ಲಂಚ ಸ್ವೀಕರಿಸುತ್ತಿದ್ದ ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಪೊಲೀಸರ ಬಲೆಗೆ

Wednesday, November 29th, 2023
B-Manjunath-Poojary

ಕುಂದಾಪುರ : ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದ ಕುಂದಾಪುರ ಅರಣ್ಯ ಇಲಾಖೆಯ ನೌಕರರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ. ಆಲೂರಿನ ಆದಿತ್ಯ ಎಂಬವರು ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದನು. ಈ ಬಗ್ಗೆ ಆದಿತ್ಯ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು. ಅದರಂತೆ […]

ಅರ್ಹತೆ ಇಲ್ಲದವರು ‘ಲೈಂಗಿಕ ಸಮಸ್ಯೆಗಳಿಗೆ ಪರಿಹಾರ’ ಕ್ಲಿನಿಕ್ ನಡೆಸುವಂತಿಲ್ಲ

Wednesday, November 29th, 2023
sex-problem

ಮಂಗಳೂರು : ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ನೀಡುವ ವ್ಯಕ್ತಿ ಮತ್ತು ಸಂಸ್ಥೆಗಳು ಆರೋಗ್ಯ ಇಲಾಖೆಯಲ್ಲಿ ನೋಂದಣಿಗೊಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ. ಅವರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಡೆಂಟಲ್, ಆಯುಷ್, ಹೋಮಿಯೋಪಥಿ, ಫಿಸಿಯೋಥೆರಿಪಿ, ನ್ಯಾಚುರೋಪತಿ ಸೇರಿದಂತೆ ವ್ಯೆದ್ಯಕೀಯ ಸೇವೆ ನೀಡುವ ಪ್ರತಿಯೊಂದು ಕ್ಲಿನಿಕ್, ಆಸ್ಪತ್ರೆ ಮತ್ತು ವ್ಯಕ್ತಿಗಳು, ಪ್ರಯೋಗಾಲಯ, ಪರೀಕ್ಷಾ ಕೇಂದ್ರಗಳು, ಅಲ್ಟ್ರಾಸೌಂಡ್ ಸಂಸ್ಥೆಗಳು […]

ಆಟೋದಲ್ಲಿ ಇದ್ದ ವ್ಯಕ್ತಿಯ ಮೇಲೆ ಟಿಪ್ಪರ್ ಹರಿಸಿ ಕೊಲೆ

Wednesday, November 29th, 2023
Narayana-Bhat

ಕಾರವಾರ: ಟಿಪ್ಪರ್ ಹರಿಸಿ ವ್ಯಕ್ತಿಯೊಬ್ಬನನ್ನು ಕೊಲೆಗೈದ ಘಟನೆ ಉತ್ತರಕನ್ನಡದ ಕಾರವಾರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತನನ್ನು ಓಲ್ವಿನ್ ಲೋಬೋ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಕೇಶವ ನಾಯ್ಕ ಹಾಗೂ ವಸಂತ ನಾಯ್ಕ ಎಂದು ಗುರುತಿಸಲಾಗಿದೆ. ವಿನಾಯಕ ನಾರಾಯಣ ಭಟ್ ಎಂಬಾತ ಈ ಕೃತ್ಯ ಎಸಗಿದ್ದು, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇಶವ ನಾಯ್ಕನ ಜೊತೆ ಜಗಳವಾಡಿದ್ದ ಎಂದು ತಿಳಿದು ಬಂದಿದೆ. ಗಲಾಟೆಯ ವಿಚಾರಕ್ಕೆ ಓಲ್ವಿನ್ ಲೋಬೋ, ಕೇಶವ ನಾಯ್ಕ ಹಾಗೂ […]

ಅಂಗಡಿಗೆ ತಿಂಡಿ ಖರೀದಿಸಲು ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಗೆ 6ವರ್ಷಗಳ ಶಿಕ್ಷೆ

Tuesday, November 28th, 2023
ಅಂಗಡಿಗೆ ತಿಂಡಿ ಖರೀದಿಸಲು ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಗೆ 6ವರ್ಷಗಳ ಶಿಕ್ಷೆ

ಮಂಗಳೂರು : ಅಂಗಡಿಗೆ ತಿಂಡಿ ಖರೀದಿಸಲು ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ವಿಜಯ್ ಪ್ರವೀಣ್ ಕುಟಿನ್ಹಾ (29) ಎಂಬಾತ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ನ್ಯಾಯಾಧೀಶೆ ಮಂಜುಳಾ ಇಟ್ಟಿ 6ವರ್ಷಗಳ ಕಾಲ ಶಿಕ್ಷೆ ವಿಧಿಸಿ ಈ ತೀರ್ಪು ನೀಡಿದ್ದಾರೆ. 2022ರ ಎ.20ರಂದು ಸಂಜೆ ಬಾಲಕಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಅಂಗಡಿಯೊಂದಕ್ಕೆ ತಿಂಡಿ ಖರೀದಿಸಲು ತೆರಳಿದ್ದಾಳೆ ಎನ್ನಲಾಗಿದೆ. ಆಗ […]

ನ.30 ರಂದು ಪುತ್ತೂರಿನಲ್ಲಿ ಸಹಕಾರಿಗಳ ‘‘ಜಿಲ್ಲಾ ಮಟ್ಟದ ಕ್ರೀಡಾಕೂಟ’’

Tuesday, November 28th, 2023
SCDCC Bank

ಮಂಗಳೂರು: ಸಹಕಾರ ಸಂಘಗಳ ಸದಸ್ಯರುಗಳನ್ನು, ಸಿಬ್ಬಂದಿ ವರ್ಗವನ್ನು ಹಾಗೂ ನವೋದಯ ಸ್ವ- ಸಹಾಯ ಸಂಘಗಳ ಸದಸ್ಯರುಗಳನ್ನು, ಪ್ರೇರಕರನ್ನು ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸೇರಿದಂತೆ ಎಲ್ಲರನ್ನೂ ಒಂದೇ ಕಡೆ ಒಗ್ಗೂಡಿ ಸುವ ಉದ್ದೇಶವನ್ನಿಟ್ಟುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ (ರಿ.), ಮಂಗಳೂರು ಇದರ ಸಹಭಾಗಿತ್ವದಲ್ಲಿ ‘‘ಜಿಲ್ಲಾ ಮಟ್ಟದ ಕ್ರೀಡಾಕೂಟ’’ವನ್ನುನ.30ನೇ ಗುರುವಾರ ಪೂರ್ವಾಹ್ನ 9 ಗಂಟೆಗೆ ಪುತ್ತೂರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜುನಲ್ಲಿ ಹಮ್ಮಿಕೊಂಡಿದೆ ಎ೦ದು ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ […]

ಅತ್ತಾವರದ ಐವರಿ ಟವರ್‌ ನ 12 ನೇ ಮಹಡಿಯಲ್ಲಿ ಬೆಂಕಿ, ಓರ್ವ ಮಹಿಳೆ ಮೃತ್ಯು

Tuesday, November 28th, 2023
Ivory-tower

ಮಂಗಳೂರು : ನಗರದ ಅತ್ತಾವರದ ಐವರಿ ಟವರ್‌ ಫ್ಲ್ಯಾಟ್ ನಲ್ಲಿ ನಡೆದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಸಹೈನ್ ಮುಸಾಬ್ (57) ಮೃತಪಟ್ಟ ಮಹಿಳೆ. ಮಂಗಳವಾರ ಮುಂಜಾನೆ 4 ಗಂಟೆಯ ಹೊತ್ತಿಗೆ ಬಹುಮಹಡಿ ಫ್ಲ್ಯಾಟ್ ನ 12 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ, ಮನೆಯಲ್ಲಿದ್ದ ಇತರರು ಹೊರ ಬಂದಿದ್ದರು. ಆದರೆ ಮುಸಾಬ್ ಶೌಚಾಲಯದೊಳಗಿದ್ದ ಕಾರಣ ಹೊರಬರಲಾಗದೇ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ […]

ಮಂಗಳೂರಿನಲ್ಲಿ ನಾಯಿ ಸಾಕಬೇಕಾದರೆ ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ ಅಗತ್ಯ

Monday, November 27th, 2023
ಮಂಗಳೂರಿನಲ್ಲಿ ನಾಯಿ ಸಾಕಬೇಕಾದರೆ ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ ಅಗತ್ಯ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಬೀದಿ ನಾಯಿ ಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ನಗರದಲ್ಲಿ ರೇಬಿಸ್‌ಹರಡುವ ಸಂಭವ ಹೆಚ್ಚಾಗಿರುತ್ತದೆ. ಈ ಎಲ್ಲ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯು ನಗರದಲ್ಲಿ ಸಾಕು ನಾಯಿಗಳಿಗೆ ಪರವಾನಿಗೆ ಪಡೆಯುವಂತೆ ಸೂಚಿಸಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಪಾಲಿಕೆಯಿಂದ ಪರವಾನಿಗೆ ಪಡೆಯಲು ಅರ್ಜಿ ಪ್ರತಿ ಪಡೆದುಕೊಳ್ಳಬೇಕು. ಸಾಕು ನಾಯಿಗೆ ನೀಡಲಾಗಿರುವ ಲಸಿಕಾ ದಾಖಲೆ, ಮಾಲೀಕರ ಆಧಾರ್ ಕಾರ್ಡ್, ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ, ಸಾಕು […]

ಪಕ್ಕದ ಮನೆಯ ಹುಡುಗಿಯ ಜೊತೆ ಪರಾರಿಯಾದ ಹುಡುಗ, ಪ್ರೇಮ ಶಂಕೆ

Monday, November 27th, 2023
Rasma Sinan

ಬಂಟ್ವಾಳ : ಅಕ್ಕಪಕ್ಕದ ಮನೆಯ ಹುಡುಗ ಮತ್ತು ಹುಡುಗಿ ಇಬ್ಬರು ಒಂದೇ ದಿನ ನಾಪತ್ತೆಯಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಎಂಬಲ್ಲಿ ನಡೆದಿದೆ. ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ಕಾಣೆಯಾದವರು. ಅಕ್ಕಪಕ್ಕದ ಮನೆಯ ಹುಡುಗಿ ಮತ್ತು ಹುಡುಗನ ನಡುವೆ ಪ್ರೀತಿ ಪ್ರೇಮದ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಇವರಿಬ್ಬರು ಸಲುಗೆಯಿಂದ ಇದ್ದುದಲ್ಲದೆ, ಪರಿಚಯಸ್ಥರಾಗಿದ್ದಾರೆ. ಹಾಗಾಗಿ ಇವರಿಬ್ಬರು […]

ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ-ರಥೋತ್ಸವ

Monday, November 27th, 2023
kodi habba

ಕುಂದಾಪುರ : ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ಧ್ವಜಪುರ (ಕೋಟೇಶ್ವರ)ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ-ರಥೋತ್ಸವ ನ.27 ಸೋಮವಾರ ವಿಜೃಂಭಣೆಯಿಂದ ನಡೆಯಿತು. ಕರಾವಳಿಯ ಪ್ರಥಮ ರಥೋತ್ಸವ ಎಂಬ ಹೆಗ್ಗಳಿಕೆ ಪಡೆದಿರುವ ಕೋಟೇಶ್ವರ ರಥೋತ್ಸವದ ಅಂಗವಾಗಿ ನ.20ರಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಸೋಮವಾರ ದಿವಾಗಂಟೆ 11-31ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ನಡೆಯಿತು. ಕೋಟೇಶ್ವರ ರಥೋತ್ಸವದ ಸಂದರ್ಭದಲ್ಲಿ ಗರುಡ ಪ್ರದಕ್ಷಣೆ ಸಹಜ ಪ್ರಕ್ರಿಯೆ. ಎಷ್ಟೋ ಜನ ಭಕ್ತರು ಗರುಡ […]

ಕೊಟ್ಟಾರ ಚೌಕಿ ಸರ್ಕಲ್ ಗೆ ಕ್ಯಾಪ್ಟನ್ ಪ್ರಾಂಜಲ್ ಹೆಸರು : ಡಾ.ಭರತ್ ಶೆಟ್ಟಿ ವೈ

Monday, November 27th, 2023
pranjal

ಮಂಗಳೂರು : ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್ ಗೆ ಹೆಸರು ಇಡಲಾಗುದು ಎಂದು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.ಇದರ ಜತೆಗೆ ಮಂಗಳೂರಿನಲ್ಲಿ ಕಲಿತು ,ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ.ಪ್ರಾಂಜಲ್ ಹೆಸರಿಡುವುದು ಸೂಕ್ತವಾಗಿದೆ .ಈ ಬಗ್ಗೆ ಮಂಗಳೂರು ಪಾಲಿಕೆ ಕ್ರಮ ಕೈಗೊಳ್ಳುವಂತೆ […]