ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ‌ ಮೊಬೈಲ್ ಬ್ಲಾಸ್ಟ್ : ಗಾಯಗೊಂಡ ಬೈಕ್ ಸವಾರ

Monday, February 17th, 2020
bike

ಮೈಸೂರು : ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ‌ ಮೊಬೈಲ್ ಬ್ಲಾಸ್ಟ್ ಆದ ಪರಿಣಾಮ ಬೈಕ್ ಸವಾರರೋರ್ವರು ಕುಸಿದು ಬಿದ್ದ ಪರಿಣಾಮ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ರಸ್ತೆಯಲ್ಲಿ ನಡೆದಿದೆ. ಗಾಯಗೊಂಡವರನ್ನು ಕುರಿಹುಂಡಿಯ ಬಸವರಾಜು ( ಬಸವಣ್ಣ) ಎಂದು ಗುರುತಿಸಲಾಗಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕಿಸೆಯಲ್ಲಿದ್ದ ವಿವೋ ಕಂಪನಿಯ ಮೊಬೈಲ್ ಬ್ಲಾಸ್ಟ್ ಆಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ರಸ್ತೆಯಲ್ಲಿ ಕುರಿಹುಂಡಿಯಿಂದ ಹುಲ್ಲಹಳ್ಳಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಮೊಬೈಲ್ ಸಿಡಿದ […]

ಪ್ರೀತಿಯ ಕೋತಿಗಾಗಿ ದೇವಸ್ಥಾನ ನಿರ್ಮಾಣ ಮಾಡಿದ ಮಾಜಿ ಸಚಿವ ಸಾರಾ ಮಹೇಶ್

Monday, February 17th, 2020
sa-ra-mahesh

ಮೈಸೂರು : ನಮ್ಮ ಪ್ರೀತಿ ಪಾತ್ರವಾಗಿದ್ದ ಯಾರೇ ಅಥವಾ ಪ್ರಾಣಿಗಳೇ ಅಗಲಿ ನಮ್ಮನ್ನು ಅಗಲಿದರೆ ತುಂಬಾ ದುಃಖವಾಗುತ್ತೆ. ಈ ದುಖಃ ವು ವರುಷಗಳ ತನಕ ಇದ್ದೇ ಇರುತ್ತದೆ . ನಮ್ಮ ಪ್ರೀತಿ ಪಾತ್ರ ಪ್ರಾಣಿಗಳನ್ನು ನಾವು ನಮ್ಮ ಒಡಹುಟ್ಟಿವೆ ಎಂದೇ ಭಾವಿಸಿಕೊಂಡಿರುತ್ತೇವೆ. . ಇದೇ ರೀತಿಯ ಪ್ರೀತಿಯಲ್ಲಿ ಅಗಲಿದ ತಮ್ಮ ಪ್ರೀತಿಯ ಕೋತಿಗಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ ಮಾಜಿ ಸಚಿವ ಸಾರಾ ಮಹೇಶ್. ಅವರು. ತಾವು ಅತ್ಯಂತ ಪ್ರೀತಿಯಿಂದ ನೋಡಿಕೊಳ್ತಿದ್ದ ಕೋತಿ ಮರಿ ಚಿಂಟು ನೆನಪಿಗಾಗಿ ಮೈಸೂರಿನ […]

ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ : ಸಿ.ಟಿ ರವಿ

Monday, February 17th, 2020
ravi

ಬೆಂಗಳೂರು : ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಟಿ ರವಿ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು ದೇಶದ್ರೋಹಿ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು. ಹುಬ್ಬಳ್ಳಿಯ ಕೆ.ಎಲ್‌.ಇ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಕಾಶ್ಮೀರಿ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿದ್ಯಾರ್ಥಿಗಳನ್ನು ಬಂಧಿಸಿದ್ದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದ್ದರು. ಪೊಲೀಸರ ಈ ನಡೆಗೆ ವ್ಯಾಪಕ ವಿರೋಧ […]

ಕೂರ್ಗ್ ವಿಲೇಜ್ ಕಟ್ಟಡ ನಿರ್ಮಾಣಕ್ಕೆ ಪುರಾತತ್ವ ಇಲಾಖೆ ತಡೆ

Monday, February 17th, 2020
ಕೂರ್ಗ್ ವಿಲೇಜ್ ಕಟ್ಟಡ ನಿರ್ಮಾಣಕ್ಕೆ ಪುರಾತತ್ವ ಇಲಾಖೆ ತಡೆ

ಮಡಿಕೇರಿ : ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಹಿನ್ನೆಲೆಯ ರಾಜಾಸೀಟ್ ಪಾರ್ಶ್ವದಲ್ಲಿ ನಿರ್ಮಾಣವಾಗುತ್ತಿರುವ ಕೂರ್ಗ್ ವಿಲೆಜ್ ಕಟ್ಟಡ ನಿರ್ಮಾಣವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕೇಂದ್ರ ಪುರಾತತ್ತ್ವ ಇಲಾಖೆಯಿಂದ ನಿರ್ಮಾಣದ ಉಸ್ತುವಾರಿ ಹೊತ್ತಿರುವ ನಿರ್ಮಿತಿ ಕೆಂದ್ರ ಮತ್ತು ಸಂಬಂಧಪಟ್ಟ ಇಲಾಖೆಗೆ ಸ್ಪಷ್ಟ ಸೂಚನೆಯನ್ನು ನೀಡಿದೆ. ಕೆಲ ಸಮಯಗಳ ಹಿಂದೆಯಷ್ಟೆ ರಾಜಾಸೀಟ್‌ನ ಉದ್ಯಾನವನಕ್ಕೆ ನೀರಿನ ಮೂಲವಾಗಿದ್ದ, ಅಲ್ಲೇ ಸಮೀಪದ ಪ್ರದೇಶದಲ್ಲಿ ಕೂರ್ಗ್ ಹಳ್ಳಿಮನೆಯನ್ನು ನಿರ್ಮಿಸುವುದಕ್ಕೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಒಂದಷ್ಟು ಕಟ್ಟಡ ನಿರ್ಮಾಣ ಕಾರ್ಯಗಳು ಅಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ […]

ಪಾಕ್ ಪರ ಘೋಷಣೆ : ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತೆ ಪೊಲೀಸ್ ವಶಕ್ಕೆ

Monday, February 17th, 2020
kashmiri

ಹುಬ್ಬಳ್ಳಿ : ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ರಸ್ತೆ ಪೊಲೀಸರು ಸೋಮವಾರ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಭಾನುವಾರ ತಡರಾತ್ರಿ ಮತ್ತೆ ಬಂಧಿಸಿದ್ದು, ಸೋಮವಾರ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಇಲ್ಲಿನ 3ನೇ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶೆ ಪುಷ್ಪಾ ಅವರು ಮೂವರು ವಿದ್ಯಾರ್ಥಿಗಳನ್ನು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ವರದಿ ತಿಳಿಸಿದೆ. ಹುಬ್ಬಳ್ಳಿ ತಾಲೂಕು ಕೊಟಗುಣಸಿಯಲ್ಲಿರುವ ಕೆಎಲ್ ಇ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಪುಲ್ವಾಮಾ ದಾಳಿಯ ಕರಾಳ ದಿನಾಚರಣೆ ಸಂದರ್ಭದಲ್ಲೂ […]

ಬಸ್ ಮಾಲಕರಿಂದ ಪ್ರಯಾಣಿಕರ ಮೇಲೆ ಟೋಲ್ ಸೆಸ್ ಹೇರಿಕೆ, ಹೋರಾಟ ಸಮಿತಿ ವಿರೋಧ

Monday, February 17th, 2020
tolgate

ಮಂಗಳೂರು : ಫಾಸ್ಟ್ ಟಾಗ್ ಕಡ್ಡಾಯ, ಟೋಲ್ ದರಗಳ ಹೆಚ್ಚಳವನ್ನು ಮುಂದಿಟ್ಟು ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಬಸ್ ಮಾಲಕರು ಪ್ರತಿ ಸ್ಟೇಜ್ ಗೆ ಟಿಕೇಟ್ ಮೇಲೆ ತಲಾ ಒಂದು ರೂಪಾಯಿ ಪ್ರಯಾಣ ದರ ಹೆಚ್ಚಳ ಮಾಡಿರುವುದು ಖಂಡನೀಯ. ಜಿಲ್ಲಾಡಳಿತ, ಆರ್ ಟಿ ಎ ಅನುಮತಿ ಪಡೆಯದೆ ಈ ರೀತಿ ಏಕಪಕ್ಷೀಯ, ನಿಯಮ ಬಾಹಿರ ಏರಿಕೆ ಮಾಡುವುದನ್ನು ಒಪ್ಪಲಾಗದು, ಉಭಯ ಜಿಲ್ಲಾಡಳಿತಗಳು ತಕ್ಷಣ ಮಧ್ಯ ಪ್ರವೇಶಿಸಿ ದರ ಏರಿಕೆಯನ್ನು ತಡೆ ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು […]

ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಎನ್ ಕೌಂಟರ್ : ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ ಪೊಲೀಸರು

Monday, February 17th, 2020
dehali

ಹೊಸದಿಲ್ಲಿ : ಇಂದು ಬೆಳ್ಳಂಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ದೆಹಲಿ ಪೊಲೀಸರು ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದಾರೆ. ಇಂದು ಬೆಳಿಗ್ಗೆ ಸುಮಾರು 5 ಗಂಟೆ ಸಮಯಕ್ಕೆ ದಿಲ್ಲಿಯ ಪ್ರಹ್ಲಾದ್ ಪುರ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದ್ದು, ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಹತ್ಯೆಯಾದವರು. ಈ ಇಬ್ಬರು ಆರೋಪಿಗಳು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು ಎನ್ನಲಾಗಿದೆ. ಇತ್ತೀಚೆಗೆ ದಿಲ್ಲಿಯ ಕರವಾಲ್ ನಗರದಲ್ಲಿ ನಡೆದ ಕೊಲೆ ಪ್ರಕರಣದಲ್ಲೂ ಈ ಆರೋಪಿಗಳು ಭಾಗಿಯಾಗಿದ್ದರು ಎನ್ನಲಾಗಿದೆ. ವರದಿಯ ಪ್ರಕಾರ, ಪೊಲೀಸರು […]

ಕ್ರೀಡಾ ಸಚಿವರ ಆಹ್ವಾನ ನಿರಾಕರಿಸಿದ ಕಂಬಳ ವೀರ ಶ್ರೀನಿವಾಸ್​ ಗೌಡ

Monday, February 17th, 2020
srinivas-gowda

ಮಂಗಳೂರು : ಭಾರತೀಯ ಕ್ರೀಡಾ ಪ್ರಾಧಿಕಾರದ ಅಗ್ರ ಕೋಚ್‌ಗಳಿಂದ ಟ್ರಯಲ್ಸ್ (ಸಾಮರ್ಥ್ಯ ಪರೀಕ್ಷೆ)ಗೆ ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಆಹ್ವಾನಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ ಒಂದು ದಿನಗಳ ಬಳಿಕ ಶ್ರೀನಿವಾಸ ಗೌಡ, ತನಗೆ ಆ ಬಗ್ಗೆ ಆಸಕ್ತಿ ಇಲ್ಲ ಹಾಗೂ ತಾನು ಕಂಬಳದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಸೂರ್ಯ-ಚಂದ್ರ ಕಂಬಳ ನಡೆಯುತ್ತಿರುವ ವೇಣೂರು ಪೆರ್ಮುದೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಕಂಬಳದ ಕಾರಣದಿಂದಾಗಿ ಖ್ಯಾತಿ ಗಳಿಸಿರುವುದು ನನಗೆ ಸಂತೋಷವಾಗಿದೆ. ಆ ಕಾರಣಕ್ಕಾಗಿ ಎಲ್ಲರಿಗೂ […]

ಸಾಲ ಮಾಡಿಯಾದರೂ ಏತ ನೀರಾವರಿ ಯೋಜನೆ ಜಾರಿಗೆ ತನ್ನಿ : ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Monday, February 17th, 2020
sawmiji

ಶಿವಮೊಗ್ಗ : ಸಾಲ ಮಾಡಿಯಾದರೂ ರೈತರಿಗೆ ಏತ ನೀರಾವರಿ ಯೋಜನೆಗಳನ್ನು ಬಜೆಟ್ನಲ್ಲಿ ಅನುಷ್ಠಾನಕ್ಕೆ ತನ್ನಿ ಎಂದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಸಚಿವ ಕೆ.ಎಸ್.ಈಶ್ವರಪ್ಪ ಅವರ ಭೀಮ ರಥ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ರಾಜ್ಯದ ಜನತೆ ನಿಮಗೆ ಬೆಂಬಲ ನೀಡುತ್ತಿದ್ದಾರೆ. ಮುಂಬರುವ ರಾಜ್ಯ ಬಜೆಟ್ನಲ್ಲಿ ರೈತರ ಹಿತ ಕಾಪಾಡುವಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನತೆಗೆ ದೊಡ್ಡ ಕೊಡುಗೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಆರ್ಥಿಕ ಪರಿಸ್ಥಿತಿ […]

ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಲು ತೆಲಂಗಾಣ ಸರ್ಕಾರ ನಿರ್ಧಾರ

Monday, February 17th, 2020
CAA

ನವದೆಹಲಿ : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ತೆಲಂಗಾಣ ಸರ್ಕಾರವು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ನಿರ್ಧರಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸುವುದಾಗಿ ಸಿಎಂ ಚಂದ್ರಶೇಖರ್ ರಾವ್ ಕಳೆದ ತಿಂಗಳು ಹೇಳಿದ್ದರು. ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ […]