ಮೂಡುಬಿದಿರಿ ಪೊಲೀಸ್ ಠಾಣೆ ಹೆಡ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಸಾವು

Wednesday, January 5th, 2022
santhosh-PC

ಮಂಗಳೂರು: ಮೂಡುಬಿದಿರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ಸಂತೋಷ್ 36 ಮೃತರು. ಅಪರಾಧ ಪ್ರಕರಣವೊಂದರ ತನಿಖೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಹೋಗಿದ್ದರು. ಡ್ಯೂಟಿಯಲ್ಲಿದ್ದ ಸಂತೋಷ್ಗೆ ಮಂಗಳವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಸಂತೋಷ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಲಿಲ್ಲ. ಸೊರಬ ಮೂಲದ ಸಂತೋಷ್, ಮಂಗಳೂರಿ‌ನಲ್ಲಿ 12 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಸಚಿವ ವಿ. ಸುನಿಲ್‌ಕುಮಾರ್ ಭೇಟಿ

Wednesday, January 5th, 2022
Tulu-Academy

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಇಲಾಖೆಯ ರಾಜ್ಯ ಸಚಿವರಾದ ವಿ. ಸುನಿಲ್‌ಕುಮಾರ್ ಜ. 5ರಂದು ಭೇಟಿ ನೀಡಿ ತುಳು ಭವನದ ಅಪೂರ್ಣ ಕಾಮಗಾರಿ ಹಾಗೂ ವಿವಿಧ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಿದರು. ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅವರು ಅಕಾಡೆಮಿಯ ಬಗ್ಗೆ ಮಾಹಿತಿ ನೀಡಿ, ತುಳು ಭವನ ಸಂಪೂರ್ಣಗೊಳ್ಳಲು ಮಂಜೂರಾಗಿರುವ ರೂ. 3.6 ಕೋಟಿ ಸಹಿತ ಹೆಚ್ಚುವರಿಯಾಗಿ 2 ಕೋ. ರೂ.ವಿನ ಅಗತ್ಯವಿದೆ. ಇದು ಸಂಪೂರ್ಣ […]

36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟನೆ : ಗ್ರಾಮೀಣ ಪತ್ರಕರ್ತರ ಆರೋಗ್ಯ ಕಾರ್ಡು ಬಸ್‌ಪಾಸ್ ಸೌಲಭ್ಯಗಳಿಗೆ ಬಜೆಟ್‌ನಲ್ಲಿ ಆದ್ಯತೆ

Tuesday, January 4th, 2022
Kalburgi-Working-Journalist

ಕಲಬುರಗಿ : ಸಣ್ಣ ಪತ್ರಿಕೆಗಳು ಪ್ರಸಾರದಲ್ಲಿ ಕಡಿಮೆ ಸಂಖ್ಯೆ ಹೊಂದಿದ್ದರೂ ಕೂಡ ಅಲ್ಲಿನ ಸುದ್ದಿ,ಲೇಖನ,ಅಂಕಣಗಳ ಮೌಲ್ಯ ದೊಡ್ಡದು.ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು, ಬಸ್‌ಪಾಸ್ ಸೇರಿದಂತೆ ಇತರ ಸೌಲಭ್ಯಗಳಿಗೆ ಬರುವ ಬಜೆಟ್‌‌ನಲ್ಲಿ ಆದ್ಯತೆ ನೀಡಲಾಗುವುದು.ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಹಾಗೂ ಕೋಶಕ್ಕೆ ವಾರಾಂತ್ಯದೊಳಗೆ ಪೂರ್ಣ ನೇಮಕಾತಿ ಮಾಡಿ 3 ಸಾವಿರ ಕೋಟಿ ರೂ.ಕ್ರಿಯಾ ಯೋಜನೆಯನ್ನು ಒಂದು ವರ್ಷದ ಅವಧಿಯೊಳಗೆ ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಇಲ್ಲಿನ ಬಸವರಾಜಪ್ಪ ಅಪ್ಪ […]

ಖಾಸಗಿ ಹಾಸ್ಟೆಲ್​ ನಲ್ಲಿ 11 ಕೆಜಿ ಗಾಂಜಾ ಪತ್ತೆ, ಒಬ್ಬ ವ್ಯಕ್ತಿಯ ಬಂಧನ

Tuesday, January 4th, 2022
Sullia Ganja

ಸುಳ್ಯ : ಖಾಸಗಿ ಹಾಸ್ಟೆಲ್ ಒಂದರಲ್ಲಿ ಬಾಡಿಗೆದಾರರೊಬ್ಬರು ತಮ್ಮ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದ 11.5 ಕೆಜಿ ಗಾಂಜಾವನ್ನು ಸುಳ್ಯ ಹಾಗು ಪುತ್ತೂರು ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಹಾಸ್ಟೆಲ್‌ನ ಕೊಠಡಿಯೊಂದನ್ನು ಬಾಡಿಗೆಗೆ ಪಡೆದ ಪಲ್ಲತ್ತೂರಿನ ಮೊಯ್ದಿನ್ ಕುಂಞಿ ಎಂಬವರು ತನ್ನ ಕುಟುಂಬದೊಂದಿಗೆ ಇಲ್ಲಿ ವಾಸವಾಗಿದ್ದು, ಇಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಸುಳ್ಯ ಹಾಗೂ ಪುತ್ತೂರಿನ ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ತಪಾಸಣೆ ಸಂದರ್ಭದಲ್ಲಿ […]

ದ.ಕ. ಜಿಲ್ಲಾ ಪತ್ರಕರ್ತರ ಸಂಘದ ವಿಶೇಷ ಸಂಚಿಕೆ ಬಿಡುಗಡೆ

Tuesday, January 4th, 2022
Sadhane Book

ಕಲಬುರಗಿ : ಕಲಬುರಗಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಲಿ.)ಹಾಗೂ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕಲಬುರಗಿ ಇದರ ಸಹಯೋಗದಲ್ಲಿ ನಡೆದ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 3ವರ್ಷಗಳ ಯಶೋಗಾಥೆಯ ಸಾಧನೆ ಸಂಭ್ರಮ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಕಲಬುರಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ ಕೇಂದ್ರ ಸಚಿವ ಭಗವಂತ ಖೂಬಾ,ಸಂಸದ ಉಮೇಶ್ ಜಾಧವ್,ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಕರ್ನಾಟಕ […]

ಎಸ್ಎಸ್ಎಲ್ ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Tuesday, January 4th, 2022
sandeep

ಪುತ್ತೂರು:  ಕೋವಿಡ್ ನಿಯಮಗಳಿಂದ ಬೇಸರಗೊಂಡ  ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿಯೊರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವಿಟ್ಲ ಸಮೀಪದ ಅಳಿಕೆ ಗ್ರಾಮದ ನೆಕ್ಕಿತಪುಣಿ ಎಂಬಲ್ಲಿ ಜ . 4 ರಂದು ನಡೆದಿದೆ. ಅಳಿಕೆ ಗ್ರಾಮದ ನೆಕ್ಕಿತಪುಣಿ ನಿವಾಸಿ ಸವರ್ ಡಿ ಸೋಜ ಅವರ ಪುತ್ರ ಸಂದೀಪ್ ಅನಿಸಿತ್ ಡಿಸೋಜ(15) ಮೃತಪಟ್ಟ ಅಪ್ರಾಪ್ತ ಬಾಲಕ. ಸೋಮವಾರ ರಾತ್ರಿ ತನ್ನ ಕೋಣೆಯಲ್ಲಿ ಮಲಗಿದ್ದ ಈತ ಬೆಳಿಗ್ಗೆ ಎಷ್ಟು ಹೊತ್ತಾದರೂ ಎದ್ದಿರಲಿಲ್ಲ. ಹೀಗಾಗಿ ಮನೆಯವರು ಕೋಣೆಯೊಳಗೆ ಹೋಗಿ ನೋಡಿದಾಗ ಮೃತದೇಹ […]

ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ 9 ವರ್ಷ ಪ್ರಾಯದ ಹುಲಿ ಸಾವು

Tuesday, January 4th, 2022
Tiger oliver

ಮಂಗಳೂರು: ಆರೋಗ್ಯವಂತ ಹಾಗೂ ಸದೃಢವಾಗಿದ್ದ 9 ವರ್ಷ ಪ್ರಾಯದ ಹುಲಿಯೊಂದು ಮಂಗಳವಾರ ಮುಂಜಾನೆ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಮೃತಪಟ್ಟಿದೆ. ಮುಂಜಾನೆವರೆಗೂ ಚುರುಕಾಗಿಯೇ ಇದ್ದು ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಮಾಡಿದ ಪ್ರಯತ್ನ ಫಲಪ್ರದವಾಗಲಿಲ್ಲ.   ಈ ಹುಲಿಯ ಹೆಸರು ಒಲಿವರ್‌. ಇದು ವಿಕ್ರಂ ಹಾಗೂ ಶಾಂಭವಿ ಹುಲಿ ಜೋಡಿಗೆ ಜನಿಸಿದ್ದ ಎರಡು ಮರಿಗಳಲ್ಲೊಂದು. ಇದರ ಪ್ರಾಯ 9 ವರ್ಷ ಆಗಿತ್ತು. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ […]

ಮಂಗಳೂರು ವಿವಿ ಪರೀಕ್ಷಾ ಫಲಿತಾಂಶ- ಸ್ಪಷ್ಟೀಕರಣ

Monday, January 3rd, 2022
MuLinx

ಮಂಗಳೂರು ವಿಶ್ವವಿದ್ಯಾನಿಲಯ ಆಗಸ್ಟ್-ಸೆಪ್ಟೆಂಬರ್ ಹಾಗೂ ಸಪ್ಪೆಂಬರ್-ಅಕ್ಟೋಬರ್ 2021ರಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಫಲಿತಾಂಶಗಳ ಹಿನ್ನಲೆಯಲ್ಲಿ ಕೆಲವು ಪತ್ರಿಕೆಗಳಲ್ಲಿ ಫಲಿತಾಂಶದ ಕುರಿತಾಗಿ ಏಕಪಕ್ಷೀಯ ಅಭಿಪ್ರಾಯಗಳನ್ನೊಳಗೊಂಡ ವರದಿಗಳು ಪ್ರಕಟವಾಗಿದ್ದು, ಗೊಂದಲಕ್ಕೆ ಕಾರಣವಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಸ್ವಂತಿಕೆಯೆಡೆಗೆ ಸಾಗುವ ಉದ್ದೇಶದಿಂದ MuLinx ಎನ್ನುವ Open Source Software ನ್ನು ಬಳಸಿಕೊಂಡು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಸವಾಲುಗಳನ್ನು ಎದುರಿಸಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸಿ ಮಾಡಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವಂತಾಗಲು ಪ್ರಯತ್ನಮಾಡಲಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಒಂದರ ನಂತರ ಒಂದಾಗಿ ನಿರಂತರವಾಗಿ ಪರೀಕ್ಷೆಗಳನ್ನು ನಡೆಸಿರುವುದರಿಂದ […]

ಐಸಿಸ್ ಜೊತೆ ಸಂಪರ್ಕ – ಉಲ್ಲಾಳದ ಮಾಜಿ ಶಾಸಕ ದಿ ಬಿ.ಎಂ ಇದಿನಬ್ಬ ಮೊಮ್ಮಗಳ ಬಂಧನ

Monday, January 3rd, 2022
Deephti-marla

ಮಂಗಳೂರು:  ಉಲ್ಲಾಳದ ಮಾಜಿ ಶಾಸಕ ದಿ ಬಿ.ಎಂ ಇದಿನಬ್ಬ ಅವರ ಮೊಮ್ಮಗನ ಪತ್ನಿ ಮರಿಯಂ ಅಲಿಯಾಸ್ ದೀಪ್ತಿ ಮಾರ್ಲಾ ರನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ಉಗ್ರಗಾಮಿ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪ ಖಚಿತಗೊಂಡ ಬಳಿಕ  ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ಐಎನ್ ಎ ಅಧಿಕಾರಿಗಳು ಉಲ್ಲಾಳದ ನಿವಾಸಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ. ಮರಿಯಂ ಅಲಿಯಾಸ್ ದೀಪ್ತಿ ಮಾರ್ಲಾ ಮಾಜಿ ಶಾಸಕ ಇದಿನಬ್ಬ ಅವರ ಪುತ್ರ ಬಾಷಾ ಅವರ ಮಗ ಅನಾಸ್ ಅಬ್ದುಲ್ ರಹಮಾನ್ […]

ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಕಳಕೊಂಡ ಯುವಕ

Monday, January 3rd, 2022
chethan

ಮಂಗಳೂರು : ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಪ್ರಾಣವನ್ನೇ  ಕಳೆದುಕೊಂಡಿರುವ ಘಟನೆ ಮಂಗಳೂರಿನ  ಜೋಕಟ್ಟೆಯಲ್ಲಿ  ನಡೆದಿದೆ. ಮೃತಪಟ್ಟ ಯುವಕನನ್ನು ಜೋಕಟ್ಟೆ ನಿವಾಸಿ 21 ವರ್ಷದ ಚೇತನ್ ಎಂದು ಗುರುತಿಸಲಾಗಿದೆ. 2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ ರೈಲಿನ ಶಬ್ದವಾಗುತ್ತಿತ್ತು. ಆದರೆ ಹಳಿಯಲ್ಲಿ ಮರಿಯ ಕಾಲು ಸಿಲುಕಿ ಒದ್ದಾಡುತ್ತಿತ್ತು. ಅಲ್ಲಿಂದಲೇ ಹೋಗುತ್ತಿದ್ದ ಜೋಕಟ್ಟೆ ಯುವಕ ಚೇತನ್ ಇದನ್ನು ನೋಡಿ ಆಡಿನ ಮರಿಯಯನ್ನು ರಕ್ಷಣೆ ಮಾಡುತ್ತಿದ್ದಾಗ ರೈಲು ಬಂದು ಅಪಘಾತಕ್ಕೀಡಾಗಿದ್ದಾನೆ. […]