10ರಂದು ಮಲ್ಟಿಪ್ಲೆಕ್ಸ್ ಅರ್ಬನ್ ಗ್ರೀನ್ ಲೋಕಾರ್ಪಣೆ
Saturday, February 8th, 2014ಬೆಂಗಳೂರು: ನಗರದಲ್ಲಿ ಮನೆ ಮಾಡಿಕೊಂಡವರಿಗೆ ಕೈತೋಟ ಮಾಡಿಕೊಂಡು ಸೊಪ್ಪು, ತರಕಾರಿ ಬೆಳೆಸುವ ಆಸಕ್ತಿ. ಇಂತಹ ಕೈತೋಟ ಆಸಕ್ತಿಪ್ರಿಯರಿಗಾಗಿ ಮಲ್ಟಿಪ್ಲೆಕ್ಸ್ ಅರ್ಬನ್ ಗ್ರೀನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ‘ಮಲ್ಟಿಪ್ಲೆಕ್ಸ್ ಅರ್ಬನ್ ಗ್ರೀನ್’ ಎಂಬ ಹೊಸ ಯೋಜನೆಯ ತಯಾರಿ ನಡೆಸಿದೆ. ಇದನ್ನು ಫೆ.10ರಂದು ಹೊಟೇಲ್ ಲಲಿತ್ ಅಶೋಕ್ನಲ್ಲಿ ನಡೆಯುವ ‘ಇಂಡಿಯಾ ಬಯೋ’ ವಸ್ತುಪ್ರದರ್ಶನದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಕಂಪನಿ ನಿರ್ದೇಶಕ ಮಹೇಶ್ ಜಿ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದು ಮನೆಗಳಲ್ಲೇ ಸತ್ವಯುತ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿಗಳನ್ನು ಬೆಳೆಯಲು ಪ್ರೇರೇಪಿಸುವ ಕಾರ್ಯಕ್ರಮ. […]