ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೇವಲ ಕಣ್ಣೊರೆಸುವ ತಂತ್ರ: ಡಾ. ದೊಡ್ಡರಂಗೇಗೌಡ

Saturday, January 7th, 2023
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೇವಲ ಕಣ್ಣೊರೆಸುವ ತಂತ್ರ: ಡಾ. ದೊಡ್ಡರಂಗೇಗೌಡ

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) ಕನ್ನಡ ಭಾಷೆ ರಕ್ಷಣೆಗೆ ಡಬಲ್ ಇಂಜಿನ್ ಸರ್ಕಾರದ ಕೊಡುಗೆ ಹಾಗೂ ಹಿಂದಿ ಹೇರಿಕೆಯ ಬಗ್ಗೆ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನಿನ್ನೆಯ ಉದ್ಘಾಟನಾ ಭಾಷಣದಲ್ಲಿ ಹಾವೇರಿಯಲ್ಲಿ ಮಾತನಾಡಿದ್ದ ಅವರು, ಕನ್ನಡ ಭಾಷೆಯು ಇತ್ತೀಚೆಗೆ ಶಾಸ್ತ್ರೀಯ ಭಾಷೆಯ ಮಾನ್ಯತೆಯನ್ನು ಪಡೆದಿದ್ದರೂ ರಾಜ್ಯ ಸರ್ಕಾರ ಕೇಂದ್ರದ ಅನುದಾನ ಪಡೆಯುವಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಡಬಲ್ ಇಂಜಿನ್ ಸರ್ಕಾರ ತನ್ನ ಅನುಕೂಲತೆಗಳ ಬಗ್ಗೆ ಮಾತನಾಡುತ್ತದೆ. ಆದರೆ ಅದು ಕನ್ನಡಕ್ಕೆ […]

ಶಿರಸಿ : ಸಹಸ್ರಲಿಂಗದಲ್ಲಿ ಚಿಕನ್ ಬಿರಿಯಾನಿ ಸೇವಿಸಿದ ಮುಸ್ಲಿಂ ದಂಪತಿ!

Saturday, January 7th, 2023
ಶಿರಸಿ : ಸಹಸ್ರಲಿಂಗದಲ್ಲಿ ಚಿಕನ್ ಬಿರಿಯಾನಿ ಸೇವಿಸಿದ ಮುಸ್ಲಿಂ ದಂಪತಿ!

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ, ಭಕ್ತಿಯ ಸ್ಥಳವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಹಸ್ರಲಿಂಗದಲ್ಲಿ ಮುಸ್ಲಿಂ ದಂಪತಿ ಚಿಕನ್ ಬಿರಿಯಾನಿ ಸೇವನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಹಸ್ರ ಲಿಂಗಕ್ಕೆ ಪ್ರವಾಸಕ್ಕೆ ಬಂದಿದ್ದ ಮುಸ್ಲಿಂ ದಂಪತಿಯಿಂದ ಲಿಂಗಗಳಿರುವ ಪಕ್ಕದ ಕಲ್ಲಿನಲ್ಲಿ ಕುಳಿತು ಬಿರಿಯಾನಿ ಸೇವನೆ ಮಾಡಿದ್ದಾರೆ. ಈಗ ಮುಸ್ಲಿಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ನಡೆದಿರುವ ಈ ಘಟನೆಯ ವಿಡಿಯೋ ನೋಡಿ ಜಿಲ್ಲೆಯ ಜನರಿಂದ […]

ಸಂಭ್ರಮದಿಂದ ನಡೆದ ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ

Saturday, January 7th, 2023
ಸಂಭ್ರಮದಿಂದ ನಡೆದ ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) : ನಾಡಿನ ಪ್ರಸಿದ್ಧ ಸುಕ್ಷೇತ್ರ ಬಾದಾಮಿ-ಬನಶಂಕರಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ 5 ಗಂಟೆಗೆ ಮಹಾರಥೋತ್ಸವವು ಲಕ್ಷಾಂತರ ಜನ ಭಕ್ತರ ಉಪಸ್ಥಿತಿಯಲ್ಲಿ ಸಡಗರ, ಸಂಭ್ರಮ, ಭಕ್ತಿ, ಭಾವಗಳ ಮಧ್ಯೆ ಸಂಭ್ರಮದಿಂದ ನಡೆಯಿತು. ಮಹೋತ್ಸವದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿದ್ದು, ಶುಕ್ರವಾರ ಬೆಳಗ್ಗೆ ಬನಶಂಕರಿ ದೇವಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕವನ್ನು ಅಶೋಕ ಭಟ್ಟ ಪೂಜಾರ, ಶಂಕರ ಭಟ್ಟ ಗುಂಡಭಟ್ಟ ಪೂಜಾರ ನೇರವೇರಿಸಿದರು. ಬನಶಂಕರಿ ಮಹಾ ರಥೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ರಥಾಂಗ ಹೋಮ ಹಾಗೂ ಪೂಜೆ […]

ಇಂದು ಬುಡರಸಿಂಗಿ ಬೆಟ್ಟದಲ್ಲಿ ಉಡುಪಿ ಶ್ರೀವಿಶ್ವೇಶತೀರ್ಥರ ಪುತ್ಥಳಿ ಅನಾವರಣ

Saturday, January 7th, 2023
vishwesha Thirrtha

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) : ನಗರದ ಹತ್ತಿರದ ಪಿಬಿ ರಸ್ತೆಯ ಬದಿಯಲ್ಲಿರುವ ಬುಡರಸಿಂಗಿ ಬೆಟ್ಟದಲ್ಲಿ ರುವ ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ ಪದವಿ ಪೂರ್ವ ಕಾಲೇಜು ಮತ್ತು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ವಿದ್ಯಾದಾನದ ಕನಸಿನ ಸಾಕಾರಸೌಧ ಶ್ರೀಗಳೇ ನಾಮಕರಣ ಮಾಡಿದ ಈ ಗೋವರ್ಧನಗಿರಿಯ 12 ಎಕರೆ ವ್ಯಾಪ್ತಿಯ ಜಾಗೆಯಲ್ಲಿ ಕಣ್ಣು ಹಾಯಿಸಿದಷ್ಟು ಹಸಿರಿನ ಸೊಬಗು, ನಿಸರ್ಗದ ಹೊನಲಿನಲ್ಲಿ ಮಿಂದೇಳುವ ಪ್ರಕೃತಿಯ ಒಡಲಲ್ಲಿ ಈ ಕಾಲೇಜು ನಿರ್ಮಾಣವಾಗಿದೆ. ಬುಡರಸಿಂಗಿ ಗ್ರಾಮದ ಬೆಟ್ಟ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಕರ್ನಾಟಕ ಶಿಕ್ಷಣ […]

ಜ.8 ರಂದು ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಶ್ರೀ ಸದ್ಗುರು ಚಾಲನೆ

Friday, January 6th, 2023
Gavi-siddeshwara

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) : ಇದೇ ಜನೇವರಿ 8 ರಂದು ಜರುಗುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಈಶಾ ಫೌಂಡೇಶನ್‌ ಸ್ಥಾಪಕರು, ಪದ್ಮವಿಭೂಷಣ ಶ್ರೀ ಸದ್ಗುರು ಅವರು ಚಾಲನೆ ನೀಡಲಿದ್ದಾರೆ. ಜನವರಿ 8 ರಂದು ಸಂಜೆ 5.30 ಕ್ಕೆ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ಉದ್ಘಾಟಿಸುವ ಸದ್ಗುರು ಅವರು ನಂತರ ಕೈಲಾಸ ಮಂಟಪದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಮೈಸೂರು ಮೂಲದ ಶ್ರೀ ಸದ್ಗುರು ಅವರು ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಈಶಾ ಫೌಂಡೇಶನ್‌ ಸ್ಥಾಪಿಸಿ ಆಧ್ಯಾತ್ಮ, ಸಮಾಜ, ಶೈಕ್ಷಣಿಕ […]

ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಬಸವರಾಜ ಬೊಮ್ಮಾಯಿ

Friday, January 6th, 2023
ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಬಸವರಾಜ ಬೊಮ್ಮಾಯಿ

ಹಾವೇರಿ (ವರದಿ:ಶಂಭು ನಾಗನೂರಮಠ) : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿಯನ್ನು ಬರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶುಕ್ರವಾರ 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ತವರು ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ. ಹಾವೇರಿ ಜ್ಞಾನದ ನಾಡು, ಸಾಹಿತ್ಯದ ಬೀಡು. ಇಂಥ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಕನ್ನಡ , ಕನ್ನಡ ಅಸ್ಮಿತೆಯನ್ನು ಎತ್ತಿಹಿಡಿದಂತಾಗುತ್ತದೆ. […]

ಎಚ್‌ ಐ ವಿ ಪೀಡಿತರು ಧೈರ್ಯದಿಂದ ಬದುಕಿ : ರಾಜು ನಾಯಕವಾಡಿ

Friday, January 6th, 2023
Raju-Nayakavadi

ಹುಬ್ಬಳ್ಳಿ (ವರದಿ: ಶಂಭು ನಾಗನೂರಮಠ) : ಯಾವುದೋ ಕೆಟ್ಟ ಘಳಿಗೆಯಲ್ಲಿ ಎಚ್‌ ಐ ವಿ ಮಾರಕ ರೋಗಕ್ಕೆ ತುತ್ತಾಗಿ ನೋವು ಅನುಭವಿಸುತ್ತಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ರಾಜು ಅನಂತಸಾ ನಾಯಕವಾಡಿ ಹೇಳಿದರು. ಈಗಿನ ಆಧುನಿಕ ತಾಂತ್ರಿಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರೆದಿದೆ. ಎಂಥಹ ಮಾರಕ ರೋಗಗಳಿಗೂ ಸಹ ನಮ್ಮ ವೈದ್ಯಕೀಯ ಜಗತ್ತಿನಲ್ಲಿ ಎಲ್ಲ ರೀತಿಯಿಂದ ಚಿಕಿತ್ಸಾ ಪದ್ಧತಿ ಮತ್ತು ಔಷಧೀಯ ಚಿಕಿತ್ಸೆ ಇದೆ. ಆದ್ದರಿಂದ ಯಾರೂ ಕೂಡ ಈ ರೋಗ ನನಗೆ […]

ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತ ಕಾಂಗ್ರೆಸ್ ಪಕ್ಷ ಸೇರುವುದಾಗಿ ಘೋಷಣೆ

Friday, January 6th, 2023
ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತ ಕಾಂಗ್ರೆಸ್ ಪಕ್ಷ ಸೇರುವುದಾಗಿ ಘೋಷಣೆ

ಚಿಕ್ಕಮಗಳೂರು : ತೆನೆ ಹೊತ್ತ ವೈ.ಎಸ್.ವಿ. ದತ್ತ ಜನವರಿ 15ಕ್ಕೆ ಕೈಯತ್ತ ಖಚಿತ ರಾಜ್ಯ ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಕಾಂಗ್ರೆಸ್ ಪಕ್ಷ ಸೇರುವುದಾಗಿ ಪ್ರಕಟಿಸಿದ್ದಾರೆ. ಜನವರಿ 15ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತ ಗೊಂದಲಗಳಿಗೆ ಅವರು ತೆರೆ ಎಳೆದಿದ್ದು ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯದ ಮೇರೆಗೆ ಕಾಂಗ್ರೆಸ್ ಸೇರಲು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ಗುರುವಾರ ಸಂಜೆ […]

ಹು- ಧಾರವಾಡ-ಬೆಂಗಳೂರ ಮಧ್ಯೆ “ವಂದೇ ಭಾರತ” ರೈಲು

Friday, January 6th, 2023
Vande-Bharath

ಹುಬ್ಬಳ್ಳಿ: (ವರದಿ: ಶಂಭು ನಾಗನೂರಮಠ) ಹು- ಧಾರವಾಡ-ಬೆಂಗಳೂರ, ಮಧ್ಯೆ “ವಂದೇ ಭಾರತ” ರೈಲು ಮಾರ್ಚ್ ನಲ್ಲಿ ಪ್ರಾರಂಭವಾಗುವುದು ಅನುಮಾನ. ಹುಬ್ಬಳ್ಳಿ-ಬೆಂಗಳೂರು ಮಾರ್ಗದ ವಿದ್ಯುದ್ದೀಕರಣ ಹಾಗೂ ಲೆಬ್ಲಿಂಗ್ ಕಾರ್ಯ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ, ತದನಂತರವಷ್ಟೇ ವಂದೇ ಭಾರತ ರೈಲು ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ನಿರ್ಧರಿಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಸಂಜೀವ್ ಕಿಶೋರ್ ತಿಳಿಸಿದರು. ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲು ಕ್ವಾರಿ ಹಾಗೂ ಕೃಷರ್‌ಗಳ ಮುಷ್ಕರದಿಂದಾಗಿ ಕಾಮಗಾರಿ ಕೊಂಚ ವಿಳಂಬವಾಗಿದೆ. ಹೀಗಾಗಿ ನಿಗದಿತ ಅವಧಿಯೊಳಗೆ […]

ಈ ಗ್ರಾಮದಲ್ಲಿ ಪ್ರತಿದಿನ ಸಂಜೆ ಟಿವಿ, ಮೊಬೈಲ್ ಬಳಸಿದರೆ ದಂಡ : ಗ್ರಾಪಂ ಆದೇಶ

Friday, January 6th, 2023
ಈ ಗ್ರಾಮದಲ್ಲಿ ಪ್ರತಿದಿನ ಸಂಜೆ ಟಿವಿ, ಮೊಬೈಲ್ ಬಳಸಿದರೆ ದಂಡ : ಗ್ರಾಪಂ ಆದೇಶ

ಸೊಲ್ಲಾಪುರ (ಮಹಾರಾಷ್ಟ್ರ) : ಪಂಡರಪುರ ತಾಲೂಕಿನಲ್ಲಿನ ದೇಗಾಂವ್ ಗ್ರಾಮ ಪಂಚಾಯತಿಯು ಗ್ರಾಮದಲ್ಲಿನ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಪ್ರತಿದಿನ ಸಂಜೆ 6ರಿಂದ 8ರವರೆಗೆ ಮೊಬೈಲ್‌ ಬಳಕೆ ಮತ್ತು ದೂರದರ್ಶನ ಯಾವ ಮನೆಯಲ್ಲೂ ವೀಕ್ಷಿಸಬಾರದು. ಯಾರೂ ಈ ಮನವಿ ಉಲ್ಲ೦ಘಿಸಬಾರದು. ಉಲ್ಲಂಘಿಸಿದವರು ದಂಡ ಕಟ್ಟಬೇಕಾಗುತ್ತದೆ ಎಂದು ದೇಗಾಂವ್ ಗ್ರಾಮ ಪಂಚಾಯತಿ ತಿಳಿಸಿದೆ. ದಿನದಿಂದ ದಿನಕ್ಕೆ ಮೊಬೈಲ್ ಆಕರ್ಷಣೆಯಿಂದ ವಿದ್ಯಾರ್ಥಿ ಮಕ್ಕಳು ಮೊಬೈಲ್ ಬಳಕೆಯಲ್ಲಿ ತಲ್ಲೀನರಾಗಿದ್ದಾರೆ. ಇದರಿಂದ ಅಭ್ಯಾಸ ಕುಂಠಿತವಾಗುತ್ತಿದೆ. ದೂರದರ್ಶನಗಳಲ್ಲಿ ಪ್ರದರ್ಶನಗೊಳ್ಳುವ ಧಾರಾವಾಹಿಗಳಿಂದ ಕುಟುಂಬ ಸದಸ್ಯರೊಂದಿಗೆ ಮಾತುಕತೆಯಿಲ್ಲದೆ. ಅರ್ಥ ತುಂಬಿದ ಬದುಕು […]