ಅಮೃತ ಸ್ವಾತಂತ್ರ್ಯ ಸಂಭ್ರಮ ‘ನಮ್ಮ ಅಬ್ಬಕ್ಕ – 2022’

Monday, February 28th, 2022
Namma Abbakka

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮತ್ತು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಎರಡು ದಿನಗಳ ‘ನಮ್ಮ ಅಬ್ಬಕ್ಕ – 2022. ಅಮೃತ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮವು ರವಿವಾರ ಸಂಪನ್ನಗೊಂಡಿತು. ಈ ಸಂದರ್ಭ ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರೋತ್ಸವ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಹಾಗೂ ರಾಣಿ ಅಬ್ಬಕ್ಕ ಸೇವಾ ಪುರಸ್ಕಾರವನ್ನು ವಿಜಯಲಕ್ಷ್ಮಿ ಶೆಟ್ಟಿಗೆ ಪ್ರದಾನ ಮಾಡಲಾಯಿತು. ಮೊದಲ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ […]

ಬೆಳ್ತಂಗಡಿ ಮಸೀದಿಯಲ್ಲಿ ಬಿಯರ್ ಬಾಟಲಿ, ಸ್ಥಳೀಯರಲ್ಲಿ ಆತಂಕ

Thursday, February 24th, 2022
Mosque

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮುರ ಜುಮ್ಮಾ ಮಸೀದಿಯಲ್ಲಿ  ಬಿಯರ್ ಬಾಟಲಿ ಎಸೆದು ದಾಂಧಲೆ ನಡೆಸಿರುವ ಘಟನೆ ನಡೆದಿದೆ. ಬುಧವಾರ ತಡ ರಾತ್ರಿಯವೇಳೆ ಮಸೀದಿಯ ಆವರಣದೊಳಗೆ ಬಿಯರ್ ಬಾಟಲಿ ಎಸೆದಿದ್ದಾರೆ. ಆವರಣದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೇ ಬಿಯರ್ ಬಾಟ್ಲಿಗಳು ಬಿದ್ದಿರುವುದಾಗಿ ತಿಳಿದು ಬಂದಿದೆ. ದುಷ್ಕರ್ಮಿಗಳ ಕುಕೃತ್ಯವು ಸ್ಥಳದಲ್ಲಿದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಸೀದಿಯೊಳಗೆ ಬಿಯರ್ ಬಾಟ್ಲಿ ಎಸೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದವರ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ

ರಷ್ಯಾ – ಉಕ್ರೇನ್ ಸಮರದಲ್ಲಿ ಸಿಲುಕಿಕೊಂಡಿರುವ ಮಂಗಳೂರು ವಿದ್ಯಾರ್ಥಿಗಳು

Thursday, February 24th, 2022
Anaina Anna

ಮಂಗಳೂರು : ಉಕ್ರೇನ್‌ ವಿದ್ಯಾಭ್ಯಾಸ ಮಾಡುತ್ತಿರುವ ಭಾರತದ ಹಲವಾರು ವಿದ್ಯಾರ್ಥಿಗಳಲ್ಲಿ  ಮಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಇದ್ದು ಅವರು  ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ  ಯುದ್ಧ ಆರಂಭವಾಗಿದ್ದು. ಮಂಗಳೂರಿ‌ನ ದೇರೇಬೈಲ್ ನಿವಾಸಿ ಅನೈನಾ ಅನ್ನ ಅವರು ಉಕ್ರೇನ್‌ನ ಖಾರ್ಕಿವ್ ನಗರದ ಗಡಿ ಭಾಗದಲ್ಲಿ ‌ ಇದ್ದು  ಮಂಗಳೂರಿನಲ್ಲಿ ತಾಯಿ ಸಂಧ್ಯಾ ಜೊತೆ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಉಕ್ರೇನ್‌ ನಲ್ಲಿ ಸಿಲುಕಿರುವ ಮತ್ತೋರ್ವ ಮಂಗಳೂರು ಪಡೀಲು ನಿವಾಸಿ ಕ್ಲಾಟನ್ ಅವರು ಸದ್ಯಕ್ಕೆ ಯಾವುದೇ ರೀತಿ […]

ಅಮಲು ಪದಾರ್ಥ ಸೇವಿಸಿ ಮನೆಗೆ ಬಂದ ಮಗನನ್ನು ಕೊಡಲಿಯ ಮರದ ಹಿಡಿಯಿಂದ ಹೊಡೆದು ಕೊಲೆ ಮಾಡಿದ ತಂದೆ

Thursday, February 24th, 2022
dinesh

ವಿಟ್ಲ : ತಂದೆ ತನ್ನ ಮಗನನ್ನೇ ಹೊಡೆದು ಕೊಲೆಗೈದ ಘಟನೆ ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ಫೆ.23ರಂದು ರಾತ್ರಿ ನಡೆದಿದೆ. ವಿಟ್ಲ ಮುಡ್ನೂರು ಗ್ರಾಮದ ಕಾಂತಮೂಲೆ ನಿವಾಸಿ ದಿನೇಶ್(40)ರವರು ಕೊಲೆಯಾದವರು. ಕಾಂತಮೂಲೆಯ ಮನೆಯಲ್ಲಿ ತಂದೆ ವಸಂತ ಗೌಡ ಮತ್ತು ಮಗ ಮಾತ್ರವೇ ವಾಸವಾಗಿದ್ದು, ಮೃತ ದಿನೇಶನು ಪ್ರತಿ ದಿನ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದು ತಂದೆಯಲ್ಲಿ ಗಲಾಟೆ ಮಾಡುತ್ತಿದ್ದು ಇದರಿಂದ ತಂದೆ ವಸಂತ ಗೌಡ ಅದೇ ಕೋಪದಿಂದ ಫೆ.23ರಂದು ರಾತ್ರಿ ಕೊಡಲಿಯ ಮರದ ಹಿಡಿಯಿಂದ ದಿನೇಶನ ತಲೆ ಹಾಗೂ ಮುಖದ […]

ನೂರು ರೂಪಾಯಿಗೆ ಗಂಡ ಹೆಂಡತಿ ಜಗಳ, ಗಂಡನನ್ನು ಕೊಲೆ ಮಾಡಿದ ಬಾವ

Thursday, February 24th, 2022
Keshava Poojary

ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಬರಮೇಲು ನಿವಾಸಿ ಕೇಶವ ಪೂಜಾರಿ (47) ಮೃತಪಟ್ಟವರು. ಅವರ ಬಾವ ಮಣಿನಾಲ್ಕೂರು ಗ್ರಾಮದ ಅಶೋಕ್ ಯಾನೆ ಚಂದಪ್ಪ (45) ಪೂಜಾರಿ ಬಂಧಿತ ಆರೋಪಿ. ಕೇಶವ ಪೂಜಾರಿ ಮಂಗಳೂರಿನಲ್ಲಿ ಕೆಲಸಕ್ಕಿದ್ದು, ಜ.31ರಂದು ಮನೆಗೆ ಬಂದ ಅವರು, ಸಂಬಳದ ಹಣವನ್ನು ಪತ್ನಿ ಪ್ರೇಮಾ ಅವರಲ್ಲಿ ನೀಡಿದ್ದಾರೆ. ಬಳಿಕ ನೂರು ರೂಪಾಯಿ ಕೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಪ್ರೇಮಾ ಈ ವಿಚಾರವನ್ನು ತನ್ನ ಅಣ್ಣ ಅಶೋಕ್ ಪೂಜಾರಿಗೆ ತಿಳಿಸಿದ್ದಾರೆ. ಮನೆಗೆ ಬಂದ […]

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳ ಬಂಧನ, ಸೆಕ್ಸನ್ 144 ಮುಂದುವರಿಕೆ

Tuesday, February 22nd, 2022
Shimogga-Murder

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ನಿನ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಾಸಿಮ್, ನದೀಮ್ ಎಂಬುವರನ್ನು ಬಂಧಿಸಲಾಗಿತ್ತು, ಉಳಿದ ಐವರು  ಆರೋಪಿಗಳನ್ನು ಇಂದು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಶಿವಮೊಗ್ಗ ನಗರದ ನಿವಾಸಿಗಳು. ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದುವರೆಗೆ 13 ಎಫ್ಐಆರ್ ದಾಖಲಾಗಿವೆ ಎಂದು ಹೇಳಿದರು. ಅಂತೆಯೇ […]

ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಬಿ.ಅಶೋಕ್ ಕುಮಾರ್

Tuesday, February 22nd, 2022
B AshokKumar

ಮಂಗಳೂರು : ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಗೀತಾ ಇಲೆಕ್ಟ್ರಿಕಲ್ಸ್ ನ ಬಿ.ಅಶೋಕ್ ಕುಮಾರ್ ಆಯ್ಕೆ ಯಾಗಿದ್ದಾರೆ. ಅಶೋಕ್ ಕುಮಾರ್ ಅವರು ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಪ್ರಸಕ್ತ ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಅಧ್ಯಕ್ಶರಾಗಿದ್ದಾರೆ.

ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ 49 ವಿದ್ಯಾರ್ಥಿನಿಯರು ಮನೆಗೆ

Wednesday, February 16th, 2022
Hijab Students

ಮಂಗಳೂರು : ಬುಧವಾರ ಕಾಲೇಜುಗಳಿಗೆ ಹಿಜಾಬ್ ಧರಿಸಿ ಬಂದ 49 ವಿದ್ಯಾರ್ಥಿನಿಯರು ಪ್ರವೇಶ ನಿರಾಕರಿಸಿದ್ದಕ್ಕಾಗಿ ಹಿಂತಿರುಗಿ ಮನೆಗೆ ತೆರಳಿದ್ದಾರೆ. ಮಂಗಳೂರು ಕಾರ್‌ಸ್ಟ್ರೀಟ್‌ನ ದಯಾನಂದ ಪೈ ಪದವಿ ಕಾಲೇಜಿನ ಇಬ್ಬರು, ಮುಡಿಪು ಪದವಿ ಕಾಲೇಜಿನ 22, ಮೊಂಟೆಪದವು ಕಾಲೇಜಿನ 11, ಪೊಂಪೈ ಕಾಲೇಜಿನ 26, ಇಂದಿರಾ ನಗರ ಪದವಿ ಕಾಲೇಜಿನ 15 ಹಾಗು ಮೂಡುಬಿದಿರೆ ಮಹಾವೀರ ಕಾಲೇಜಿನ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಮುಡಿಪು ಪದವಿ ಕಾಲೇಜು ಹಾಗು ಮೊಂಟೆಪದವು ಕಾಲೇಜಿನ ವಿದ್ಯಾರ್ಥಿನಿಯರು ಆಡಳಿತ ಮಂಡಳಿ ಹಾಗು ಪ್ರಾಂಶುಪಾಲರ ಸೂಚನೆ […]

ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

Wednesday, February 16th, 2022
devandabettu

ಬಂಟ್ವಾಳ : ತಾಲ್ಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುತಕ್ತ ಬುಧವಾರ ನಡೆದ ‘ಕುಟುಂಬ ಸಮಾವೇಶ’ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಕುಟುಂಬ ಪ್ರಭೋದನ್ ಪ್ರಮುಖ್ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಪ್ರತಿದಿನ ನಾವು ಮನೆಯಲ್ಲಿ ಭಜನೆ ಮತ್ತು ಭೋಜನಕ್ಕೆ ಒಟ್ಟಾಗಿ ಕುಟುಂಬಸ್ಥರು ಸೇರಿಕೊಂಡಾಗ ಅಂತಹ ಮನೆ ದೇವಾಲಯವಾಗಿ ಪರಿವರ್ತನೆಗೊಳ್ಳುತ್ತದೆ. ಅನ್ನಬ್ರಹ್ಮನನ್ನು ನಾವು ಸ್ವೀಕರಿಸುವ ಮೊದಲು ಭಗವಂತನ ಸ್ಮರಿಸಿ ಭಕ್ತಿಯಿಂದ ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು ಎಂದು ಆರ್ ಎಸ್ ಎಸ್ […]

ಮಾ.2 ರಂದು ಮನಪಾ ಮೇಯರ್, ಉಪ ಮೇಯರ್ ಚುನಾವಣೆ

Wednesday, February 16th, 2022
mcc

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆ ಇದೇ ಮಾರ್ಚ್ 2ರ ಬುಧವಾರ ನಗರದ ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಈ ಚುನಾವಣೆಯನ್ನು ನಡೆಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರ ಪ್ರಕಟಣೆ ತಿಳಿಸಿದೆ.