ಮಂಗಳೂರು ಮಹಾನಗರ ಪಾಲಿಕೆ 2021-22ನೆ ಅವಧಿಗೆ ಬಜೆಟ್ ಮಂಡನೆ, 70 ಕೋಟಿ ರೂ. ಆದಾಯದ ನಿರೀಕ್ಷೆ

Thursday, January 28th, 2021
Budget

ಮಂಗಳೂರು : ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಕುರಿತಾದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಪ್ರಸಕ್ತ ಬಿಜೆಪಿ ಆಡಳಿತಾವಧಿಯ ಪ್ರಥಮ ಅಂದಾಜು ಬಜೆಟ್ ಮಂಡಿಸಿದರು. ಪಾಲಿಕೆ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆ ಮಾಡಲಾಗುವುದು, ಉಪ ಆಯುಕ್ತರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತ ದಳ ಸ್ಥಾಪಿಸಿ […]

ಉಳ್ಳಾಲದ ಜನರಿಗೆ ತಾಕತ್ತಿದ್ದರೆ ಮುಸ್ಲಿಮೇತರರನ್ನು ಶಾಸಕರನ್ನಾಗಿ ಮಾಡಿ : ಕಲ್ಲಡ್ಕ‌ ಪ್ರಭಾಕರ್ ಭಟ್‌

Thursday, January 28th, 2021
Kalladka Prabhakara Bhat

ಮಂಗಳೂರು : ಉಳ್ಳಾಲದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ದೇವಸ್ಥಾನ ಮತ್ತು ದೈವಸ್ಥಾನಗಳ ಕಾಣಿಕೆ ಹುಂಡಿಗೆ ಬೇಡದ ವಸ್ತುಗಳನ್ನು ಹಾಕಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವ ಕಾರ್ಯ ಮಾಡಲಾಗುತ್ತಿದೆ. ಹಾಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಆರ್‌ಎಸ್‌ಎಸ್‌ ಮುಖಂಡ ಡಾ.ಕಲ್ಲಡ್ಕ‌ ಪ್ರಭಾಕರ್ ಭಟ್  ಹೇಳಿದ್ದಾರೆ. ವಿಭಜನೆಯಾಗುವ ಮೊದಲು ಭಾರತೀಯರಾಗಿದ್ದ ಪಾಕಿಸ್ತಾನದ ಜನರ ಮಾನಸಿಕತೆಯೂ ವಿಭಜನೆಯ ಬಳಿಕ ಬದಲಾಯಿತು. ಆ ಭೂಮಿ ಕೆಂಪಾಯಿತು. ಸಿಂಧೂ ನದಿಯಲ್ಲಿ ರಕ್ತ ಹರಿಯಿತು. ಅಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ […]

ಹೆಂಡತಿಯೊಂದಿಗೆ ಕಾಲ ಕಳೆಯದ ಗಂಡ, ನೊಂದು ಆತ್ಮಹತ್ಯೆ

Wednesday, January 27th, 2021
Pallavi

ಕಾರವಾರ: ಗೆಳೆಯರೊಂದಿಗೆ ಕಾಲ ಕಳೆಯುತ್ತಿದ್ದ ಗಂಡನಿಂದ ಬೇಸತ್ತ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಇಂದಿರಾ ನಗರದಲ್ಲಿ ನಡೆದಿದೆ. ಮೂಲತಃ ಶಿರಸಿ ತಾಲೂಕಿನ ಗಿಡಮಾವಿನಕಟ್ಟೆಯ ನಿವಾಸಿಯಾಗಿದ್ದ ಪಲ್ಲವಿ ವಿಜಯ ದೇವಾಡಿಗ (27) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಎರಡು ವರ್ಷಗಳಿಂದ ಪತಿಯೊಂದಿಗೆ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಪತಿ ತನ್ನ ಜೊತೆ ಹೆಚ್ಚಿನ ಸಮಯ ಕಳೆಯುವುದಿಲ್ಲ ಎಂದು ಕೊರಗುತ್ತಿದ್ದರು. ಇಂದು ಪತಿ ಗೆಳೆಯರೊಂದಿಗೆ ಕ್ರಿಕೆಟ್ ನೋಡಲು ತೆರಳಿದ್ದರಿಂದ ಪಲ್ಲವಿ ಸಿಟ್ಟಾಗಿದ್ದರು. […]

ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ವಜ್ರದ ಆಸೆಗೆ 1.35 ಲಕ್ಷ ರೂ. ಕಳಕೊಂಡ ಮಂಗಳೂರಿನ ವ್ಯಕ್ತಿ

Wednesday, January 27th, 2021
daimond

ಮಂಗಳೂರು : ವ್ಯಕ್ತಿ 35 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು 1.35 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಜ.3ರಂದು ರೆನಾಲ್ಟ್ ಫ್ರಿನ್ಸ್ ಕ್ರಿಸ್ಟಫರ್ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಚಾಟಿಂಗ್ ನಡೆಸುತ್ತಿದ್ದು, ಉಡುಗೊರೆ ಕಳುಹಿಸುವುದಾಗಿ ಹೇಳಿದ್ದರು. ಜ.18ರಂದು ಮಹಿಳೆ ಕರೆ ಮಾಡಿ, ದಿಲ್ಲಿ ಕಸ್ಟಮ್ಸ್ ಆಫೀಸರ್ ಎಂದು ಹೇಳಿ ಏರ್‌ಪೋರ್ಟ್‌ಗೆ ಪಾರ್ಸೆಲ್ ಬಂದಿದ್ದು, ಅದಕ್ಕೆ ಡೆಲಿವರಿ ಚಾರ್ಜ್ ಎಂದು ಹೇಳಿ ಅವರು ಕಳುಹಿಸಿದ […]

ಸಾವಿರಕಂಬದ ಬಸದಿಯಲ್ಲಿ ಕೊರೊನಾ ನಿವಾರಣೆಗೆ ಲಕ್ಷದೀಪೋತ್ಸವ

Wednesday, January 27th, 2021
lakshadeepotsava

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಸಾವಿರಕಂಬದ ಬಸದಿಯಲ್ಲಿ ಕೊರೊನಾ ನಿವಾರಣೆಯಾಗಬೇಕೆಂಬ ಉದ್ದೇಶದಿಂದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಸಂಕಲ್ಪಿಸಿದ ಲಕ್ಷದೀಪೋತ್ಸವ ಹರಕೆಯನ್ನು ಮಂಗಳವಾರ ರಾತ್ರಿ ಜರುಗಿಸಲಾಯಿತು. ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದಲ್ಲಿ ಕೊರೊನಾ ವ್ಯಾಪಿಸಿದ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದು, ಸಂಪತ್ತು ನಷ್ಟದ ಜೊತೆಗೆ ಉದ್ಯೋಗದ ಅಸ್ಥಿರತೆ ಕಾಡಿತ್ತು. ಹಿಂದೆ ರಾಜರು ಅನಾರೋಗ್ಯಕ್ಕೀಡಾದಾಗಲೂ ಸಾವಿರ ಕಂಬದ ಬಸದಿಯ ಚಂದ್ರನಾಥ ಸ್ವಾಮಿಯಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈಗ ಕೊರೊನಾಮುಕ್ತವಾಗಲು ಇಲ್ಲಿ ಲಕ್ಷದೀಪೋತ್ಸವದ ಸಂಕಲ್ಪ ನಡೆಸಲಾಗಿತ್ತು. […]

ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ 72ನೇ ಗಣರಾಜ್ಯೋತ್ಸವದ ಸಂದೇಶ, ಧ್ವಜಾರೋಹಣ

Tuesday, January 26th, 2021
Republic Day

ಮಂಗಳೂರು : ನೆಹರೂ ಮೈದಾನದಲ್ಲಿ ದ.ಕ. ಜಿಲ್ಲಾಡಳಿತದಿಂದ ವತಿಯಿಂದ 72ನೇ ಗಣರಾಜ್ಯೋತ್ಸವು‌ ಮಂಗಳವಾರ ನಡೆಯಿತು‌. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ಗೈದು ಪರೇಡ್ ವೀಕ್ಷಿಸಿದರು. ಗಣರಾಜ್ಯೋತ್ಸವದ ಸಂದೇಶ ನೀಡಿದ ಅವರು ಜಿಲ್ಲೆಯ ಅಭಿವೃದ್ಧಿಗಾಗಿ  ಸರಕಾರ ಅನೇಕ ಜನಪಯೋಗಿ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಆ ಪೈಕಿ ಮೂರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೊಚ್ಚಿ ಮಂಗಳೂರು ನಡುವೆ 450 ಕಿಲೋ ಮೀಟರ್ ಉದ್ದದ ನೈಸರ್ಗಿಕ ಅನಿಲ ಪೈಪ್ ಲೈನ್. ಕುಳಾಯಿಯಲ್ಲಿ196.51 ಕೋಟಿರೂಪಾಯಿ ವೆಚ್ಚದ  ಮೀನುಗಾರಿಕಾ ಬಂದರು. ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡಮಿಯು ಬಜ್ಪೆ […]

ಶ್ರೀನಿವಾಸ ಫಾರ್ಮಸಿ ಕಾಲೇಜ್​ ನ ನಾಲ್ವರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು

Tuesday, January 26th, 2021
corona-positivedk

ಮಂಗಳೂರು : ವಲಚ್ಚಿಲ್ ಶ್ರೀನಿವಾಸ ಫಾರ್ಮಸಿ ಕಾಲೇಜ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢವಾಗಿರುವ ಕಾರಣ ಪ್ರಾಂಶುಪಾಲರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ನಾಲ್ವರೂ ಕೇರಳದ ವಿದ್ಯಾರ್ಥಿಗಳಾಗಿದ್ದು ಇವರು ತಮ್ಮ ರಾಜ್ಯದಿಂದ ನಗರದ ಕಾಲೇಜಿಗೆ ಬರುವಾಗ ತಪಾಸಣೆ ನಡೆಸಿ ನೆಗೆಟಿವ್ ವರದಿ ಇಲ್ಲದೆ ಬಂದಿದ್ದರು. ಇದೀಗ ಅವರನ್ನು ತಪಾಸಣೆ ನಡೆಸಿದಾಗ ನಾಲ್ವರಲ್ಲಿಯೂ ಸೋಂಕು ದೃಢಪಟ್ಟಿದೆ. ಇಬ್ಬರು ಸೋಂಕಿತರು ಹಾಸ್ಟೆಲ್‌ನಲ್ಲಿ ಐಸೋಲೇಷನ್ಗೆ ಒಳಗಾಗಿದ್ದಾರೆ. ಆದರೆ, ಕಾಸರಗೋಡು ಹಾಗೂ ಎರ್ನಾಕುಲಂನ ಇಬ್ಬರು ಸೋಂಕಿತರು ಕಾಲೇಜಿನಿಂದ ಪರಾರಿಯಾಗಿ […]

ಜಲಪಾತದ ವೀಕ್ಷಣೆಗೆ ಹೋಗಿದ್ದ ಯುವಕ ಮಣ್ಣಿನಡಿ ಸಿಲುಕಿ ನಾಪತ್ತೆ

Tuesday, January 26th, 2021
Bangar Palke

ಬೆಳ್ತಂಗಡಿ:  ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಅರಣ್ಯ ಪ್ರದೇಶದಲ್ಲಿರುವ ಜಲಪಾತಕ್ಕೆ ತೆರಳಿದ್ದ ಉಜಿರೆ ಮೂಲದ ಯುವಕ ಮಣ್ಣಿನಡಿ ಸಿಲುಕಿ  ನಾಪತ್ತೆಯಾಗಿರುವ  ಘಟನೆ ನಡೆದಿದೆ. ಜಲಪಾತದ  ವೀಕ್ಷಣೆಗೆ ಹೋಗಿದ್ದ ನಾಲ್ವರು ಯುವಕರ ಮೇಲೆ ದಿಢೀರನೆ ಕುಸಿದಿದೆ. ಘಟನೆಯಲ್ಲಿ ಮೂವರು ಯುವಕರು ಪಾರಾಗಿದ್ದು ಓರ್ವ ಮಣ್ಣಿನಡಿಯಲ್ಲಿ ಸಿಲುಕಿದ್ದಾನೆ. ನಾಪತ್ತೆಯಾದ ಯುವಕನ್ನು ಬೆಳ್ತಂಗಡಿ ಸಮೀಪದ ಕಾಶಿಬೆಟ್ಟು ಸಮೀಪದ ನಿವಾಸಿ ಎಂದು ಹೇಳಲಾಗಿದೆ. ಅರಣ್ಯದಂಚಿನಲ್ಲಿ ಇರುವ ಈ ಜಲಪಾತ ಜನವಸತಿಯಿಂದ ದೂರವಿದೆ. ಇತ್ತೀಚೆಗಷ್ಟೆ ಜಲಪಾತಕ್ಕೆ ನಿಷೇಧ ಹೇರುವಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಒತ್ತಡ […]

ತುಳುವಿನಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದ ನಗರ ಪೊಲೀಸ್ ಕಮಿಷನರ್

Monday, January 25th, 2021
commissioner

ಮಂಗಳೂರು :  ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತುಳು ಭಾಷೆಯಲ್ಲಿ ಮಂಗಳೂರಿನ ಜನತೆಗೆ ಗಣರಾಜ್ಯೋತ್ಸವ ಕುರಿತು ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಪ್ರತಿವರ್ಷ ಜ.26ರಂದು ವಿಶ್ವದೆಲ್ಲೆಡೆ ದೇಶದ ಗಣರಾಜ್ಯೋತ್ಸವವನ್ನು ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಗರದ ಸಮಸ್ತ ನಾಗರಿಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ತುಳು ಭಾಷೆಯಲ್ಲಿದ್ದು, ಕರಾವಳಿಯ ಜನತೆ ಸಂತಸ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಪ್ರತಿ ವರ್ಷ ಜನವರಿ ಇರ್‌ವತ್ತ ಆಜೆಕ್ಕ್‌ (26) ಲೋಕೊಡು ನಮ್ಮ ಭಾರತ ದೇಶದ ಗಣರಾಜ್ಯೋತ್ಸವನ್‌ ಬಾರೀ ಗೌಜಿಡ್‌ […]

ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿಗೆ ಪುತ್ತೂರಿನ ರಾಕೇಶ್ ಕೃಷ್ಣ ಮತ್ತು ಬೆಂಗಳೂರಿನ ವೀರ್ ಕಶ್ಯಪ್ ಆಯ್ಕೆ

Monday, January 25th, 2021
Rakesh Krishna

ಪುತ್ತೂರು : ಪ್ರತೀ ವರ್ಷ ಗಣರಾಜ್ಯೋತ್ಸವದ ಸಂದರ್ಭ ಕೇಂದ್ರ ಸರಕಾರ ನೀಡುವ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿಗೆ ಈ ಬಾರಿ ಕರ್ನಾಟಕದ ಇಬ್ಬರು  ಆಯ್ಕೆಯಾಗಿದ್ದಾರೆ. ವಿಜ್ಞಾನ ಅನ್ವೇಷಣೆ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಹಾಗೂ ದಿಲ್ಲಿ ಆರ್ಮಿ ಪಬ್ಲಿಕ್ ಸ್ಕೂಲಿನಲ್ಲಿ ಕಲಿಯುತ್ತಿರುವ ಬೆಂಗಳೂರಿನ ವೀರ್ ಕಶ್ಯಪ್ ಪ್ರಶಸ್ತಿಗೆ ಆಯ್ಕೆಯಾದ ಕನ್ನಡಿಗರು. ಇವರಿಬ್ಬರಿಗೂ ಆವಿಷ್ಕಾರ ವಿಭಾಗದಲ್ಲಿ ಪುರಸ್ಕಾರ ಲಭಿಸಿದೆ.  ಒಟ್ಟು 32 ಮಕ್ಕಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಜೇತರೊಂದಿಗೆ ಪ್ರಧಾನಿ ಮೋದಿ ಇಂದು […]