39 ಕೋಟಿ ನಿವ್ವಳ ಲಾಭ ಗಳಿಸಿದ ಕಾರ್ಪೋರೇಷನ್ ಬ್ಯಾಂಕ್: ಲಾಭಾಂಶದತ್ತ ದಾಪುಗಾಲು

Thursday, August 11th, 2016
Jai-Kumar-Garg

ಮಂಗಳೂರು: ಸಾರ್ವಜನಿಕ ರಂಗದ ಪ್ರತಿಷ್ಠಿತ ಕಾರ್ಪೋರೇಷನ್ ಬ್ಯಾಂಕ್ 2016-17ರ ಜೂನ್ ಅಂತ್ಯದ ಮೊದಲ ತ್ರೈಮಾಸಿಕದಲ್ಲಿ 39 ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬ್ಯಾಂಕ್ ಆಡಳಿತ ನಿರ್ದೇಶಕ, ಸಿಇಒ ಜೈ ಕುಮಾರ್ ಗಾರ್ಗ್‌, ಕಳೆದ ವರ್ಷ ಬ್ಯಾಂಕ್ ನಷ್ಟವಾಗಿದ್ದರೂ ಈ ಬಾರಿ ಸ್ವಲ್ಪ ಮಟ್ಟಿನ ಲಾಭಾಂಶದತ್ತ ದಾಪುಗಾಲು ಹಾಕಿದೆ ಎಂದರು. ಬ್ಯಾಂಕ್‌ನ ಠೇವಣಾತಿಯು 1,98,502 ಕೋಟಿ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 1,92,102 ಕೋಟಿ ಆಗಿತ್ತು. ಅಂದರೆ ಶೇ.3.33 […]

ಮೀಯಪದವು ಶ್ರೀ ವಿದ್ಯಾವಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಾಗಸಾಕಿ ದಿನಾಚರಣೆ

Thursday, August 11th, 2016
Nagasaki-day

ಮಂಜೇಶ್ವರ: ’ಇನ್ನು ಯುದ್ಧ ಬೇಡ’ ಎಂಬ ಸಂದೇಶದೊಂದಿಗೆ ಮೀಯಪದವು ಶ್ರೀ ವಿದ್ಯಾವಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಾಗಸಾಕಿ ದಿನವನ್ನು ಮಂಗಳವಾರ ಆಚರಿಸಲಾಯಿತು. ಶಾಲಾ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಿತ್ರ ಕಲಾ ಶಿಕ್ಷಕರಾದ ವೆಂಕಟರಮಣ ಕಾರಂತ, ಕೃಷ್ಣ ಶರ್ಮ, ಚಿತ್ರ ಕಲಾ ವಿದ್ಯಾರ್ಥಿ ಶರತ್, ವಿದ್ಯಾರ್ಥಿಗಳು ಬ್ಯಾನರ್‌ನಲ್ಲಿ ಯುದ್ಧ ವಿರೋಧಿ ಚಿತ್ರ ಹಾಗೂ ಘೋಷಣೆಗಳನ್ನು ಬರೆದರು.

ಮರಿಗೌಡ ಜೈಲು ಪಾಲು: ಮೈಸೂರು ಜಿಲ್ಲಾಧಿಕಾರಿ ಸಿ ಶಿಖಾ ವರ್ಗಾವಣೆ

Thursday, August 11th, 2016
Marigouda,-Shikha

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಸಿ ಶಿಖಾ ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಬುಧವಾರ ಸಂಜೆ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಸಿ ಶಿಖಾ ಅವರಿಗೆ ಧಮಕಿ ಹಾಕಿ, ಕರ್ತ್ಯವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕೆ.ಮರಿಗೌಡ ಜೈಲುಪಾಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಮರಿಗೌಡ ವಿರುದ್ಧ ಜಿಲ್ಲಾಧಿಕಾರಿ ಶಿಖಾ ಅವರು ನಜರ್ ಬಾದ್ ಠಾಣೆಗೆ ದೂರು ನೀಡಿದ್ದರು. ಜಾಮೀನು ಸಿಗದೆ ತಲೆಮರೆಸಿಕೊಂಡಿದ್ದ ಮರಿಗೌಡ ಆಗಸ್ಟ್ […]

ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

Thursday, August 11th, 2016
Sthanyapana-sapthaha

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಬಿ.ಸಿರೋಡ್ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್, ಸಿಡಿಪಿಓ ಮಲ್ಲಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ್ ಪೂಜಾರಿ, ಹಿರಿಯ ಮೇಲ್ವಿಚಾರಕಿ ಗಾಯತ್ರಿ […]

ಕೊಂಡೆವೂರಿನಲ್ಲಿ ಹರಿಕಥಾ ಸಂಕೀರ್ತನೆ

Thursday, August 11th, 2016
Harikatha-sankeertha

ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 13 ನೇ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ‘ಪಾದುಕಾ ಪಟ್ಟಾಭಿಷೇಕ’ ಎಂಬ ಕಥಾಭಾಗದ ಕುರಿತು ಹರಿಕಥಾ ಸಂಕೀರ್ತನೆ ಇತ್ತೀಚೆಗೆ ನಡೆಯಿತು. ಹಿಮ್ಮೇಳದಲ್ಲಿ ತಬಲಾ ವಾದಕರಾಗಿ ತಿರುಮಲೇಶ್ ಆಚಾರ್ಯ ಕೂಡ್ಲು, ಹಾರ್ಮೋನಿಯಂ ವಾದಕರಾಗಿ ಮೋಹನ್ ಆಚಾರ್ಯ ಪುಳ್ಕೂರು ಅವರು ಸಹಕರಿಸಿದರು. ಪರಮ ಪೂಜ್ಯ ಶ್ರೀ ಗುರೂಜಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆನಂದ ಕಾರ್ನವರ್ ಹರಿದಾಸರಿಗೆ ಮತ್ತು […]

ನುಡಿದಂತೆ ನಡೆದ ಧೀಮಂತ ಕವಿ ಕೈಯಾರ -ಕೆ.ಎನ್ ಕೃಷ್ಣ ಭಟ್

Thursday, August 11th, 2016
Kaiyyara-kinchanna-rai

ಬದಿಯಡ್ಕ: ಕವಿ ಕೈಯಾರರು ಬದಿಯಡ್ಕದ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡವರು. ಅಧ್ಯಾಪಕರಾಗಿ , ಕವಿಯಾಗಿ, ಕಾಸರಗೋಡಿನ ಕನ್ನಡದ ಹೋರಾಟಗಾರರಾಗಿ ಇವರ ಸೇವೆ ಅನನ್ಯ. ಇವರ ಸಂಸ್ಮರಣೆ ನಮ್ಮ ಕರ್ತವ್ಯ.ಈ ಸಂದರ್ಭಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸುತ್ತಿರುವುದು ಔಚಿತ್ಯಪೂರ್ಣ. ನುಡಿದಂತೆ ನಡೆದ ಧೀಮಂತ ಕವಿ ಕೈಯಾರರು, ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ಭಟ್ ಕೆ ಎನ್ ನುಡಿದರು. ಅವರು ನವಜೀವನ ಹೈಯರ್ ಸೆಂಡರಿ ಶಾಲೆ ಪೆರಡಾಲದಲ್ಲಿ ಡಾ ಕೈಯಾರ ಕಿಞ್ಞಣ್ಣ ರೈ ಸಂಸ್ಮರಣೆ ಮತ್ತು ಕುಂಬಳೆ […]

ರಾಷ್ಟ್ರೀಯ ಹಿತಾಸಕ್ತಿ ವಿರುದ್ಧ ಚಟುವಟಿಕೆಗಳಿಗೆ ಕಮ್ಯೂನಿಸ್ಟರ ಕೊಡೆ-ಸಿ.ಕೆ.ಪದ್ಮನಾಭನ್

Thursday, August 11th, 2016
Yuvamorcha

ಕಾಸರಗೋಡು: ಕೇರಳವನ್ನು ಈ ತನಕ ಆಳುತ್ತಾ ಬಂದಿರುವ ಸರಕಾರಗಳು ರಾಜ್ಯವನ್ನು ಉಗ್ರವಾದಿಗಳ ಅಡಗುದಾಣ ವಾಗಿ ಮಾರ್ಪಡಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಆರೋಪಿಸಿದ್ದಾರೆ. ಉಗ್ರಗಾಮಿಗಳು ಮತ್ತು ಅವರಿಗೆ ಬೆಂಬಲ ನೀಡುತ್ತಿರುವವರು ಭಾರತ ಬಿಟ್ಟು ತೊಲಗಿರಿ ಎಂಬ ಘೋಷಣೆಯೊಂದಿಗೆ ಭಾರತೀಯ ಯುವಮೋರ್ಛಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗವಾರ ಸಂಜೆ ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದ ದೇಶರಕ್ಷಾ ಜ್ವಾಲ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿ. ಕೆ. ಪದ್ಮನಾಭನ್ ಮಾತ ನಾಡುತ್ತಿದ್ದರು. ಧರ್ಮಗಳ ನಿಜವಾದ ತಿರುಳನ್ನು […]

ಕುಂಬಳೆಯ ಚಾಲಕರಿಗೆ ವಿಶೇಷ ಮಾಹಿತಿ ಶಿಬಿರ

Thursday, August 11th, 2016
Kumbale-Drivers

ಕುಂಬಳೆ: ಶುಭಯಾತ್ರೆ ಸುರಕ್ಷಿತ ಯಾತ್ರೆ ಹಾಗೂ ಸ್ತ್ರೀಯರ ಸುರಕ್ಷತೆಗೂ, ಸಾರಿಗೆಯ ಸುರಕ್ಷತೆಗೂ ಸಂಬಂಧಿಸಿದಂತೆ ನಿರ್ದೇಶನ ಮತ್ತು ಮಾಹಿತಿ ಶಿಬಿರವನ್ನು ಮಂಗಳವಾರ ಕುಂಬಳೆ ಗ್ರಾಮ ಪಂಚಾಯತು ಪರಿಸರದಲ್ಲಿ ಕುಂಬಳೆ ಠಾಣಾ ಎಸ್‌ಐ ಮೆಲ್ವಿನ್ ಜೋಸ್ ನಡೆಸಿಕೊಟ್ಟರು. ಶಿಬಿರವನ್ನು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಉದ್ಘಾಟಿಸಿ ಮಾತನಾಡಿ, ಕುಂಬಳೆ ಪರಿಸರದಲ್ಲಿ ಆಟೋ ಓಡಿಸುವಂತಹ ಚಾಲಕರಿಗೆ ಮುಂದಿನ ಎರಡು ವಾರದೊಳಗೆ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ಪರವಾನಿಗೆ ಮತ್ತು ಬ್ಯಾಡ್ಜ್ ಇದ್ದವರಿಗೆ ಮಾತ್ರ ಈ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. […]

ಖಾಸಗಿ ಬಸ್ ಉದ್ಯಮಿ ನಾಪತ್ತೆ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

Thursday, August 11th, 2016
Narayana-Alwa

ಮಂಗಳೂರು: ನಗರದ ಖಾಸಗಿ ಬಸ್ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜೆಪ್ಪಿನಮೊಗರು ನಿವಾಸಿ ನಾರಾಯಣ ಆಳ್ವ (60) ಎಂಬುವರು ಇಂದು ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದಾರೆ. ಮನೆ ಮಂದಿ ಆಳ್ವರಿಗಾಗಿ ಹುಡುಕಿ ಬಳಿಕ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ನಂತರ ನೇತ್ರಾವತಿ ಸೇತುವೆ ಬಳಿ ಆಗಮಿಸಿದ ಪೊಲೀಸರು ಹುಡುಕಾಟ ಆರಂಭಿಸಿದ್ದು, ಆಳ್ವರ ಕಾರು ಉಳ್ಳಾಲ ಸೇತುವೆಯಲ್ಲಿ ಪತ್ತೆಯಾಗಿದೆ. ಕಾರನ್ನು ಠಾಣೆಯಲ್ಲಿರಿಸಿದ್ದಾರೆ. […]

ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ದೊರಕಬೇಕು: ಏರ್ಯ ಲಕ್ಷ್ಮೀನಾರಾಯಣ ಆಳ್ವ

Wednesday, August 10th, 2016
Lakshminarayana-Alwa

ಬಂಟ್ವಾಳ: ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ದೊರಕುವಂತೆ ಹೊಸ ಕಾನೂನು ಜಾರಿಗೊಳಿಸಬೇಕೆಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಹೇಳಿದರು. ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಸೋಮವಾರ ನಡೆದ ‘ಸರಕಾರಿ ಶಾಲೆಗಳನ್ನು ಉಳಿಸಿ’ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ದುರ್ಗಾ ಫ್ರೆಂಡ್ಸ್‌ ಕ್ಲಬ್‌ […]