ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮಹಿಳೆಯರಿಂದ ಧರ್ಮದೇಟು

Thursday, August 9th, 2018
man Kundapura

ಉಡುಪಿ: ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮಹಿಳೆಯರು ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಕುಂದಾಪುರದ ಎಲ್ಐಸಿ ರಸ್ತೆಯಲ್ಲಿ ನಡೆದಿದೆ. ಬಹಳ ದಿನಗಳಿಂದ ನಗರದ ಎಲ್ಐಸಿ ರಸ್ತೆಯಲ್ಲಿ ಯುವತಿಯರು ಮತ್ತು ಮಹಿಳೆಯರ ಜೊತೆ ಈತ ಅಸಭ್ಯವಾಗಿ ವರ್ತಿಸುತ್ತಿದ್ದ. ಆತನ ವರ್ತನೆಯು ಮಿತಿ ಮೀರಿದ್ದು, ಇಂದು ಮಹಿಳೆಯರು ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಲ್ಲದೆ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ […]

ಹಾರೆ ಹಿಡಿದು ರಸ್ತೆ ಹೊಂಡವನ್ನು ಮುಚ್ಚಿದ ಎಸ್ಐ ಮಂಜುನಾಥ್

Thursday, August 9th, 2018
manjunath

ಮಂಗಳೂರು: ರಸ್ತೆ ಹೊಂಡದಿಂದ ಆಗುತ್ತಿರುವ ಸಮಸ್ಯೆಯನ್ನು ಮನಗಂಡು ಸುಳ್ಯ ಪೊಲೀಸ್ ಠಾಣೆಯ ಎಸ್ಐ ಮಂಜುನಾಥ್ ಅವರು ಹಾರೆ ಹಿಡಿದು ರಸ್ತೆ ಹೊಂಡವನ್ನು ಮುಚ್ಚಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಮಾಣಿ ಮೈಸೂರು ರಸ್ತೆಯ ಪೆರಾಜೆ ಬಳಿ ಎಸ್ಐ ಅವರು ಹೊಂಡ ಮುಚ್ಚುವ ಕೆಲಸಕ್ಕೆ ಪರಿಕರ ಒಯ್ದು ಸ್ವತಃ ಹಾರೆಯಿಂದ ಮುಚ್ಚಿದ್ದಾರೆ. ಅವರು ಕೆಲಸ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ. ಕಳೆದ ಹಲವು ದಿನಗಳಿಂದ ಮಾಣಿ- ಮೈಸೂರು ಹೆದ್ದಾರಿಯ ಪೆರಾಜೆಯಲ್ಲಿ ರಸ್ತೆ ಮಧ್ಯೆ ಭಾಗದಲ್ಲಿ ಹೊಂಡವೊಂದು ವಾಹನ ಸಂಚಾರಕ್ಕೆ […]

ಟೆಂಪೋ ಮಗುಚಿ ಬಿದ್ದು ಇಬ್ಬರು ಸಾವು..!

Thursday, August 9th, 2018
tampo-accident

ಕಡಬ: ಕಡಬ ಸಮೀಪದ ಸುಬ್ರಹ್ಮಣ್ಯ- ಇಂಚ್ಲಂಪಾಡಿ ರಸ್ತೆಯ ಮರ್ದಾಳ ಎಂಬಲ್ಲಿ ಟೆಂಪೋ ಮಗುಚಿ ಬಿದ್ದು ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಓರ್ವನ ಪರಿಸ್ಥಿತಿ ಗಂಭಿರವಾಗಿದೆ. ಮೃತರನ್ನು ಚಿನ್ನಮ್ಮ ( 55) ಮತ್ತು ಹರೀಶ್ ( 30) ಎಂದು ಗುರುತಿಸಲಾಗಿದೆ. ಕೊಕ್ಕಡ ಮೂಲದವರಾದ ಇವರು ಬೆಳಗ್ಗೆ ಕಾಂಕ್ರಿಟ್ ಕೆಲಸಕ್ಕೆಂದು ಹೊರಟವರು ಎಂದು ತಿಳಿದು ಬಂದಿದೆ.

ತಿರುಪತಿ ಮತ್ತು ಶಬರಿಮಲೆ ದೇವಸ್ಥಾನಗಳಲ್ಲಿ ತುಳುವಿನಲ್ಲಿ ಮಾಹಿತಿ

Wednesday, August 8th, 2018
ACB

ಮಂಗಳೂರು : ತುಳುವರು ಹೆಚ್ಚಾಗಿ ಭೇಟಿ ನೀಡುತ್ತಿರುವ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ ಮತ್ತು ಕೇರಳದ ಶಬರಿ ಮಲೆ ಅಯ್ಯಪ್ಪ ದೇವಸ್ಥಾನಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ತುಳುಭಾಷೆಯಲ್ಲಿ ಸಾರ್ವಜನಿಕ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿಯವರು ಎರಡೂ ದೇವಸ್ಥಾನಗಳ ಮುಖ್ಯಸ್ಥರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ತಿರುಪತಿಯ ತಿರುಮಲ ದೇವಸ್ಥಾನಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಾವಿರಾರು ಭಕ್ತರು ವರ್ಷಂಪ್ರತಿ ಮುಡಿಪು ಅರ್ಪಿಸುವ ಉದ್ದೇಶದಿಂದ ಭೇಟಿ ನೀಡುತ್ತಾರೆ. […]

ಕೊಡಿಯಾಲ್ ಬೈಲ್ ನಲ್ಲಿ ಡೆಂಗ್ಯು ಜಾಗೃತಿ ಹಾಗೂ ಸೊಳ್ಳೆ ಪರದೆ ವಿತರಣೆ

Wednesday, August 8th, 2018
prakash

ಮಂಗಳೂರು  :  ಕೊಡಿಯಾಲ್ ಬೈಲ್ 30ನೇ ವಾರ್ಡ್ ನ ವಿವೇಕನಗರ ಬಳ್ಳಾಲ್ ಬಾಗ್ ನಲ್ಲಿ, ವಿವೇಕಾನಂದ ಪಾರ್ಕ್ ಸಮಿತಿ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸತ್ಯಸಾರಮಾಣಿ ದೈವಸ್ಥಾನದ ವತಿಯಿಂದ ನಡೆದ ಸ್ವಚ್ಚತಾ ಕಾರ್ಯ ಹಾಗೂ ಮಲೇರಿಯಾ , ಡೆಂಗ್ಯು ಜಾಗೃತಿ ಹಾಗೂ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ ಸ್ಥಳೀಯ ಕಾರ್ಪೋರೇಟರ್ ಪ್ರಕಾಶ್ ಬಿ ಸಾಲ್ಯಾನ್‌ರವರ ನೇತ್ರತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಗರಿಕರು ಸ್ವಚ್ಚ ಪರಿಸರ ನಮ್ಮೆಲ್ಲರ ಹೊಣೆ ಎಂದು ಭಾವಿಸಿ ಕೆಲಸ ನಿರ್ವಹಿಸಿದಾಗ ಮಾತ್ರ […]

“ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ’ ಐ.ಜಿ.ಪಿ ರೂಪಾ ವಿಶೇಷ ಉಪನ್ಯಾಸ

Wednesday, August 8th, 2018
Roopa Ayyer

ಮೂಡಬಿದಿರೆ: ಪ್ರತಿಯೊಬ್ಬ ಮಹಿಳೆಯೂ ಸಬಲೀಕರಣದ ಪಥದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು. ಕುಟುಂಬಕ್ಕೆ ಎರಡನೇ ಆದಾಯ ಅನಿರ್ವಾಯವಾದಾಗ ಮಾತ್ರ ಮಹಿಳೆಯರು ಉದ್ಯೋಗ ಮಾಡಬೇಕು ಎನ್ನುವ ಮನಸ್ಥಿತಿ ಬದಲಾಗಿ, ವ್ಯಕ್ತಿತ್ವ ವಿಕಸನದ ಉದ್ದೇಶವನ್ನೂ ಹೊಂದಿರಬೇಕು ಎಂದು ಐ.ಜಿ.ಪಿ ರೂಪಾ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಮಂಗಳವಾರ ಕುವೆಂಪು ಸಭಾಭವನದಲ್ಲಿ ವುಮೆನ್ ಡೆವಲಪ್‌ಮೆಂಟ್ ಸೆಲ್ ಐಕ್ಯೂಎಸಿ ಅಧೀನದಲ್ಲಿ “ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ’ ಎಂಬ ವಿಷಯದಲ್ಲಿ ಆಯೋಜಿಸದ್ದ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು ಮಾತನಡುತ್ತಿದ್ದರು. ’ಈಗಿನ ಪೈಪೋಟಿ ಯುಗದಲ್ಲಿ ನಾವು ಸಮಸ್ಯೆಗಳಿಗೆ ಸಾಮಾಜಿಕ […]

ರೈತರಿಗೆ ಹಾಗೂ ಜೇನು ಕೃಷಿ ಆಸಕ್ತರಿಗೆ ತರಬೇತಿ ಮತ್ತು ಸಹಾಯಧನ

Wednesday, August 8th, 2018
Honey farm

ಮಂಗಳೂರು : ರೈತರಿಗೆ ಹಾಗೂ ಜೇನು ಕೃಷಿ ಆಸಕ್ತರಿಗೆ ತೋಟಗಾರಿಕಾ ಇಲಾಖಾ ವತಿಯಿಂದ ಜೇನು ಕೃಷಿ ತರಭೇತಿ ಕಾರ್ಯಕ್ರಮ ಆಯೋಜಿಲಾಗುತ್ತಿದ್ದು, ಆಸಕ್ತ ರೈತರು ಅರ್ಜಿಯನ್ನು ಹಾಗೂ ಆದಾರ್ ಪ್ರತಿಯನ್ನು ಆಗಸ್ಟ್ 10 ರ ಒಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಮಂಗಳೂರು ಅಥವಾ ರೈತ ಸಂಪರ್ಕ ಕೇಂದ್ರ ಮೂಡುಬಿದಿರೆಯಲ್ಲಿ ನೀಡಿ ನೋಂದಾಯಿಸಲು ಕೋರಿದೆ. ತರಭೇತಿ ಪಡೆದ ರೈತರಿಗೆ ಜೇನುಪೆಟ್ಟಿಗೆ ಹಾಗೂ ಕುಟುಂಬಗಳಿಗೆ ಸಹಾಯಧನ ನೀಡಲಾಗುವುದು. ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಪ್ರಕಟಣೆ ತಿಳಿಸಿದೆ.  ದೂರವಾಣಿ 0824 […]

ಚದುರಂಗ ಪಂದ್ಯಾವಳಿ 2018: ಪ್ರಸಿದ್ಧಿ ಭಟ್ ಮತ್ತು ಜಗದೀಶ್ ವಿಜೇತರು

Wednesday, August 8th, 2018
chess

ಮೈಸೂರು  : ಕರ್ನಾಟಕ ರಾಜ್ಯ ಮಟ್ಟದ ಮುಕ್ತ ಹಾಗು ಬಾಲಕಿಯರ 17 ವರ್ಷದ ಒಳಗಿನವರ ಚದುರಂಗ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜಗದೀಶ್ ಪಿ ಹಾಗು ಮೈಸೂರಿನ ಪ್ರಸಿದ್ಧಿ ಭಟ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮೈಸೂರು ಚೆಸ್ ಸೆಂಟರ್ ಹಾಗು ಯುನೈಟೆಡ್‍ ಕರ್ನಾಟಕ ಚೆಸ್ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ರಾಘವೇಂದ್ರ ಮಟದಲ್ಲಿ ಆಗಷ್ಟ್ 3 ರಿಂದ 5ರವರೆಗೆ ನಡೆಸಲಾಗಿತ್ತು. ಬಾಲಕರ ವಿಭಾಗದಲ್ಲಿ ಪುತ್ತೂರಿನ ಶ್ರೀಕೃಷ್ಣ  ಪ್ರಣಾಮ ಎರಡನೇ ಸ್ಥಾನ ಗಳಿಸಿದರೆ ಹುಬ್ಬಳ್ಳಿಯ ಶ್ರಿಯಾ ರೇವಂಕರ್ ಬಾಲಕಿಯರ ವಿಭಾಗದಲ್ಲಿ ರನ್ನರ್ […]

ಕುಂದಾಪುರ : ದನ ಕಳ್ಳತನ ಮಾಡುತ್ತಿರುವುದು ಸಿಸಿ ಟಿವಿ ಯಲ್ಲಿ ಪತ್ತೆ

Wednesday, August 8th, 2018
cow-thief

ಕುಂದಾಪುರ:ಬಸ್ರೂರಿನ ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್ ಬಳಿ ರಸ್ತೆಯಲ್ಲಿ ಕಾರಿನಲ್ಲಿ ಬಂದು ದನ ಕಳ್ಳತನ ಮಾಡುತ್ತಿರುವುದು ಸಿಸಿ ಟಿವಿ ಯಲ್ಲಿ ದಾಖಲಾಗಿದೆ. ಆ.6ರಂದು ಬೆಳಗ್ಗೆ 1.30 ರ ಸುಮಾರಿಗೆ  ಬಿಳಿ ಮಾರುತಿ ಸುಝುಕಿ ರಿಟ್ಸ್ ಕಾರಿನಲ್ಲಿ ಬಂದ ನಾಲ್ಕು ಮಂದಿ ಪೆಟ್ರೋಲ್ ಬಂಕ್ ಬಳಿ ದನವನ್ನು ಹಿಡಿಯಲು ಪ್ರಯತ್ನಿಸುತ್ತಿರುವುದು ಮತ್ತು ಒಂದು ಕರುವನ್ನು ಹಿಡಿಯುವುದು ಸ್ಪಷ್ಟವಾಗಿ  ಟಿವಿ ಯಲ್ಲಿ ದಾಖಲಾಗಿದೆ. ಕುಂದಾಪುರ ಉಡುಪಿ ಪ್ರದೇಶಗಳಲ್ಲಿ ಪ್ರತಿ ದಿನ ದನ ಕಳ್ಳತನ ವಾಗುತ್ತಿದ್ದು ಜನ ಭಯ ಭೀತಿಯಿಂದ ರಾತ್ರಿ ಹೊತ್ತು ಕಾವಲು ಕಾಯುವಂತಾಗಿದೆ.  ಈ ಘಟನೆ ಪೆಟ್ರೋಲ್ ಬಂಕ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ. […]

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ವಿಧಿವಶ

Tuesday, August 7th, 2018
Karunanidhi

ಚೆನ್ನೈ:  ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಕಳೆದ 10 ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಇಂದು ಮತ್ತಷ್ಟು ಕ್ಷೀಣಿಸಿತ್ತು. ಅಂಗಾಂಗಳ ಕಾರ್ಯನಿರ್ವಹಣೆಯೂ ಕ್ಷೀಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಡಿಎಂಕೆ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಜಮಾಯಿಸಿದ್ದು,  ಆಸ್ಪತ್ರೆ ಒಳಗೆ ಮತ್ತು ಹೊರಗೆ […]