“ವ್ಯಕ್ತಿಯ ಸೌಂದರ್ಯದಲ್ಲಿ ಕ್ಷೌರಿಕರ ಪಾತ್ರ ಅಪಾರ”

Wednesday, February 5th, 2025
savitha-samaja

ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದ.ಕ ಜಿಲ್ಲಾ ಸವಿತಾ ಸಮಾಜ ಇವರ ಸಹಕಾರದೊಂದಿಗೆ ಸವಿತಾ ಮಹರ್ಷಿ ಜಯಂತಿ ಮಂಗಳವಾರ ನಗರದ ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ್ ಭಂಡಾರಿ ಹೊಸಬೆಟ್ಟು ಮಾತನಾಡಿ, ಸವಿತಾ ಸಮಾಜ ಅತ್ಯಂತ ಕಡಿಮೆ ಜನರನ್ನು ಹೊಂದಿದೆ. ಈ ಸಮಾಜದವರು ಒಂದಾದರೆ ಮಾತ್ರ ಸವಿತಾ ಸಮಾಜದ ಏಳಿಗೆಯಾಗುತ್ತದೆ. ಆದ್ದರಿಂದ ಸವಿತಾ ಸಮಾಜದವರು […]

ರಥಸಪ್ತಮಿಯ ಪ್ರಯುಕ್ತ ರಾಮಕೃಷ್ಣ ಮಠದ ಅಂಗಳದಲ್ಲಿ ಸೂರ್ಯನಮಸ್ಕಾರದ ಅಭ್ಯಾಸ

Tuesday, February 4th, 2025
Ramakrishna-Math-Yoga

ಮಂಗಳೂರು : ನಗರದ ಮಂಗಳಾದೇವಿ ದೇವಸ್ಥಾನ ಸಮೀಪದ ರಾಮಕೃಷ್ಣ ಮಠ ಹಾಗೂ ದೇಲಂಪಾಡಿ ಯೋಗ ಪ್ರತಿಷ್ಠಾನದ ವತಿಯಿಂದ ಮಂಗಳವಾರ ರಥಸಪ್ತಮಿಯ ಪ್ರಯುಕ್ತ ರಾಮಕೃಷ್ಣ ಮಠದ ಅಂಗಳದಲ್ಲಿ ಸೂರ್ಯನಮಸ್ಕಾರದ ಅಭ್ಯಾಸ ಮಾಡಲಾಯಿತು. ಹಾಗೂ ಸೂರ್ಯನಿಗೆ ಅರ್ಘ್ಯವನ್ನು ನೀಡಲಾಯಿತು. ಶ್ರೀ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಸೂರ್ಯನಮಸ್ಕಾರದ ಅಭ್ಯಾಸ ಜರುಗಿತು. ದೇಲಂಪಾಡಿ ಯೋಗದ ಪ್ರತಿಷ್ಠಾನದ ವಿದ್ಯಾರ್ಥಿಗಳು ಹಾಗೂ ಹಲವು ಯೋಗ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಪರಮ ಪೂಜ್ಯ ಸ್ವಾಮಿ ಜಿತಕಾಮಾನಂದ ಜೀ ಮಾಹಾರಾಜ್ ಆಶೀರ್ವಚನ ನೀಡಿದರು […]

ತೀಯಾ ಸಮಾಜ ಮುಂಬಯಿ, ಸತ್ಯನಾರಾಯಣ ಪೂಜೆ, ಅರಸಿನ ಕುಂಕುಮ, ಬೋಳ್ನಾಡು ಕ್ಷೇತ್ರದ ಆಮಂತ್ರಣ ಪತ್ರಿಕೆ ಬಿಡುಗಡೆ

Tuesday, February 4th, 2025
Tiya-samaja Mumbai

ಮುಂಬಯಿ : ಇಂದು ನಿಜವಾಗಿಯೂ ಮಹಿಳಾ ವಿಭಾಗದ ಕಾರ್ಯಕ್ರಮದಂತೆ ಕಾಣುತ್ತದೆ. ಯಾಕೆಂದರೆ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಬಾಗವಹಿಸಿದ ಎಲ್ಲಾ ಕಲಾವಿದರು ಮಹಿಳೆಯರೇ. ಈ ರೀತಿ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವ ಕಾರ್ಯಕ್ರಮ ಸಮಾಜದ ಮಹಿಳಾ ವಿಭಾಗದಿಂದ ನಡೆಯಲಿ ಎಂದು ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಆರ್ ಬೆಳ್ಚಡ ನುಡಿದರು. ತೀಯಾ ಸಮಾಜ ಮಂಬಯಿಯ ಮಹಿಳಾ ವಿಭಾಗದ ವತಿಯಿಂದ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ, ಅರಸಿನ ಕುಂಕುಮ ಹಾಗೂ ಬೋಳ್ನಾಡು ಕ್ಷೇತ್ರದ ಆಮಂತ್ರಣ ಪತ್ರಿಕೆ […]

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಪಾದಾಭಿಷೇಕ

Monday, February 3rd, 2025
dharmasthala-bahubali

ಮಂಗಳೂರು : ದಯೆಯೇ ಧರ್ಮದ ಮೂಲವಾಗಿದ್ದು ದಯೆ ಇದ್ದಲ್ಲಿ ಧರ್ಮ ಇರುತ್ತದೆ ಎಂದು ಕ್ಷಲ್ಲಕ ನಿರ್ವಾಣ ಸಾಗರ ಮುನಿಮಹಾರಾಜರು ಹೇಳಿದರು. ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ನಡೆದ ಪಾದಾಭಿಷೇಕ ಸಂದರ್ಭದಲ್ಲಿ ಅವರು ಮಂಗಲ ಪ್ರವಚನ ನೀಡಿದರು. ಉತ್ತಮ ಸಂಸ್ಕಾರ ಮತ್ತು ಧರ್ಮದ ಮರ್ಮವನ್ನರಿತು ಅನುಷ್ಠಾನದಿಂದ ಆತ್ಮಕಲ್ಯಾಣವಾಗುತ್ತದೆ. ನಾವು ಧರ್ಮವನ್ನು ಕಾಪಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು. ಕ್ಷಲ್ಲಕ ದರ್ಶನಕೀರ್ತಿ ಮುನಿಮಹಾರಾಜರು ಮಾತನಾಡಿ ಚತುರ್ವಿಧ ದಾನಗಳಲ್ಲಿ ಆಹಾರದಾನ ಅತ್ಯಂತ ಶ್ರೇಷ್ಠವಾಗಿದೆ. ಸತ್ಕಾರ್ಯಗಳಿಂದ ಪುಣ್ಯ ಸಂಚಯವಾಗುತ್ತದೆ […]

ವಿಜಯವಾಣಿ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ ಗಿರೀಶ್ ಕೆ.ಎಲ್ ನಿಧನ

Monday, February 3rd, 2025
Girish KL

ಮಂಗಳೂರು: ವಿಜಯವಾಣಿ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ, ಮಂಗಳೂರು ಶಕ್ತಿನಗರ ನಿವಾಸಿ ಗಿರೀಶ್ ಕೆ.ಎಲ್(49) ಸೋಮವಾರ ಹೃದಯಾಘಾತದಿಂದ ನಿಧನರಾದರು. ಶಕ್ತಿ, ಉಷಾಕಿರಣ, ಉದಯವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ವಿಜಯವಾಣಿ ಆರಂಭದಿಂದಲೇ ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ, ಪುತ್ರನನ್ನು ಅಗಲಿದ್ದಾರೆ. ಅವರ ನಿಧನಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ಎಂಡಿ ಡಾ.ಆನಂದ ಸಂಕೇಶ್ವರ ಸಂತಾಪ ವ್ಯಕ್ತಪಡಿಸಿದ್ದಾರೆ.

ತುಳು ಭಾಷೆಯ ಸ್ಥಾನಮಾನಕ್ಕೆ ಶ್ರಮಿಸಿದ ಪತ್ರಕರ್ತ ಶಶಿ ಬಂಡಿಮಾರ್ ನಿಧನಕ್ಕೆ ಪತ್ರಕರ್ತರ ನುಡಿನಮನ

Monday, February 3rd, 2025
Shashi-Bandimar

ಮಂಗಳೂರು : ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯ ಟೈಮ್ಸ್ ಆಫ್ ಕುಡ್ಲದ ಪ್ರಧಾನ ಸಂಪಾದಕ‌ ಶಶಿ ಬಂಡಿಮಾರ್ ಕಳೆದ ಬುಧವಾರ ನಿಧನ ರಾದ ಹಿನ್ನೆಲೆಯಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಸಂತಾಪ ಸೂಚಕ ಸಭೆ ನಡೆಯಿತು.ಟೈಮ್ಸ್ ಆಫ್ ಕುಡ್ಲತುಳು ಪತ್ರಿಕೆಯ ಸಂಪಾದಕ, ನಮ್ಮ ಸಂಘದ ಸಕ್ರಿಯ ಸದಸ್ಯರಾ ಗಿದ್ದು,ತುಳು ಭಾಷೆ ಸಂಸ್ಕೃತಿಯ ಕುರಿತಾಗಿ ತನ್ನ ಪತ್ರಿಕೆಯ ಮೂಲಕ […]

ಪೆದಮಲೆಯಲ್ಲಿ 300 ವರ್ಷಗಳ ಹಳೆಯ ದೈವಸ್ಥಾನ ಪತ್ತೆ

Thursday, January 30th, 2025
Vajillaya

ಮಂಗಳೂರು : ನೀರುಮಾರ್ಗದ ಪೆದಮಲೆ ಗ್ರಾಮದಲ್ಲಿ 300 ವರ್ಷಗಳ ಹಳೆಯ ದೈವಸ್ಥಾನ ಪತ್ತೆಯಾಗಿದೆ, ಮಣ್ಣಿನಡಿ ಹುದುಗಿ ಹೋಗಿದ್ದ ಈ ದೈವ ಸ್ಥಾನ ಈಗ ಪತ್ತೆಯಾಗಿದೆ. ಇದೀಗ ಈ ದೃಶ್ಯವನ್ನು ಕಂಡು ಗ್ರಾಮಸ್ಥರು ತುಳುನಾಡಿನ ಕಾರ್ಣಿಕ ದೈವದ ಇರುವಿಕೆ ಕಂಡು ಬೆಚ್ಚಿ ಬಿದ್ದಿದ್ದಾರೆ. ದೈವದ ಮುನಿಸಿನಿಂದ ತೊಂದರೆಗೀಡಾದ ಗ್ರಾಮಸ್ಥರಿಗೆ ಪ್ರಶ್ನಾಚಿಂತನೆಯಲ್ಲಿ ಈ ಸುಳಿವು ನೀಡಿದೆ. ಈ ಘಟನೆ ನೀರುಮಾರ್ಗದ ಪೆದಮಲೆ ಗ್ರಾಮದಲ್ಲಿ ನಡೆದಿದೆ. ವಾಜಿಲ್ಲಾಯ-ಧೂಮವತಿ ದೈವದ ಕಾರ್ಣಿಕ ಕಂಡು ಗ್ರಾಮಸ್ಥರಿಗೆ ಅಚ್ಚರಿಗೊಂಡಿದ್ದಾರೆ. 300 ವರ್ಷಗಳಿಂದ ಗ್ರಾಮದ ಜನರ ಅರಿವಿಗೆ […]

ತಳಮಟ್ಟದ ಸಂಘಟನೆ ಪಕ್ಷಕ್ಕೆ ಬಲ ತುಂಬಲಿದೆ – ವಿ ಸುನಿಲ್ ಕುಮಾರ್

Thursday, January 30th, 2025
V-Sunil-Kumar

ಹೆಬ್ರಿ : ಕಂದಾಯ ಇಲಾಖೆಯಿಂದ 9/11 ಸೇರಿದಂತೆ ನಿವೇಶನಗಳಿಗೆ ಸಂಬಂಧಿಸಿದ ಇತರ ದಾಖಲೆಗಳನ್ನು ಪಡೆಯುವಲ್ಲಿ ಸಾರ್ವಜನಿಕರಿಗೆ ತೀರಾ ಕಷ್ಟಕರವಾದ ಪರಿಸ್ಥಿತಿಯಲ್ಲಿದ್ದು ಸರ್ಕಾರ ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಬಡವರಿಗೆ ಗ್ರಾಮ ಪಂಚಾಯತ್‌ ಮೂಲಕ ಹಂಚಿಕೆಯಾಗಬೇಕಿದ್ದು ಮನೆ ನಿವೇಶನಗಳು ಮತ್ತು ಮನೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ತಡೆಹಿಡಿದಿರುವ ಕಾಂಗ್ರೆಸ್‌ ಸರ್ಕಾರ, ಖಾಸಗಿಯಾಗಿ ಖರೀದಿ ಮಾಡಿದ ನಿವೇಶನಗಳಲ್ಲಿ ಕೂಡ ಮನೆ ನಿರ್ಮಾಣ ಮಾಡದ ಪರಿಸ್ಥಿತಿಯನ್ನು ತಂದೊಡ್ಡಿದೆ. ಗ್ಯಾರೆಂಟಿಗಳ ಪ್ರಚಾರದೊಂದಿಗೆ ಬಡವರಿಗೆ ಮಂಕುಬೂದಿ ಎರಚಿ ಸರ್ಕಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. […]

ಮಾಡೂರು ಶ್ರೀ ಪಾಡಂಗರ ಭಗವತಿ ಕ್ಷೇತ್ರದಲ್ಲಿ ಫೆಬ್ರವರಿ 5 ರಿಂದ 10ರ ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶಶೋತ್ಸವ

Thursday, January 30th, 2025
Maduru-Bhagavati

ಮಂಗಳೂರು : ಮಾಡೂರು ಶ್ರೀ ಪಾಡಂಗರ ಭಗವತಿ ಕ್ಷೇತ್ರವು ನವೀಕರಣಗೊಂಡು ಪುನರ್ ಪ್ರತಿಷ್ಠಾ ಬ್ರಹ್ಮಕಲಶಾದಿಗಳು 2025ರ ಫೆಬ್ರವರಿ 5 ರಿಂದ 10ರ ವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿ ಅಶೋಕ್ ಉಚ್ಚಿಲ್ ಹೇಳಿದರು. ಅವರು ಗುರುವಾರ ಮಂಗಳೂರು ಪತ್ರಿಕಾಭನದಲ್ಲಿ ನಡೆದ ಪ್ರತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ಫೆಬ್ರವರಿ 5 ರಂದು ಬೀರಿ ಶ್ರೀ ಗಣೇಶ ಮಂದಿರದಿಂದ ಕುಣಿತ ಭಜನೆಯೊಂದಿಗೆ ಶೋಬಾಯಾತ್ರೆ ನಡೆಯಲಿದೆ . […]

“ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆಯ ಪ್ರಧಾನ ಸಂಪಾದಕ ಶಶಿ ಆರ್. ಬಂಡಿಮಾರ್ ಇನ್ನಿಲ್ಲ

Thursday, January 30th, 2025
Shashi- R Bandimar

ಮಂಗಳೂರು: “ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆಯ ಪ್ರಧಾನ ಸಂಪಾದಕ ಶಶಿ ಆರ್. ಬಂಡಿಮಾರ್ (41) ಬುಧವಾರ ರಾತ್ರಿ ನಾಗಾಲ್ಯಾಂಡ್ ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ತಾಯಿ, ಪತ್ನಿ, ಸಹೋದರಿ, ಇಬ್ಬರು ಸಹೋದರರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ತುಳು ಸಂಸ್ಕೃತಿ ಆಚಾರ ವಿಚಾರದ ಉಳಿವಿಗಾಗಿ ಶ್ರಮಿಸಿ “ಟೈಮ್ಸ್ ಆಫ್ ಕುಡ್ಲ” ಎಂಬ ತುಳು ವಾರಪತ್ರಿಕೆಯನ್ನು 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು. ಸಣ್ಣ ಕೈಗಾರಿಕೆಯಲ್ಲೂ, ಆತಿಥ್ಯ ಕ್ಷೇತ್ರ ದಲ್ಲೂ ಸಕ್ರಿಯವಾಗಿದ್ದ ಅವರು ನಾಗಾಲ್ಯಾಂಡ್ ನಲ್ಲಿ ತನ್ನ […]