ಶುಲ್ಕ ಹೆಚ್ಚಳ ವಿರೋಧಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

Monday, November 11th, 2019
JNU

ನವದೆಹಲಿ : ಜವಹಾರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೆ ಹೈಡ್ರಾಮಾ ನಡೆದಿದ್ದು, ಶುಲ್ಕ ಹೆಚ್ಚಳ ಖಂಡಿಸಿ, ನೂರಾರು ವಿದ್ಯಾರ್ಥಿಗಳು ವಿವಿ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಜೆಎನ್‍ಯು ಹೊರಗಡೆ ಜಮಾಯಿಸಿ, ಹಾಸ್ಟೆಲ್ ಕೈಪಿಡಿ ಹಿಂಪಡೆಯಬೇಕು ಹಾಗೂ ಶುಲ್ಕವನ್ನು ಹೆಚ್ಚಳ ಮಾಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದ್ದು, ಭಾರೀ ಪೊಲೀಸ್ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 3ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಸಮಯದಲ್ಲೇ ನೂರಾರು ವಿದ್ಯಾರ್ಥಿಗಳು […]

ಬೊಗಳುತ್ತಿದ್ದ ನಾಯಿಗೆ ಗುಂಡು ಹಾರಿಸಿದ ಅಪರಿಚಿತ ವ್ಯಕ್ತಿ

Monday, November 11th, 2019
Dog

ಬೆಂಗಳೂರು : ಬೊಗಳುತ್ತಿದ್ದ ಬೀದಿ ನಾಯಿಗೆ ಅಪರಿಚಿತ ವ್ಯಕ್ತಿಯೊಬ್ಬ ಏರ್ ಗನ್ನಿಂದ 3 ಗುಂಡುಗಳನ್ನು ಹಾರಿಸಿರುವ ಘಟನೆ ರಾಜ್ಯ ರಾಜಧಾನಿಯ ಜಯನಗರ 5ನೇ ಬ್ಲಾಕ್ನಲ್ಲಿ ನಡೆದಿದೆ. ನಾಯಿ ಮೇಲೆ ಗುಂಡು ಹಾರಿಸಿರುವ ವ್ಯಕ್ತಿ ಸ್ಥಳೀಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಗೊಂಡಿರುವ ನಾಯಿಯನ್ನು ಜಯನಗರ ಪಶು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಅದನ್ನು ಜೆಪಿ ನಗರದ ಜೀವ ಪೆಟ್ ಕ್ಲಿನಿಕ್ ಗೆ ವರ್ಗಾಯಿಸಲಾಗಿದೆ. ನಾಯಿಯ ದೇಹವನ್ನು ಸ್ಕ್ಯಾನ್ ಮಾಡಿರುವ ವೈದ್ಯರು 3 ಗುಂಡುಗಳು ದೇಹದಲ್ಲಿರುವುದನ್ನು ಪತ್ತೆ […]

ಭಾರತೀಯ ಭದ್ರತಾ-ಉಗ್ರರ ನಡುವೆ ಗುಂಡಿನ ಚಕಮಕಿ : ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

Monday, November 11th, 2019
Srinagara

ಶ್ರೀನಗರ : ಭಾನುವಾರದಿಂದ ಜಮ್ಮು-ಕಾಶ್ಮೀರದ ಬಂಡಿಪೊರಾದಲ್ಲಿ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಒಟ್ಟು ಇಬ್ಬರು ಉಗ್ರರು ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ. ಭಾನುವಾರ ಲಾದಾರ ಗ್ರಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಹಾಗೆಯೇ ಇಂದು ಬೆಳಗ್ಗೆ ಇನ್ನೋರ್ವ ಉಗ್ರ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರು ಕಾಶ್ಮೀರದಲ್ಲಿ ಅಡಗಿ ಕುಳಿತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ ಭದ್ರತಾ ಪಡೆ ಸಿಬ್ಬಂದಿ ಹುಡುಕಾಟ ಕಾರ್ಯಾಚರಣೆ ಆರಂಭಿಸಿದರು. […]

ಅಯೋಧ್ಯೆ ತೀರ್ಪು : ದೆಹಲಿಯಲ್ಲಿ ನಡೆದ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಪಾಲ್ಘೊಂಡ ಪೇಜಾವರ ಶ್ರೀ

Monday, November 11th, 2019
Sri-Pejawar

ಉಡುಪಿ : ಸುಪ್ರೀಂಕೋರ್ಟ್ ಶನಿವಾರದಂದು ಅಯೋಧ್ಯೆ ಕುರಿತ ತೀರ್ಪು ನೀಡಿದ ಹಿನ್ನೆಲೆ ಭಾನುವಾರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂದೂ ಸಂತರು, ಮುಸ್ಲಿಂ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಉಡುಪಿಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಪಾಲ್ಗೊಂಡರು. ಧಾನಮಂತ್ರಿಗಳ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಅಯೋಧ್ಯೆ ಕುರಿತು ತೀರ್ಪು ಬರುವುದಕ್ಕೂ ಮುನ್ನ ಹಾಗೂ ತೀರ್ಪು ಬಂದ ಬಳಿಯ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ಪ್ರಮುಖ ಸಂತರು, ವಿಶ್ವ ಹಿಂದೂ ಪರಿಷತ್ ಮುಖಂಡರ […]

ಐಎಂಎ ವಂಚನೆ ಪ್ರಕರಣ : ಬೇನಾಮಿ ಆಸ್ತಿ, 200 ಕೋಟಿಯ ಫಾರ್ಮ್ ಹೌಸ್, ಬಂಗಲೆಗಳು ಪತ್ತೆ

Monday, November 11th, 2019
IMA

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಿಗೆ ಈಗ ನಡುಕ ಶುರುವಾಗಿದೆ. ಐಎಂಎ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿ 13 ಮಂದಿಯ ಮೇಲೆ ಎಫ್‍ಐಆರ್ ಮೇಲೆ ದಾಖಲು ಮಾಡಿದ್ದಾರೆ. ಸಿಬಿಐ ಅಧಿಕಾರಿಗಳು ಡಿಸಿ ವಿಜಯ್ ಶಂಕರ್ ಮನೆ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಬೇನಾಮಿ ಆಸ್ತಿ ಪತ್ರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಬೇನಾಮಿ ಆಸ್ತಿಯ ಹುಡುಕಿ ಹೊರಟ ಸಿಬಿಐ ಅಧಿಕಾರಿಗಳಿಗೆ ಶಾಕ್ ದೊರೆತಿದ್ದು, ಚಿತ್ತೂರಿನಲ್ಲಿ ಬೇನಾಮಿ ಪ್ರಾಪರ್ಟಿ ಪತ್ತೆಯಾಗಿದೆ. […]

ಬೆಂಗಳೂರಿನ ನೈಸ್​ ರಸ್ತೆಯಲ್ಲಿ ಮುಂಜಾನೆ ಹೊತ್ತಿ ಉರಿದ ಕಾರು : ಅಪಾಯದಿಂದ ಪಾರಾದ ಪ್ರಯಾಣಿಕರು

Monday, November 11th, 2019
car

ಬೆಂಗಳೂರು : ಕುಟುಂಬ ಸಮೇತ ಮೈಸೂರಿಗೆ ಪ್ರಯಾಣಿಸುತ್ತಿದ್ದವರ ಕಾರು ನೈಸ್ ರಸ್ತೆಯಲ್ಲಿ ಹಠಾತ್ ಬೆಂಕಿ ಹರಡಿ ಹೊತ್ತು ಉರಿಯಿತು. ಮೈಸೂರು ಮಾರ್ಗದಲ್ಲಿ ವೃಷಾಭಾವತಿ ಬ್ರಿಡ್ಜ್ ಬಳಿ ತೆರಳುತ್ತಿದ್ದ ವೇಳೆ ಕಾರಿನ ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡಿತು. ನಂತರ ಬೆಂಕಿ ಇಡೀ ಕಾರಿಗೆ ಹರಡುತ್ತಿತ್ತು. ಕೂಡಲೇ ಚಾಲಕ ಕಾರು ನಿಲ್ಲಿಸಿದ. ತಕ್ಷಣ ಕಾರಿನಲ್ಲಿ ಇದ್ದವರು ಜಿಗಿದು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕುಟುಂಬದ 5 ಮಂದಿ ಮೈಸೂರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಕೂಡಲೇ ಅಗ್ನಿಶಾಮಕ […]

ತುಳುನಾಡ ಬಾಲೆ ಬಂಗಾರ್ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ ಸಂಪನ್ನ

Monday, November 11th, 2019
bavachitra

ಮಂಜೇಶ್ವರ : ತುಳುವೆರೆ ಆಯನೊ ಕೂಟ (ರಿ.) ಹಾಗೂ ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ತುಳುನಾಡ ಬಾಲೆ ಬಂಗಾರ್- 2019 ಮುದ್ದು ಮಕ್ಕಳ ಫೋಟೋ ಸ್ಪರ್ಧೆ- ಸೀಸನ್ 4ರ ಆಯ್ಕೆ ಪ್ರಕ್ರಿಯೆ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಶನಿವಾರ ಅಪರಾಹ್ನ ಬಳಿಕ ಜರಗಿತು. ಈ ವರ್ಷದ ಸ್ಪರ್ಧೆಯಲ್ಲಿ 4 ವರ್ಷದ ಒಳಗಿನ ಸುಮಾರು 70ರಷ್ಟು ಮಕ್ಕಳ ಭಾವಚಿತ್ರಗಳು ಸ್ವಿಕೃತಿಗೊಂಡಿತ್ತು. ಕಾಸರಗೋಡು , ದಕ್ಷಿಣ ಕನ್ನಡ, ಕೊಡಗು,ಉಡುಪಿ ಜಿಲ್ಲೆಯ […]

ನಿಟ್ಟೂರು ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

Monday, November 11th, 2019
karadi

ಮಡಿಕೇರಿ : ವಿರಾಜಪೇಟೆ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹಗಲು ಹೊತ್ತಿನಲ್ಲೇ ಕರಡಿ ರಾಜಾರೋಷವಾಗಿ ನಿಟ್ಟೂರು ಗ್ರಾಮದ ರಸ್ತೆಯಲ್ಲಿ ನಡೆದು ಬರುತ್ತಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಡಾನೆ ಮತ್ತು ಹುಲಿ ದಾಳಿಯಿಂದ ಕಂಗೆಟ್ಟಿದ್ದ ಊರಿನ ಜನ ಇದೀಗ ಕರಡಿಯ ಆಗಮನದಿಂದ ಮತ್ತಷ್ಟು ಭಯ ಭೀತರಾಗಿದ್ದಾರೆ.  

ಯುವತಿಯನ್ನು ವಂಚಿಸಿದ ನಕಲಿ ಐಪಿಎಸ್ ಅಧಿಕಾರಿ ಬಂಧನ

Monday, November 11th, 2019
mithun

ಮಡಿಕೇರಿ : ನಕಲಿ ಐಪಿಎಸ್ ಅಧಿಕಾರಿಯೊಬ್ಬ ಯುವತಿಯೊಬ್ಬಳನ್ನು ವಿವಾಹವಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಂಚಕರ ತಂಡವೊಂದನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ. ಮಿಥುನ್ (21), ಮನೋಜ್ (30), ಅಬು ತಾಹೀರ್ (31) ಹಾಗೂ ವಿನೋದ್ (27) ಐಪಿಎಸ್ ಅಧಿಕಾರಿಗಳಂತೆ ಯುವತಿಯ ಮನೆಯವರ ಮುಂದೆ ಡ್ರಾಮಾ ಮಾಡಲು ಹೋಗಿ ಬಂಧಿತರಾಗಿರುವ ಆರೋಪಿಗಳು. ಕೇರಳ ರಾಜ್ಯದ ತ್ರಿಶೂರ್‌ನ ಮಿಥುನ್ ಎಂಬಾತ ನಾನೊಬ್ಬ ಐಪಿಎಸ್ ಅಧಿಕಾರಿ ಎಂದು ನಂಬಿಸಿ ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ಮದುವೆ ಬಳಿಕ ಆತನ ಬಗ್ಗೆ ತಿಳಿದು […]

ಇಂದಿನ ರಾಶಿ ಫಲ : ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿಅಭಿವೃದ್ಧಿ

Monday, November 11th, 2019
vruchika-rashi

ಶ್ರೀ ಚಾಮುಂಡೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ ನಕ್ಷತ್ರ : ಅಶ್ವಿನಿ ಋತು : ಶರದ್ ರಾಹುಕಾಲ 07:55 – 09:21 ಗುಳಿಕ ಕಾಲ 13:41 – 15:07 ಸೂರ್ಯೋದಯ 06:28:25 ಸೂರ್ಯಾಸ್ತ 18:00:29 ತಿಥಿ : ಚತುರ್ದಶಿ ಪಕ್ಷ : ಶುಕ್ಲ ಮೇಷ ರಾಶಿ ಉತ್ತಮ ಆದಾಯ ಗಳಿಕೆಯಿಂದ ಸಂತೃಪ್ತ […]