತ್ತು, ಪಂಚಾಂಗ ಪಠನದ ಮೂಲಕ ಈ ಜ್ಞಾನ ಅನೂಚಾನವಾಗಿ ಬೆಳೆದು ಬಂದಿದ್ದು ಹೊಸ ವರ್ಷಾಚರಣೆಯಾದ ಯುಗಾದಿ ಹಬ್ಬದ ಸಂದರ್ಭ ಪಂಚಾಂಗ ಶ್ರವಣ ಮಾಡುವ ಮೂಲಕ ಜ್ಞಾನದ ಪ್ರಸರಣ ನಡೆಯುತ್ತಿದೆ. ಈ ಪರಂಪರೆಯು ಮುಂದಿನ ಪೀಳಿಗೆಗೂ ತಲುಪಬೇಕೆಂಬ ಮಹಾತ್ವಕಾಂಕ್ಷೆಯಿಂದ ಕಲ್ಕೂರ ಪ್ರತಿಷ್ಠಾನವು ವರ್ಷಂಪ್ರತಿ ‘ಬಿಸುಕಣಿ’ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ […]

ಸುಲಿಗೆ, ಕಳ್ಳತನ ನಡೆಸುತ್ತಿದ್ದ 6 ಮಂದಿ ದರೋಡೆಕೋರರ ಬಂಧನ

Thursday, April 15th, 2021
Robbers

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಲಿಗೆ, ಕಳ್ಳತನ ನಡೆಸುತ್ತಿದ್ದ 6 ಮಂದಿಯನ್ನು ಬಂಧಿಸಿದ್ದು, ಈ ಮೊದಲು  9 ಮಂದಿ ದರೋಡೆಕೋರರನ್ನು ಬಂಧಿಸಿದ್ದರು. ಇದೀಗ ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಮಂಗಳೂರಿನ ಕೆ.ಸಿ ರೋಡ್ನ ಮುಹಮ್ಮದ್ ಝುಬೈರ್, ಬೆಳ್ತಂಗಡಿಯ ಇಬ್ರಾಹಿಂ ಲತೀಫ್,‌ ಮೂಡಬಿದಿರೆಯ ರಾಕೇಶ್, ಅರ್ಜುನ್, ಉಪ್ಪಿನಂಗಡಿಯ ಮೋಹನ್ ಮತ್ತು ಕೋಣಾಜೆ ಬೋಳಿಯಾರ್ನ ಮನ್ಸೂರ್ ಬಂಧಿತರು. ಮಂಗಳೂರು ನಗರದಲ್ಲಿ 7 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 8, ಹಾಸನದಲ್ಲಿ 2, ಚಿಕ್ಕಮಗಳೂರಿನಲ್ಲಿ 3, ಕೊಡಗುವಿನಲ್ಲಿ 5, ಉಡುಪಿಯಲ್ಲಿ […]

ರೈಲ್ವೆ ಹಳಿಯಲ್ಲಿ ಯುವಕನ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ

Thursday, April 15th, 2021
savanuru Rail

ಕಡಬ: ಸವಣೂರು ರೈಲ್ವೆ ಗೇಟ್ ಬಳಿ ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಯುವಕ ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಸ್ಥಳಕ್ಕೆ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ರೈಲಿನ ಎಲ್‌ಪಿಜಿ ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ಬಾಲಕನಿಗೆ ವಿದ್ಯುತ್ ಶಾಕ್

Thursday, April 15th, 2021
Selfi

ಮಂಗಳೂರು : ರೈಲಿನ ಎಲ್‌ಪಿಜಿ ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲ್ವೆ ವಿದ್ಯುತ್‌ ತಂತಿ ತಗುಲಿ ಬಾಲಕನಿಗೆ ಗಂಭೀರ ಸುಟ್ಟ ಗಾಯವಾದ ಘಟನೆ ಏ.14ರ ಬುಧವಾರ ಇಲ್ಲಿನ ಕೆಂಜಾರು ತೋಕೂರು ಬಳಿ ನಿಲ್ಲಿಸಿದ್ದ ನಡೆದಿದೆ. ಜೋಕಟ್ಟೆ ಎಚ್‌ಪಿಸಿಎಲ್‌ ಕಾಲನಿ ನಿವಾಸಿ ಮಹಮ್ಮದ್‌ ದಿಶಾನ್‌(15)ವಿದ್ಯುತ್‌ ಅಘಾತಕ್ಕೊಳಗಾದ ಬಾಲಕ. ಎ.14ರಂದು ಇತರ ಸ್ನೇಹಿತರೊಂದಿಗೆ ರೈಲ್ವೆ ವ್ಯಾಗನ್‌ ಬಳಿ ಆಟವಾಡುತ್ತಿದ್ದಾಗ ದಿಶಾನ್‌ ಸೆಲ್ಫಿ ತೆಗೆಯಲು ಮೇಲೆ ಹೋಗಿದ್ದ ಎನ್ನಲಾಗಿದೆ. ಈ ಸಂದರ್ಭ ವಿದ್ಯುತ್‌ ತಂತಿ ಗಮನಿಸದೆ ಬಾಲಕ ದಿಶಾನ್‌ […]

ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Wednesday, April 14th, 2021
Reji

ಕಾಸರಗೋಡು : ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಎಪ್ರಿಲ್‌ 14ರ ಬುಧವಾರ ಮಧ್ಯಾಹ್ನ ವೆಸ್ಟ್ ಎಳೇರಿ ಸಮೀಪದ ಪರಪ್ಪಚ್ಚಾಲ್ ಎಂಬಲ್ಲಿ ನಡೆದಿದೆ. ಕಾವುಂದಳ ದ ರೆಜಿ ಅವರ ಪುತ್ರ ಆಲ್ಬಿನ್ (15) ಹಾಗೂ ಸಹೋದರ ಥಾಮಸ್ ಅವರ ಪುತ್ರ ಬ್ಲಾಸನ್ ಥಾಮಸ್ (20) ಮೃತಪಟ್ಟವರು. ಮೃತಪಟ್ಟವರು ಒಂದೇ ಕುಟುಂಬದವರಾಗಿದ್ದು ಆಲ್ಬಿನ್ ವಾರಕ್ಕೋಡ್ ಶಾಲೆಯ 10ನೇ ತರಗತಿ ಹಾಗೂ ಥಾಮಸ್ ಮಂಗಳೂರಿನ ಡಾ.ಎಂ.ವಿ.ಶೆಟ್ಟಿ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದನು. ಇಬ್ಬರು ಸಮೀಪದ ಚೈತ್ರ ವಾಹಿನಿ ಹೊಳೆಗೆ […]

ಶಾಸಕ ಯು.ಟಿ.ಖಾದರ್ ಸಂಚರಿಸುತ್ತಿದ್ದ ಕಾರು ಅಪಘಾತ, ಖಾದರ್ ಹಾಗೂ ಕಾರು ಚಾಲಕನಿಗೆ ಗಾಯ

Wednesday, April 14th, 2021
UT Khader

ಮಂಗಳೂರು : ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅವರು ಸಂಚರಿಸುತ್ತಿದ್ದ ಕಾರು  ಬುಧವಾರ ಬೆಳಗ್ಗೆ 8:45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ದಾವಣಗೆರೆ ಸಮೀಪದ ಒಲಾಲ್ ಕ್ರಾಸ್ ಎಂಬಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಖಾದರ್ ಅವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಕಾರು ಚಾಲಕ ಕೂಡಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೆಳಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ದಾವಣಗೆರೆ-ಆನಗೋಡು ಮಧ್ಯೆ ರಾಷ್ಟ್ರೀಯ ಹೆದ್ದಾರಿ 4ರ ಒಲಾಲ್ ಕ್ರಾಸ್ ಬಳಿ ಖಾದರ್ […]