ನೇತ್ರಾವತಿ ನದಿಯ ಶಂಭೂರು ಎ.ಎಂ‌ಆರ್.ಡ್ಯಾಂ ನ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Saturday, November 4th, 2023
AMR-Dam

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಎ.ಎಂ‌ಆರ್.ಡ್ಯಾಂ ನ ಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ನೇತ್ರಾವತಿ ನದಿಯಲ್ಲಿ ಶವವೊಂದು ತೇಲಾಡುವುದು ಕಂಡು ಬಂದಿದ್ದು, ಎ.ಎಂ‌.ಆರ್.ಡ್ಯಾಂ ನ ಕಾರ್ಮಿಕರು ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ನೀಡಿದ ಮಾಹಿತಿ ಪ್ರಕಾರ ಶವ ಸಂಪೂರ್ಣ ಕೊಳೆತು ಹೋಗಿದ್ದು ಸುಮಾರು 15 ದಿನಗಳ ಹಿಂದೆ ನದಿಗೆ ಬಿದ್ದಿರುವ ಬಗ್ಗೆ ಸಂಶಯವಿದೆ. ಮೃತ ವ್ಯಕ್ತಿ ಪುರುಷ ಅಥವಾ ಮಹಿಳೆಯಾ ಎಂಬುದನ್ನು ಗುರುತು ಹಿಡಿಯಲು ಅಸಾಧ್ಯವಾದ ಪರಿಸ್ಥಿತಿ […]

ನವೆಂಬರ್ 24 ರೊಳಗೆ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ: ಜಯ ಪ್ರಕಾಶ್ ಹೆಗ್ಡೆ

Saturday, November 4th, 2023
ನವೆಂಬರ್ 24 ರೊಳಗೆ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ: ಜಯ ಪ್ರಕಾಶ್ ಹೆಗ್ಡೆ

ಉಡುಪಿ : ವಿವಾದಿತ ಜಾತಿ ಗಣತಿ ವರದಿಯನ್ನು ನವೆಂಬರ್ 24 ರೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಶನಿವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೆಗ್ಡೆ, ಜನಗಣತಿ ಪರ ಅಥವಾ ವಿರೋಧವಾಗಿ ನೀಡಿರುವ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಜಾತಿ ಗಣತಿ ವರದಿಯನ್ನು ಸರ್ಕಾರ ಅಂಗೀಕರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆ ಈ ರೀತಿಯ ಹೇಳಿಕೆ ನೀಡಿದರು. ಜಾತಿ ಗಣತಿ ವರದಿಯನ್ನು ತಿರಸ್ಕರಿಸಲು ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದ […]

ವಿವಾಹಿತ ಮಹಿಳೆಯೋರ್ವರ ಶವ ಬಾವಿಯಲ್ಲಿ ಪತ್ತೆ

Friday, November 3rd, 2023
shashikala

ಉಜಿರೆ : ವಿವಾಹಿತ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ಉಜಿರೆ ಬೆಳಾಲುವಿನ ಮಾಚಾರು ಸಮೀಪ ಕೆಂಪನೊಟ್ಟುವಿನಲ್ಲಿ ವರದಿಯಾಗಿದೆ. ಮಾಚಾರು ನಿವಾಸಿ ಸುಧಾಕರವರ ಪತ್ನಿ ಶಶಿಕಲಾ (27 ) ಮೃತ ಮಹಿಳೆ. ಇದು ಆಕಸ್ಮಿಕ ಘಟನೆಯೇ, ಅಥವಾ ಕೊಲೆಯೇ ಎಂಬ ಬಗ್ಗೆ ಧರ್ಮಸ್ಥಳ ಠಾಣಾ ಪೊಲೀಸರು ಹಾಗೂ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತರಿಗೆ 6 ವರ್ಷದ ಹೆಣ್ಣು ಮಗಳು ಇದ್ದಾಳೆ.

“ಕಾಂಗ್ರೆಸ್ ಸರಕಾರದಿಂದ ಜನರಿಗೆ ತೊಂದರೆ” -ಶಾಸಕ ಡಿ.ವೇದವ್ಯಾಸ ಕಾಮತ್

Friday, November 3rd, 2023
Vedavyas-Kamath

ಮಂಗಳೂರು: ಮಂಗಳೂರಿನಲ್ಲಿ ಸಂಪ್ರದಾಯಿಕ ಮರಳುಗಾರಿಕೆ ನಿಲ್ಲಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ 7 ಮಂದಿ ತಜ್ಞರ ವರದಿಯನ್ನು ತಯಾರಿಸಿ ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಲಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರತ್ಯೇಕ ಮರಳು ನೀತಿಯನ್ನು ಜಾರಿ ಮಾಡುವುದಾಗಿ ಹೇಳಿದ್ದರೂ ಇಲ್ಲಿಯವರೆಗೆ ಆ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಮರಳುಗಾರಿಕೆಯನ್ನೇ ನಂಬಿರುವ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಮರಳನ್ನು ಬ್ಲ್ಯಾಕ್ ಮಾರ್ಕೆಟ್ ನಲ್ಲಿ ದುಪ್ಪಟ್ಟು ಹಣ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಒದಗಿದೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ […]

ತುಲಾಭಾರದ ವೇಳೆ ಅವಘಡ, ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Friday, November 3rd, 2023
lakshmi-hebbalkar

ಉಡುಪಿ : ತುಲಾಭಾರದ ವೇಳೆ ಆದ ಅವಘಡದ ಹಿನ್ನೆಲೆಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ಆರೋಗ್ಯದ ಕುರಿತಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರೀಗಳ ಆರೋಗ್ಯ ವಿಚಾರಿಸಿದರು. ಶ್ರೀಗಳ ಆಪ್ತ ಸಹಾಯಕರಿಗೆ ಕರೆ ಮಾಡಿ ಸ್ವಾಮೀಜಿಗಳ ಆರೋಗ್ಯ ಕುರಿತಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಪಡೆದರು. ಶ್ರೀಗಳಿಗೆ ಸಣ್ಣ ಗಾಯವಾಗಿದ್ದನ್ನು, ಗಾಭರಿಪಡುವಂತದ್ದು ಏನಿಲ್ಲ . ಈಗ ಆರೋಗ್ಯವಾಗಿದ್ದು, ನವದೆಹಲಿಯಿಂದ ಅಯೋಧ್ಯೆಯತ್ತ ಶ್ರೀಗಳು ಪ್ರಯಾಣಿಸುತ್ತಿದ್ದಾರೆ […]

ವರದಕ್ಷಿಣೆ ಕಿರುಕುಳ, ಡೈರಿ ರಿಚ್‌ನ ಐಸ್ ಕ್ರೀಂ ಮಾಲಿಕ ಸೇರಿ ಐವರ ಬಂಧನ

Friday, November 3rd, 2023
dairy-rich-rajesh

ಸುಳ್ಯ : ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ದೊರಕ್ಕಿದ್ದು, ಗೋವಿಂದರಾಜನಗರ ಪೊಲೀಸರು ಘಟನೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಘಟನೆಗೆ ಸಂಭಂದಿಸಿದಂತೆ ಐಶ್ವರ್ಯ ತಾಯಿ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡೈರಿ ರಿಚ್‌ನ ಐಸ್ ಕ್ರೀಂ ಮಾಲಿಕ ರಾಜೇಶ್, ಐಶ್ವರ್ಯಾ ಅತ್ತೆ ಸೀತ, ಮಾವ ಗಿರಿಯಪ್ಪ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮೈ ನ್ನು ಬಂಧಿಸಿದ್ದಾರೆ. ಸಂಸಾರದಲ್ಲಿ ಬಿರುಕಿಗೆ ಪ್ರಚೋದನೆ ನೀಡಿದ್ದ ಸಂಬಂಧಿಕರಾದ ರವೀಂದ್ರ, ಗೀತಾ, ಶಾಲಿನಿ, ಓಂಪ್ರಕಾಶ್ ಎಂಬವರ ಮೇಲೂ ದೂರು ದಾಖಲಾಗಿದೆ. ಮೃತ […]

ಎಂಜಿನಿಯರಿಂಗ್ ವಿದ್ಯಾರ್ಥಿನಿ ಕಾಲೇಜು ಕಟ್ಟಡದ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Thursday, November 2nd, 2023
manya

ಹಾಸನ: ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾಸನದಲ್ಲಿ ಗುರುವಾರ ಹಾಸನದಲ್ಲಿ ನಡೆದಿದೆ. ಮೂಲತಃ ಚನ್ನರಾಯಪಟ್ಟಣ ಸಮೀಪದ ಹೊನ್ನ ಶೆಟ್ಟಿಹಳ್ಳಿ ಗ್ರಾಮದ ಮಾನ್ಯ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿ. ಹಾಸನ ನಗರದ ಹೊರವಲಯದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆಯಲ್ಲಿ ನಕಲು ಮಾಡಿ ಉಪನ್ಯಾಸಕರ ಕೈಗೆ ಸಿಕ್ಕಿ ಬಿದ್ದಿದಳು. ಈ ಹಿನ್ನೆಲೆಯಲ್ಲಿ ಕ್ಷಮಾಪಣಾ ಪತ್ರ ಬರೆದು ಪ್ರಾಂಶುಪಾಲರಿಗೆ ನೀಡುವಂತೆ ಆಕೆಗೆ ಉಪನ್ಯಾಸಕರು […]

ವಿದ್ಯುತ್ ಖಾಸಗೀಕರಣದ ಮೂಲಕ ದೇಶವನ್ನೇ ಕತ್ತಲು ಮಾಡುವ ಹುನ್ನಾರ – ಸುನಿಲ್ ಕುಮಾರ್ ಬಜಾಲ್

Thursday, November 2nd, 2023
citu

ಮಂಗಳೂರು : ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ,ವಿತರಣೆ ಹಾಗೂ ಕಂದಾಯ ಆಕರಣೆ ಇದ್ಯಾವುದನ್ನೂ ಸರಕಾರ ಮಾಡಬಾರದು. ಅವೆಲ್ಲವನ್ನೂ ಖಾಸಗೀಯವರಿಗೆ ವಹಿಸಿ ಸರಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂದು ಕೇಂದ್ರ ಸರಕಾರದ ಅಡಿಯಲ್ಲಿರುವ ನೀತಿ ಆಯೋಗ ಅತ್ಯಂತ ಸ್ಪಷ್ಟವಾಗಿ ಹೇಳಿರುವುದು, ದೇಶದ ಸಂಪತ್ತನ್ನು ಮಾರಲು ಹೊರಟ ಕೇಂದ್ರ ಸರಕಾರದ ಧೋರಣೆ ಏನೆಂಬುದು ಜಗಜ್ಜಾಹೀರಾಗಿದೆ. ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಮೂಲಕ ಇಡೀ ದೇಶವನ್ನೇ ಕತ್ತಲು ಮಾಡಲು ಹೊರಟಿದೆ. ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು […]

ಲಾರಿ ಮಾಲಕರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಬೇಕಿದೆ : ಶಾಸಕ ಡಾ| ವೈ. ಭರತ್ ಶೆಟ್ಟಿ

Thursday, November 2nd, 2023
Truck-owners

ಮಂಗಳೂರು : ‘ಉದ್ಯಮ ವಲಯ ಚೇತರಿಸುತ್ತಿದ್ದರೂ ಲಾರಿ ಮಾಲಕರು ಇನ್ನೂ ಸಂಕಷ್ಟದಲ್ಲಿಯೇ ಇರುವುದು ವಿಪರ್ಯಾಸ. ಲಾರಿ ವ್ಯವಹಾರ ನಷ್ಟದಲ್ಲಿಯೇ ಮುಂದುವರಿಯಬಾರದು. ಸರಕಾರ ಲಾರಿ ಮಾಲಕರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ’ ಎಂದು ಶಾಸಕ ಡಾ| ವೈ. ಭರತ್ ಶೆಟ್ಟಿ ಹೇಳಿದರು. ಅವರು ನ.2 ರ ಗುರುವಾರ ಕುಳಾಯಿಯಲ್ಲಿ ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ (ರಿ.) ಇದರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಜಿಂದಾಲ್ ಮಂಗಳೂರು ಕಲ್ಲಿದ್ದಲು ಘಟಕ ಮುಖ್ಯಸ್ಥ ಎಲ್. ರಾಮನಾಥನ್ ಮಾತನಾಡಿ ‘ಲಾರಿ ಮಾಲಕರ ಹಿತಕ್ಕಾಗಿ ಸಂಘಟನೆಯ […]

ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟುಹಾಕುವ ವೇದಿಕೆಗಳು: ನಟ ಪ್ರಮೋದ್‌ ಶೆಟ್ಟಿ

Thursday, November 2nd, 2023
ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟುಹಾಕುವ ವೇದಿಕೆಗಳು: ನಟ ಪ್ರಮೋದ್‌ ಶೆಟ್ಟಿ

ಬೆಂಗಳೂರು : ಅಂತರ್‌ ಕಾಲೇಜು ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟು ಹಾಕುವ ವೇದಿಕೆಗಳು. ಇಂತಹ ಅಂತರ್‌ ಕಾಲೇಜು ಸ್ಪರ್ಧೆಯ ವೇದಿಕೆಯಿಂದಲೇ ನಾನು ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದು, ಇಂತಹ ವೇದಿಕೆಗಳನ್ನ ತಮ್ಮ ಕಲೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದು ಖ್ಯಾತ ಬಹುಭಾಷ ನಟ ಹಾಗೂ ರಂಗಕರ್ಮಿ ಪ್ರಮೋದ್‌ ಶೆಟ್ಟಿ ಕರೆ ನೀಡಿದರು. ಇಂದು ಜಯನಗರದ ನ್ಯಾಷನಲ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ನಾಟಕ ಸ್ಪರ್ಧೆ ರಂಗವೈಭವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ […]