ಸುಳ್ಯ ದ ಅಂತಾರಾಜ್ಯ ರಸ್ತೆಯಲ್ಲಿ ಕಾಡಾನೆ ಓಡಾಟ, ತಪ್ಪಿಸಿಕೊಂಡ ಬೈಕ್ ಸವಾರರು

Friday, November 10th, 2023
Sullia-Elephant

ಸುಳ್ಯ : ಜಾಲ್ಸೂರು – ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಎದುರಿನಿಂದ ಬಂದ ಬೈಕ್ ಸವಾರರು ಕೂದಳೆಲೆ ಅಂತರದಿಂದ ಪಾರಾದ ಘಟನೆ ಪಂಜಿಕಲ್ಲಿನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಶುಕ್ರವಾರ ಕಾಡಾನೆಯೊಂದು ಪಂಜಿಕಲ್ಲಿನ ಬಳಿ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷಗೊಂಡಿದೆ. ಅಂತರ್‌ ರಾಜ್ಯ ರಸ್ತೆಯಲ್ಲಿ ಆನೆ ನಡೆದುಕೊಂಡು ಬರುತ್ತಿದ್ದ ವೇಳೆ ಈ ರಸ್ತೆಯಾಗಿ ಬಂದ ಬೈಕ್ ಸವಾರರು ತಿರುವಿನಲ್ಲಿ ಕೂದಳೆಲೆ ಅಂತರದಲ್ಲಿ ಕಾಡಾನೆಯ ದಾಳಿಯಿಂದ ಪಾರಾಗಿದ್ದಾರೆ. ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಪರಿಸರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು […]

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ

Friday, November 10th, 2023
BY-Vijayendra

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರಿಗೆ ಬಿವೈ ವಿಜಯೇಂದ್ರ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ ಹಾಗೂ ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ […]

ದಕ್ಷಿಣ ಕನ್ನಡ : ಬ್ಯಾಂಕಿಂಗ್ ತೊಟ್ಟಿಲುವಿನಿಂದ ಬ್ಯಾಂಕಿಂಗ್ ವಂಚನೆಯ ಮಜಲುವರೆಗೆ

Friday, November 10th, 2023
bank-fraud

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ನ್ಯಾಯಾಲಯ, ಬ್ಯಾಂಕಿಂಗ್ ವಂಚನೆಯ ಪ್ರಕರಣಗಳಿಗೆ ನೀರೆರೆಯುವಂತೆ ಸಾಗುತ್ತಿದ್ದು, ಬ್ಯಾಂಕ್ ಸಾಲ ವಸೂಲಾತಿ ಪ್ರಕ್ರಿಯೆ ಅರ್ಜಿಗಳನ್ನು ಸುಸ್ಥಿದಾರರಿಗೆ ನೋಟೀಸು ಜ್ಯಾರಿಗೊಳಿಸದೆಯೇ ಮತ್ತು ಕನಿಷ್ಟ ಸಲ್ಲಿಕೆಯಾದ ದಾಖಲೆಗಳನ್ನು ಪರಿಶೀಲಿಸದೆ, ಬ್ಯಾಂಕ್ ವಂಚನೆಯ ಬಗ್ಗೆಗಿನ ಪೂರಕ ಧಾರಾಳ ಸಾಕ್ಸ್ಯಧಾರಗಳ ಲಭ್ಯತೆಯ ಹೊರತಾಗಿಯೂ ಕೂಡಾ ಪೊಲೀಸ್ ಇಲಾಖೆ ಪ್ರಥಮ ವರ್ತಮಾನವಾದ ಪ್ರಕರಣಗಳಲ್ಲಿ ದೋಷ ನಿರಾರೋಪಣ, ಬಿ. ವರದಿ ಸಲ್ಲಿಸಿ ಕೈ ತೊಳೆದುಕೊಳ್ಳುವ ಮಟ್ಟಿಗೆ ಇಳಿದಿದೆ. ದ.ಕ ಮಂಗಳೂರು ಪೀಪಲ್ಸ್ ಯೂನಿಯನ್ ಪಾರ್ ಸಿವಿಲ್ ಲಿಬರ್ಟೀಸ್ […]

ಸಹಜ್ ಕೆ.ವಿ. ಅವರಿಗೆ ಎನ್ಐಟಿಕೆ ಯಿಂದ ಡಾಕ್ಟರೇಟ್ ಪದವಿ

Friday, November 10th, 2023
Sahaj-KV

ಮಂಗಳೂರುಃ ಇಲ್ಲಿನ ಪ್ರತಿಷ್ಠಿತ ನೇಶನಲ್ ಇನ್ಸಿಟ್ಯೂಟ್ ಆಪ್ ಟೆಕ್ನಲಾಜಿ- ಕರ್ನಾಟಕ ( ಎನ್ಐಟಿಕೆ ) ಜಲ ಸಂಬಂಧಿ ಸಂಶೋಧನೆಗಾಗಿ ಸಹಜ್ ಕೆ.ವಿ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ. ಜಲ ಸಂಶೋಧನೆ ಮತ್ತು ಸಾಗರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಾರಿಜ ಅವರ ಉಪಸ್ಥಿತಿಯಲ್ಲಿ ನವೆಂಬರ್ 4ರಂದು ಸುರತ್ಕಲ್ ನಲ್ಲಿ ನಡೆದ ಎನ್ಐಟಿಕೆ 21ನೇ ಘಟಿಕೋತ್ಸವದಲ್ಲಿ ಸಹಜ್ ಕೆ.ವಿ. ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು. ಸಹಜ್ ಅವರು ಇಲ್ಲಿನ ಕೊಟ್ಟಾರ ಪಡುಬೆಟ್ಟು ಕಾಂತಪ್ಪ […]

ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಚೂರಿ ಇರಿತ, ಕರ್ನಾಟಕ ಬ್ಯಾಂಕ್​ ಜನರಲ್ ಮ್ಯಾನೇಜರ್ ಸಾವು

Thursday, November 9th, 2023
ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಚೂರಿ ಇರಿತ, ಕರ್ನಾಟಕ ಬ್ಯಾಂಕ್​ ಜನರಲ್ ಮ್ಯಾನೇಜರ್ ಸಾವು

ಮಂಗಳೂರು: ಕರ್ನಾಟಕ ಬ್ಯಾಂಕ್​ ನ ಪ್ರಧಾನ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ವಾದಿರಾಜ ಕೆ.ಎ(51) ಬೊಂದೇಲ್​ನಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ಹೊಟ್ಟೆ ಮತ್ತುಕುತ್ತಿಗೆ ಮೇಲೆ ಚೂರಿ ಇರಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಗರ ಹೊರವಲಯದ ಬೊಂದೇಲ್​ನಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ಕತ್ತುಕೊಯ್ದ ಸ್ಥಿತಿಯಲ್ಲಿ ಕರ್ನಾಟಕ ಬ್ಯಾಂಕ್​ನ ಜನರಲ್ ಮ್ಯಾನೇಜರ್ ಪತ್ತೆಯಾಗಿದ್ದು, ಇದೊಂದು ಕೊಲೆ ಯತ್ನವೋ ಅಥವಾ ತಾವೇ ಆತ್ಮಹತ್ಯೆ ಮಾಡಿಕೊಂಡರೋ ಎನ್ನುವ ಬಗ್ಗೆ ಸಂಶಯ ಮೂಡಿದೆ. ವಾದಿರಾಜ ಅವರ ಪತ್ನಿ ಮಕ್ಕಳು ಹೊರಗಡೆ ಹೋಗಿದ್ದಾಗ ಈ ಘಟನೆ ನಡೆದಿದ್ದು, […]

ಮಹಿಳೆಯರು ನೀರು ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ : ನಳಿನ್ ಕುಮಾರ್ ಕಟೀಲ್

Thursday, November 9th, 2023
Jala-Deepavali

ಮಂಗಳೂರು : ನೀರು ನಿಸರ್ಗದ ಅಮೂಲ್ಯವಾದ ಕೊಡುಗೆ, ಮನುಷ್ಯ ಜೀವಿಸಲು ಆಹಾರಕ್ಕಿಂತ ನೀರು ಮಹತ್ವವಾದದ್ದು. ನೀರು ಇಲ್ಲದೆ ಯಾವುದೇ ಜೀವ ಬದುಕಲು ಅಸಾಧ್ಯ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಗುರುವಾರ ತುಂಬೆಯಲ್ಲಿ ಮಹಾನಗರ ಪಾಲಿಕೆ ನೀರು ಸಂಸ್ಕರಣ ಘಟಕದಲ್ಲಿ ನಡೆದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನ, ಅಮೃತ 2.0 ಯೋಜನೆಯಡಿ ನಡೆದ ಜಲ ದೀಪಾವಳಿ “ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿವಿದೆಡೆ ಮಳೆ ಇಲ್ಲದೆ […]

ಜಲ್ಲಿ ಸಾಗಿಸುವ ಲಾರಿ ಕಾರಿಗೆ ಡಿಕ್ಕಿಯಾಗಿ ಕಾರು ಜಖಂ

Thursday, November 9th, 2023
car-accident

ಬಂಟ್ವಾಳ : ಜಲ್ಲಿ ಸಾಗಿಸುವ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರು ಮುಂಬಾಗ ಜಖಂ ಗೋಂಡಿದ್ದು, ಕಾರು ಚಾಲಕ ಅಪಾಯದಿಂದ ಪಾರಾದ ಘಟನೆ ಇಂದು ಬೆಳಿಗ್ಗೆ ಬಂಟ್ವಾಳ ಸಮೀಪದ ಲೊರೆಟ್ಟೋ ಎಂಬಲ್ಲಿ ನಡೆದಿದೆ. ಮೈಸೂರು ಮೂಲದ ಕೃಷ್ಣ ಅರಸ ಎಂಬವರು ಮೂಡಬಿದ್ರೆಗೆ ಸಂಚರಿಸುವಾಗ ಕಾರಿಗೆ ಲಾರಿ ಡಿಕ್ಕಿಯಾಗಿದೆ. ಕೃಷ್ಣ ಅರಸ ಅವರ ಮಗಳು ಮೂಡಬಿದಿರೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ದೀಪಾವಳಿ ರಜೆ ನಿಮಿತ್ತ ಊರಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಮೂಡಬಿದಿರೆಯ ಕಡೆಗೆ ತೆರಳುವ ವೇಳೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ […]

ಯುವತಿಯ ಹನಿಟ್ರ್ಯಾಪ್​ ಕಾಟ, ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ವೀರ ಯೋಧ

Thursday, November 9th, 2023
ಯುವತಿಯ ಹನಿಟ್ರ್ಯಾಪ್​ ಕಾಟ, ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ವೀರ ಯೋಧ

ಮಡಿಕೇರಿ : ದೇಶದ ಗಡಿ ಕಾಯುತ್ತಿದ್ದ ವೀರ ಯೋಧ ಯುವತಿ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡ ಜೀವಿತಾ ಎನ್ನುವಾಕೆ ಯೋಧನಿಗೆ ಹನಿಟ್ರ್ಯಾಪ್​ ಮಾಡಿ ಸಾಯುವಂತೆ ಮಾಡಿದ್ದಾಳೆ. ಮಡಿಕೇರಿ ನಗರದ ಉಕ್ಕುಡ ನಿವಾಸಿ ನಿವೃತ್ತ ಯೋಧ ಸಂದೇಶ್ (38) ಮಹಿಳೆಯ ಹನಿಟ್ರ್ಯಾಪ್​ಗೆ ಹೆದರಿ ಡೆತ್​ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ. ನವೆಂಬರ್ 08 ರಂದು ಮನೆ ಸಮೀಪದ ಪಂಪಿನ ಕೆರೆಯಲ್ಲಿ ಸಂದೇಶ್ ಮೃತದೇಹ ಪತ್ತೆಯಾಗಿದೆ. ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ ಮಾಜಿ ಸೈನಿಕ ಸಂದೇಶ್ ತನ್ನ […]

ಸೌಜನ್ಯ ಪ್ರಕರಣದ ಆರೋಪಿ ಸಂತೋಷ್ ರಾವ್ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ

Wednesday, November 8th, 2023
ಸೌಜನ್ಯ ಪ್ರಕರಣದ ಆರೋಪಿ ಸಂತೋಷ್ ರಾವ್ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ

ಮಂಗಳೂರು : ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಧರ್ಮಸ್ಥಳ ಸಮೀಪದ ಪಾಂಗಾಳದಲ್ಲಿ 2012ರ ಅಕ್ಟೋಬರ್ 10ರಂದು ನಡೆದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಕೊಲೆಪ್ರಕರಣದಲ್ಲಿದ್ದ ಆರೋಪಿ ಸಂತೋಷ್ ರಾವ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯವು ಜುಲೈ 16 ರಂದು ಖುಲಾಸೆಗೊಳಿಸಿತ್ತು ಮತ್ತು ಪ್ರಕರಣದಲ್ಲಿ ಅವರನ್ನು ಬಂಧಿಸಿದ್ದಕ್ಕಾಗಿ ತನಿಖಾಧಿಕಾರಿ ಮತ್ತು ಪ್ರಾಸಿಕ್ಯೂಷನ್ ಅನ್ನು ತರಾಟೆಗೆ ತೆಗೆದುಕೊಂಡಿತ್ತು. ತನಿಖೆಗೆ ಅಡ್ಡಿಪಡಿಸಿದ […]

ಚೈತ್ರಾ ಹಣ ಪಡೆದು ವಂಚನೆ ಪ್ರಕರಣ : ಸಿಸಿಬಿಯಿಂದ 800 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

Wednesday, November 8th, 2023
ಚೈತ್ರಾ ಹಣ ಪಡೆದು ವಂಚನೆ ಪ್ರಕರಣ : ಸಿಸಿಬಿಯಿಂದ 800 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

ಉಡುಪಿ : ಉದ್ಯಮಿಯಿಂದ 5 ಕೋಟಿ ಹಣ ಪಡೆದು ವಂಚನೆ ಮಾಡಿದ್ದ ಚೈತ್ರಾ ಗ್ಯಾಂಗ್​ ಪ್ರಕರಣ ಸಂಬಂಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 9 ಆರೋಪಿಗಳ ವಿರುದ್ಧ ಸಿಸಿಬಿ (CCB) ಅಧಿಕಾರಿಗಳು ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ. ಸಿಸಿಬಿ ಅಧಿಕಾರಿಗಳು 75 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿ ಸುಮಾರು 800 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಚೈತ್ರಾ, ಹಾಲಶ್ರೀ ಸೇರಿ 9 ಮಂದಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ಡಿಜಿಟಲ್ ಸಾಕ್ಷಿಗಳು, ಬ್ಯಾಂಕ್ ಸ್ಟೇಟ್ ಮೆಂಟ್​ಗಳು, ಸಾಂದರ್ಭಿಕ ಸಾಕ್ಷಿಗಳು, ಸ್ವಾಮಿಜಿ ಕಾರು ಚಾಲಕ ಹಣ […]