ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆ ಸ್ಥಾಪನೆ, ಸ್ಥಳೀಯರ ತೀವ್ರ ವಿರೋಧ

Friday, July 2nd, 2021
Sea Food

ಮಂಗಳೂರು:  ಮೂಡುಬಿದಿರೆಯ ನಿಡ್ಡೋಡಿಯಲ್ಲಿ ರಾಜ್ಯ ಸರ್ಕಾರ ಬೃಹತ್ ಸೀಫುಡ್ ಘಟಕ ಸ್ಥಾಪನೆ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆಯ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮೀನುಗಾರಿಕಾ ಸಚಿವ ಅಂಗಾರ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಸ್ಥಳೀಯರಿಗೆ ಮಾಹಿತಿ ನೀಡದೆ ನಿಡ್ಡೋಡಿಗೆ ಪರಿಶೀಲನೆ ನಡೆಸಲು ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದ ಸ್ಥಳೀಯರು ಸಚಿವರು ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗಷ್ಟೇ ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ […]

ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದ ಮಾಜಿ ‌ಸಚಿವ ಅಭಯಚಂದ್ರ ಜೈನ್

Friday, July 2nd, 2021
Abhyachandra Jain

ಮಂಗಳೂರು : ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ‌ಸಚಿವ ಅಭಯಚಂದ್ರ ಜೈನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನನಗಿನ್ನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆಲ್ಲಬೇಕೆಂದರೆ ಯುವಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ನಮ್ಮ ರಾಜಕಾರಣಿಗಳು ಇದನ್ನು ಮರೆತಿರುವುದರಿಂದಲೇ ಕಾಂಗ್ರೆಸ್ಗೆ ಭಾರೀ ಏಟು ಬಿದ್ದಿದೆ. ಆದ್ದರಿಂದ ದೇಶದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ನಾವು ಈ ರೀತಿಯ ಪ್ರಯತ್ನ ಮಾಡಬೇಕು ಎಂದರು. ನಾನು, ಸೊರಕೆ ಹಾಗೂ ರಮಾನಾಥ್‌ ರೈ ಅವರು 35-40 ನೇ […]

ಶಿವಭಾಗ್ ಬಳಿ ಬೀದಿನಾಯಿಗೆ ಗುಂಡು ಹೊಡೆದು ಕೊಂದ ದುಷ್ಕರ್ಮಿ

Friday, July 2nd, 2021
dog

ಮಂಗಳೂರು : ದುಷ್ಕರ್ಮಿಯೋರ್ವ ನಗರದ ಶಿವಭಾಗ್ ಸಮೀಪದ  ಆಭರಣ ಜ್ಯುವೆಲ್ಲರ್ಸ್ ಬಳಿ ಬೀದಿನಾಯಿಗೆ ಗುಂಡು ಹೊಡೆದು ಕೊಂದು ಹಾಕಿರುವ ಘಟನೆ  ಗುರುವಾರ ತಡರಾತ್ರಿ ನಡೆದಿದೆ. ಘಟನೆಯ ನಂತರ ಸ್ಥಳಕ್ಕೆ ತೆರಳಿದ್ದ ಅನಿಮಲ್ ಕೇರ್ ಟ್ರಸ್ಟ್ ಕಾರ್ಯಕರ್ತರು ನಾಯಿಯನ್ನು ಆ್ಯಂಬುಲೆನ್ಸ್ ಮೂಲಕ ನಗರದ ಜೈಲು ರಸ್ತೆಯ ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಾಯಿಯ ದೇಹದಲ್ಲಿ ಬುಲೆಟ್ ಲಭಿಸಿದೆ ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಮಾ ರಮೇಶ್, ಇದೊಂದು ಅಮಾನವೀಯ ಕೃತ್ಯ. ಈ ಘಟನೆ […]

ಗುದನಾಳದಲ್ಲಿ 20,89 ಲಕ್ಷ ಮೌಲ್ಯದ ಅಕ್ರಮ ಚಿನ್ನ ಸಾಗಾಟ, ಆರೋಪಿ ವಶಕ್ಕೆ

Friday, July 2nd, 2021
Illigal Gold

ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20,89,800 ರೂ. ಮೌಲ್ಯದ 430 ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಪತ್ತೆ ಮಾಡಿದ್ದಾರೆ. ಕಾಸರಗೋಡು ನಿವಾಸಿ ದುಬಾಯಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದು, ಈತ ಚಿನ್ನದ ಪೌಡರನ್ನು ಗಮ್ ಬೆರೆಸಿ ಗುದನಾಳದೊಳಗಿಟ್ಟು ಸಾಗಾಟ ಮಾಡಿದ್ದ. ಚಿನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕಸ್ಟಮ್ಸ್‌ನ ಉಪ ಆಯುಕ್ತ ಪ್ರವೀಣ್ ಕಂಡಿ, ಅಧಿಕಾರಿಗಳಾದ ರಾಕೇಶ್‌ಕುಮಾರ್, ವಿಕಾಸ್‌ಕುಮಾರ್, ಬಿಕ್ರಮ್ […]

ವಿವಿ ಕಾಲೇಜು: ಇನ್ನೊವೇಷನ್ ಕ್ಲಬ್ ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ

Friday, July 2nd, 2021
Guru Prasad

ಮಂಗಳೂರು: ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಇನ್ನೊವೇಷನ್ ಕ್ಲಬ್ ವತಿಯಿಂದ “ಕನ್ನಡ ಪತ್ರಿಕಾ ದಿನ” ಆಚರಣೆಯ ಅಂಗವಾಗಿ “ಕನ್ನಡ ಪತ್ರಿಕೆಗಳ ಇತಿಹಾಸ ಮತ್ತು ಪದವಿ ವಿದ್ಯಾರ್ಥಿಗಳಿಗೆ ದಿನಪತ್ರಿಕೆಯ ಉಪಯೋಗಗಳು” ಎಂಬ ವಿಷಯದ ಕುರಿತು ಆನ್‌ಲೈನ್‌ ಸಂವಾದ ಹಮ್ಮಿಕೊಳ್ಳಲಾಗಿತ್ತು. ಇನ್ನೋವೇಷನ್ ಸಂಘದ ಸಹನಿರ್ದೇಶಕ ಡಾ. ಸಿದ್ದರಾಜು ಎಂ.ಎನ್‌ ಮಾತನಾಡುತ್ತಾ, ದಿನ ಪತ್ರಿಕೆ ಎಂಬುದು ಸುದ್ದಿಯ ಜೊತೆಗೆ, ಸಾಹಿತ್ಯ, ವಿಜ್ಞಾನ, ಪದಬಂಧ, ಗಣಿತದ ಸುಡೊಕು, ಸಿನಿಮಾ ರಂಜನೆ ಎಲ್ಲವನ್ನೂ ನೀಡುವ ಅದ್ಭುತ ಮಾಹಿತಿಯ ಕಣಜ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾದರೆ ದಿನ […]

ಛಾಯಾಗ್ರಾಹಕರು, ವೀಡಿಯೋಗ್ರಾಫರ್‌ಗಳಿಗೆ ಲಸಿಕೆ

Friday, July 2nd, 2021
Vaccination

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಫೋಟೋಗ್ರಾಫರ್ಸ್‌ ಮತ್ತು ವೀಡಿಯೋಗ್ರಾಫರ್ಸ್‌ ಆಸೋಸಿಯೇಷನ್‌ , ಜಿಲ್ಲಾ ರೆಡ್‌ ಕ್ರಾಸ್‌ ಮತ್ತು ವಿಶ್ವವಿದ್ಯಾಲಯ ಕಾಲೇಜಿನ ವತಿಯಿಂದ, ಕಾಲೇಜಿನಲ್ಲಿ ಗುರುವಾರ ಛಾಯಾಗ್ರಾಹಕರು ಮತ್ತು ವೀಡಿಯೋಗ್ರಾಫರ್‌ಗಳಿಗೆ ಉಚಿತ ಕೊವಿಡ್‌-19 ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿವರಾಮ ಕಾರಂತ ಸಭಾಭವನದಲ್ಲಿ ನಡೆದ ಶಿಬಿರದಲ್ಲಿ ಸುಮಾರು 200 ಡೋಸ್‌ ಲಸಿಕೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ದಕ್ಷಿಣ ಕನ್ನಡ ಜಿಲ್ಲಾ ರೆಡ್‌ ಕ್ರಾಸ್‌ ಕಾರ್ಯದರ್ಶಿ ಎಸ್‌.ಎ ಪ್ರಭಾಕರ ಶರ್ಮಾ, ರೆಡ್‌ಕ್ರಾಸ್‌ ವಿಪತ್ತು ನಿರ್ವಹಣಾ ಘಟಕದ […]

ನಂದಿನಿ ಹಾಲಿನ ಡೀಲರುಗಳಿಗೆ ಸಹಾಯ ಹಸ್ತ – ಪ್ರತಿ ಕ್ರೇಟಿಗೆ ರೂ.2.40 ರಂತೆ ಹೆಚ್ಚುವರಿ ಲಾಭಾಂಶ ವಿತರಣೆ

Thursday, July 1st, 2021
nandini-milk

ಮಂಗಳೂರು  : ಕೋವಿಡ್-19ರ ಸಂಕಷ್ಠ ಸಂದರ್ಭದಲಿ ಹಾಲು ಮಾರಾಟಗಾರರು (ಡೀಲರುಗಳು) ಗ್ರಾಹಕರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಕಾಲದಲ್ಲಿ ಮಾರಾಟ ಮಾಡುತ್ತಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಡೀಲರುಗಳನ್ನು ಪ್ರೋತ್ಸಾಹಿಸಲು ಹಾಗೂ ಮುಂಜಾಗ್ರತಾ ಕ್ರಮಗಳಿಗೆ ತಗಲುತ್ತಿರುವ ವೆಚ್ಚಕ್ಕಾಗಿ ಸಹಾಯ ಹಸ್ತ ನೀಡಲು ಉದ್ದೇಶಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ 10.06.2021 ರಿಂದ 10.07.2021ರ ಅವಧಿಗೆ ಎಲ್ಲಾ ಮಾದರಿಯ ನಂದಿನಿ ಹಾಲಿನ ಮಾರಾಟದ ಮೇಲೆ ಪ್ರತಿ ಕ್ರೇಟಿಗೆ ರೂ.2.40 (ಪ್ರತೀ ಲೀಟರಿಗೆ ರೂ.0.20ರಂತೆ)ನ್ನು ಡೀಲರುಗಳ ಬ್ಯಾಂಕ್ ಖಾತೆಗೆ […]

ದನ ಕಟ್ಟುವ ವಿಷಯದಲ್ಲಿ ತಂದೆಯಿಂದ ಪೆಟ್ರೋಲ್ ದಾಳಿಗೊಳಗಾಗಿದ್ದ ಮಗ ಸಾವು

Thursday, July 1st, 2021
Vishwanath-Shetty

ಮಂಗಳೂರು : ದನ ಕಟ್ಟುವ ವಿಷಯದಲ್ಲಿ ಉಂಟಾದ ಜಗಳದಲ್ಲಿ ತಂದೆಯೇ ಮಗನ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸ್ವಾಮಿತ್ ಶೆಟ್ಟಿ (25) ಜು.01 ರ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೆಪ್ಪಿನಮೊಗರು ತಾರ್ದೊಲ್ಯದ ದನ ಕಟ್ಟುವ ವಿಷಯದಲ್ಲಿ ತಂದೆಯೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು. ಆರೋಪಿ ತಂದೆ ವಿಶ್ವನಾಥ ಶೆಟ್ಟಿ ಯಾನೆ ತಿಪ್ಪಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಘಟನೆ ನಡೆದಂದೇ ಮಂಗಳೂರು ಗ್ರಾಮಾಂತರ ಪೊಲೀಸರು […]

ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಬಲಿಯಾದವರ ಸಂಖ್ಯೆ 20ಕ್ಕೇರಿಕೆ

Thursday, July 1st, 2021
black fungus

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಬಲಿಯಾದ ಸಂಖ್ಯೆ 20ಕ್ಕೇರಿದೆ. ಇದರಲ್ಲಿ ದ.ಕ.ಜಿಲ್ಲೆಯ 5 ಮತ್ತು ಹೊರಜಿಲ್ಲೆಯ 15 ಮಂದಿ ಸೇರಿದ್ದಾರೆ. ಬುಧವಾರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ ಗೆ ಓರ್ವ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 26 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 7 ದ.ಕ. ಜಿಲ್ಲೆಗೆ ಮತ್ತು 19 ಮಂದಿ ಹೊರಜಿಲ್ಲೆಗೆ ಸೇರಿದವರಾಗಿದ್ದಾರೆ. ಈವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ 36ಕ್ಕೇರಿದೆ.

ಬಸ್ಸಿನ ಕನಿಷ್ಠ ದರ 2 ರೂ ಏರಿಕೆ, ಇಂದಿನಿಂದ ಖಾಸಗಿ ಬಸ್ಸುಗಳ ಸಂಚಾರ ಆರಂಭ

Thursday, July 1st, 2021
Private Bus

ಮಂಗಳೂರು :  ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಸುಮಾರು 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ಸುಗಳ ಸಂಚಾರ ಗುರುವಾರ  ಆರಂಭಗೊಂಡಿದೆ. ಸರಕಾರಿ ಬಸ್ಸುಗಳ ಜತೆಗೆ ಗುರುವಾರ ದಿಂದ ಕೆಲವು ಖಾಸಗಿ ಬಸ್ಸುಗಳೂ ರಸ್ತೆಗಿಳಿದಿವೆ. ಆದರೆ ಕೆಲವು  ಬಸ್ಸುಗಳಲ್ಲಿ ಬೆರಳೆಣಿಕೆಯ ಪ್ರಯಾಣಿಕರಿದ್ದರೆ, ಮತ್ತೆ ಕೆಲವು ಬಸ್ಸುಗಳ ಆಸನಗಳು ಭರ್ತಿಗೊಂಡು ಸಂಚರಿಸುತ್ತಿವೆ. ಡೀಸೆಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಬಸ್ಸು ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘ ಹೇಳಿದ್ದು, ಬಸ್ಸಿನ ಕನಿಷ್ಠ ದರವನ್ನು […]