Blog Archive

ಅಂತರ್‌ ವಿವಿ ಬಾಲ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಹೊಸ ದಾಖಲೆ ಬರೆದ ಆಳ್ವಾಸ್ ವಿದ್ಯಾರ್ಥಿಗಳು

Wednesday, February 14th, 2018
champion

ಮಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಅಂತರ್ ವಿವಿ ಹಾಗೂ ರಾಷ್ಟ್ರೀಯ ಸೀನಿಯರ್‌ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರ ಮತ್ತು ಮಂಗಳೂರು ವಿವಿ ತಂಡವನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕ್ರೀಡಾಪಟುಗಳು ಅಮೋಘ ಸಾಧನೆಯೊಂದಿಗೆ ಹೊಸ ದಾಖಲೆ ಮಾಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಕಳೆದ ಫೆ. 5ರಿಂದ 9ರವರೆಗೆ ಆಂಧ್ರದ ದ್ರಾವಿಡಿಯನ್ ಕುಪ್ಪಂ ವಿವಿಯಲ್ಲಿ ನಡೆದ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ತಂಡದ ಎಲ್ಲ10 ಮಂದಿ ಆಟಗಾರರು ಆಳ್ವಾಸ್‌ನವರಾಗಿದ್ದು, […]

‘ತಿಂಗಳೆ ಪ್ರಶಸ್ತಿ’ಗೆ ಡಾ.ಎಂ ಮೋಹನ ಆಳ್ವ ಆಯ್ಕೆ

Monday, February 12th, 2018
Mohan Alva

ಉಡುಪಿ :  ಕಲಾ-ಸಾಹಿತ್ಯ ಪೋಷಕ ಡಾ.ಎಂ ಮೋಹನ ಆಳ್ವ ಅವರನ್ನು 2018ನೇ ಸಾಲಿನ ‘ತಿಂಗಳೆ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ. ಕಾರ್ಕಳ ತಾಲೂಕಿನ ತಿಂಗಳೆಯ ಇತಿಹಾಸ ಪ್ರಸಿದ್ಧ ನೇಮೋತ್ಸವದ ಸಂದರ್ಭದಲ್ಲಿ ದಿ.ರವೀಂದ್ರ ಹೆಗ್ಡೆ ಇವರಿಂದ ಪ್ರಾರಂಭಿಸಲ್ಪಟ್ಟು ಕಳೆದ 56 ವರ್ಷ ಗಳಿಂದ ನಡೆದುಕೊಂಡು ಬಂದಿರುವ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಮಾ. 8ರಂದು ಡಾ.ಮೋಹನ ಆಳ್ವರಿಗೆ ತಿಂಗಳೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೆಗ್ಡೆ ಮಾಹಿತಿ ನೀಡಿದ್ದಾರೆ.

ಶೋಭಾ ಬ್ರೂಟರಿಗೆ ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ

Monday, January 15th, 2018
shobha

ಮೂಡಬಿದಿರೆ: ಹೊಸದಿಲ್ಲಿಯ ಹಿರಿಯ ಚಿತ್ರ ಕಲಾವಿದೆ ಶೋಭಾ ಬ್ರೂಟ ಅವರಿಗೆ ರವಿವಾರ ಮುಕ್ತಾಯಗೊಂಡ 24ನೇ ವರ್ಷದ ಆಳ್ವಾಸ್‌ ವಿರಾಸತ್‌ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು “ಆಳ್ವಾಸ್‌ ವರ್ಣ ವಿರಾಸತ್‌ 2018′ ಪ್ರಶಸ್ತಿ ಪ್ರದಾನ ಮಾಡಿದರು. ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಶಿಕ್ಷಣ, ಲಲಿತ ಕಲೆಗಳಲ್ಲಿ ಡಿಪ್ಲೊಮಾ ಹೊಂದಿರುವ ಶೋಭಾ ಬ್ರೂಟ ಅವರು ದೇಶದ ವಿವಿಧೆಡೆ ಮಾತ್ರವಲ್ಲದೆ ಆಸ್ಟ್ರೇಲಿಯ, ಅಮೆರಿಕ, ಬೆಲ್ಜಿಯಂ, ಇಂಗ್ಲಂಡ್‌ ದೇಶ ಗಳಲ್ಲಿ ಏಕವ್ಯಕ್ತಿ ಪ್ರದರ್ಶನ […]

ಆಳ್ವಾಸ್ ವರ್ಣ ವಿರಾಸತ್ 2018 ರಾಷ್ಟ್ರೀಯ ಚಿತ್ರಕಲಾ ಶಿಬಿರಕ್ಕೆ ಚಾಲನೆ

Tuesday, January 9th, 2018
Alwas

ಮೂಡುಬಿದಿರೆ: ಆಳ್ವಾಸ್ ವಿರಾಸತ್ 2018ರ ಅಂಗವಾಗಿ `ಆಳ್ವಾಸ್ ವರ್ಣವಿರಾಸತ್ 2018′ ಆರು ದಿನಗಳು ನಡೆಯುವ ರಾಷ್ಟ್ರಮಟ್ಟದ ಸಮಕಾಲೀನ ಚಿತ್ರಕಲಾ ಶಿಬಿರಕ್ಕೆ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು. ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವರ್ಣವಿರಾಸತ್‍ಗೆ ಚಾಲನೆ ನೀಡಿ, ಶುಷ್ಕ ಮನಸ್ಸು ಮರಣವಿದ್ದಂತೆ. ಮನಸ್ಸನ್ನು ಜೀವಂತವಿರಿಸುವ ಕೆಲಸ ಕಲೆ, ಸಂಸ್ಕøತಿ, ಸಾಹಿತ್ಯದಿಂದ ಸಾಧ್ಯ. ನಮ್ಮ ಉದ್ದೇಶ ಮರಣವಾಗಬಾರದು. ಸಕಲ ಜೀವಿಗಳ ಪ್ರೀತಿಸಿ ಬದುಕುವಂತಹ ಜಾಯಮಾನ ನಮ್ಮದಾಗಬೇಕು. ಕಲಾವಿದರು ಜೀವಂತಿಕೆಯನ್ನು ಪ್ರತಿ ಕಲಾವಿದರು ಅಸೀಮ ಭಾವನೆಯಿಂದ […]

ಸ್ನಾತಕೋತ್ತರ ಪರೀಕ್ಷೆ: ಆಳ್ವಾಸ್‌‌‌ ಆಯುರ್ವೇದ ಮೆಡಿಕಲ್‌ ಕಾಲೇಜಿಗೆ ಶೇ. 100 ಫಲಿತಾಂಶ

Monday, January 1st, 2018
Alwas-college

ಮೂಡುಬಿದಿರೆ: 2017-2018ರ ಪರೀಕ್ಷೆಯಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ 2014-2015 ಸಾಲಿನ ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶ ದಾಖಲಿಸಿದ್ದಾರೆ. ಹೌದು…, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ 2017-2018ರ ಸ್ನಾತಕೋತ್ತರ ಪರೀಕ್ಷೆಯಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ 2014- 2015 ಸಾಲಿನ ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶ ದಾಖಲಿಸಿದ್ದು, ಪ್ರಸೂತಿ ಮತ್ತು ಸ್ತ್ರೀರೋಗ ಸ್ನಾತಕೋತ್ತರ ವಿಭಾಗದ ಡಾ. ಶ್ರುತಿ ಲೋಧಿ ಗರಿಷ್ಠ ಅಂಕಗಳನ್ನು ಗಳಿಸಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ. ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ […]

ಆಳ್ವಾಸ್‍ನಲ್ಲಿ ಕ್ರಿಸ್ಮಸ್ ಸಂಭ್ರಮ

Thursday, December 21st, 2017
alwas

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ಕ್ರಿಸ್ಮಸ್ 2017 ಕಾರ್ಯಕ್ರಮವನ್ನು ವಿದ್ಯಾಗಿರಿಯಲ್ಲಿರು ನುಡಿಸಿರಿ ವೇದಿಕೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು. ಮಂಗಳೂರು ಧರ್ಮ ಪ್ರಾಂತದ ಜ್ಯುಡಿಷಿಯಲ್ ವಿಕಾರ್ ವಂ. ವೋಲ್ಟರ್ ಡಿ’ಮೆಲ್ಲೊ ಕ್ರಿಸ್ಮಸ್ ಸಂದೇಶ ನೀಡಿ, ಭಯೋತ್ಪಾದನೆ, ಅಶಾಂತಿಯಂತಹ ಪರಿಸ್ಥಿತಿಯಲ್ಲಿ ಶಾಂತಿಯ ಮರು ಸ್ಥಾಪನೆಯಾಗಬೇಕು. ಹೃದಯಾಂತರಾಳದಲ್ಲಿ ಪ್ರೀತಿ, ವಿಶ್ವಾಸ, ಸಹೋದರತೆಯ ಭಾವನೆ ಪ್ರತಿಯೊಂದು ಮತದ ಜನರಲ್ಲಿ ಮೂಡಬೇಕು. ಹೃದಯವಂತರಾಗಿ ಶಾಂತಿಯನ್ನು ಅನುಭವಿಸುವುದು ಆದ್ಮಾತ್ಮದ ಅನುಭೂತಿ ಪಡೆಯಲು ಸಾಧ್ಯವಾಗುತ್ತದೆ. ದೇವರ ಮೇಲಿನ ಭಕ್ತಿ ಸುಮನಸ್ಸನ್ನು ನೀಡುತ್ತದೆ. ವಿಶ್ವದ ಶಾಂತಿಯ ಪ್ರತೀಕವಾಗಿರುವ […]